ಮನೆ ರಾಷ್ಟ್ರೀಯ ಭಾರ್ತಿ ಏರ್‌ ಟೆಲ್ ರಿಚಾರ್ಜ್‌ ದರ ಹೆಚ್ಚಳ: ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿ

ಭಾರ್ತಿ ಏರ್‌ ಟೆಲ್ ರಿಚಾರ್ಜ್‌ ದರ ಹೆಚ್ಚಳ: ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿ

0

ನವದೆಹಲಿ: ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ವಿವಿಧ ಪ್ಲಾನ್​ಗಳಿಗೆ ನಿನ್ನೆ(ಗುರುವಾರ) ದರ  ಹೆಚ್ಚಿಸಿದ ಬೆನ್ನಲ್ಲೇ ಇಂದು (ಶುಕ್ರವಾರ) ಭಾರ್ತಿ ಏರ್‌ ಟೆಲ್ ಕೂಡ ರಿಚಾರ್ಜ್‌ ದರ ಹೆಚ್ಚಿಸಿದೆ.

Join Our Whatsapp Group

ರಿಲಾಯನ್ಸ್ ಜಿಯೋದ ದರ ಶೇ 12ರಿಂದ  27ರವರೆಗೂ ಏರಿಕೆಯಾದರೆ, ಭಾರ್ತಿ ಏರ್‌ಟೆಲ್ ಶೇ 10-21ರಷ್ಟು ಹೆಚ್ಚಿಸಿದೆ.  ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 3ರಿಂದ ಜಾರಿಗೆ ಬರುವಂತೆ ಏರ್‌ಟೆಲ್‌ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್​ಗಳು ಹೀಗಿವೆ..

 ಅನ್​ ಲಿಮಿಟೆಡ್ ವಾಯ್ಸ್ ಪ್ಲಾನ್:

₹179ರಿಂದ ₹199ಕ್ಕೆ ಹೆಚ್ಚಳ (28 ದಿನ ವ್ಯಾಲಿಡಿಟಿ)

₹455ರಿಂದ ₹509ಕ್ಕೆ ಹೆಚ್ಚಳ (84 ದಿನ ವ್ಯಾಲಿಡಿಟಿ)

₹1,799ರಿಂದ ₹1,999ಕ್ಕೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಡಾಟಾ ಪ್ಲಾನ್​ಗಳು

1 ಜಿಬಿ–₹265ರ ನಿಂದ ₹ 299ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

1.5 ಜಿಬಿ–₹299 ನಿಂದ ₹349ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

2.5 ಜಿಬಿ–₹359 ನಿಂದ ₹409ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

3 ಜಿಬಿ–₹399 ನಿಂದ ₹449ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

1.5ಜಿಬಿ–₹479 ನಿಂದ ₹579ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

2 ಜಿಬಿ–₹549 ನಿಂದ ₹649ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

1.5ಜಿಬಿ–₹719 ನಿಂದ ₹859ಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)

2 ಜಿಬಿ–₹839 ನಿಂದ ₹979ಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)

2 ಜಿಬಿ–₹2,999 ನಿಂದ ₹3,599ಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಹೆಚ್ಚುವರಿ ಡಾಟಾ ದರ

1  ಜಿಬಿ ಹೆಚ್ಚುವರಿ ಡಾಟಾ ದರ ₹19 ನಿಂದ ₹22ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

2 ಜಿಬಿ ಹೆಚ್ಚುವರಿ ಡಾಟಾ ದರ ₹29 ನಿಂದ ₹33ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

4  ಜಿಬಿ ಹೆಚ್ಚುವರಿ ಡಾಟಾಗೆ ₹65 ನಿಂದ ₹77ಗೆ  ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ)

ಹಿಂದಿನ ಲೇಖನಬಿ.ಎಸ್. ಯಡಿಯೂರಪ್ಪ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಕೆ
ಮುಂದಿನ ಲೇಖನನಮ್ಮ ಕುಟುಂಬದ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ: ಡಿ.ಕೆ. ಶಿವಕುಮಾರ್