ಮನೆ ಸುದ್ದಿ ಜಾಲ ಭೀಷ್ಮ್ :ಭಾರತದಿಂದು ಜಗತ್ತಿನಲ್ಲಿ ಮೊದಲ ಸ್ಥಳಾಂತರ ಆಸ್ಪತ್ರೆ ಸಿದ್ಧ

ಭೀಷ್ಮ್ :ಭಾರತದಿಂದು ಜಗತ್ತಿನಲ್ಲಿ ಮೊದಲ ಸ್ಥಳಾಂತರ ಆಸ್ಪತ್ರೆ ಸಿದ್ಧ

0

ಹೊಸದಿಲ್ಲಿ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಏರ್ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ. ಭೀಷ್ಮ್ (ಭಾರತ್ ಹೆಲ್ತ್ ಇನಿಷಿಯೇಟಿವ್ ಫಾರ್ ಸಹಯೋಗ್ ಹಿತ ಆಂಡ್ ಮೈತ್ರಿ) ಯೋಜನೆಯಡಿ ಆರೋಗ್ಯ ಮೈತ್ರಿ ಕ್ಯೂಬ್ ಅನ್ನೋ ಭಾರತ ಸಿದ್ಧಪಡಿಸಿದೆ.

ಇದರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಣ್ಣ ಐಸಿಯು, ವೆಂಟಿಲೇಟರ್, ರಕ್ತ ಪರೀಕ್ಷ ಸಾಧನ, ಎಕ್ಸರೇ ಮಷೀನ್, ಅಡುಗೆಮನೆ ಸೌಲಭ್ಯ, ಆಹಾರ, ನೀರು, ವಸತಿ, ಪವರ್ ಜನರೇಟರ್ ಮತ್ತು ಇತರ ಸೌಲಭ್ಯಗಳು ಆರೋಗ್ಯ ಮೈತ್ರಿ ಕ್ಯೂಬ್ ನಲ್ಲಿ ಇರಲಿವೆ. ಇವುಗಳನ್ನು ಒಟ್ಟು 72 ಕ್ಯೂಬ್ ಗಳಲ್ಲಿ ಪ್ಯಾಕ್ ಮಾಡಿ, ತಲಾ 12 ಕ್ಯೂಬ್ ಗಳಂತೆ ಅವುಗಳನ್ನು ಮೂರು ಫ್ರೇಮ್ಗಳಲ್ಲಿ ಇಟ್ಟು ಬೇರೆಡೆ ಸಾಗಿಸಬಹುದಾಗಿದೆ.

200 ಮಂದಿಗೆ ಚಿಕಿತ್ಸೆ ಆರೋಗ್ಯ ಮೈತ್ರಿ ಕ್ಯೂಬ್ ನಲ್ಲಿ ಒಟ್ಟು 200 ಮಂದಿ ಗಾಯಾಳುಗಳಿಗೆ ನಿರಂತರ 48 ಗಂಟೆಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರಮುಖವಾಗಿ ಇದರಲ್ಲಿ ಬುಲೆಟ್ ನಿಂದ ಗಾಯಗಳಾದ 40 ಮಂದಿ, ತೀವ್ರ ಗಾಯಗಳಾದ 25 ಮಂದಿ, ತೀವ್ರ ಸುಟ್ಟ ಗಾಯಗಳಾದ ಇಪ್ಪತ್ತೈದು ಮಂದಿ, ತಲೆಗೆ ಪೆಟ್ಟಾದ 10 ಮಂದಿ, ಮೂಳೆಮುರಿತ, ಎದೆಗೆ ಗಾಯ, ಬೆನ್ನು ಮೂಳೆಯ ಗಾಯ ಮತ್ತು ಮುರಿತಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಚಿಕಿತ್ಸೆ ನೀಡಬಹುದಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಭೀಷ್ಮ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು ಆನಂತರ ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಕಾರ್ಯಪಡೆಯನ್ನು ರಚಿಸಿತು ಟಿ 20 ಆರೋಗ್ಯ ಸಚಿವರ ಸಮಾವೇಶದ ನೇಪಥ್ಯದಲ್ಲಿ ಗುಜರಾತ್ ನ ಗಾಂಧಿನಗರದಲ್ಲಿ ಆಗಸ್ಟ್ ನಲ್ಲಿ ನಡೆದ ಮೆಡ್ ಟೆಕ್ ಎಕ್ಸ್ ಪೋದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.

ನೈಸರ್ಗಿಕ ವಿಕೋಪ ಅಥವಾ ಮಾನವ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಭಾರತವು ಅಗತ್ಯ ವೈದ್ಯಕೀಯ ಸರಬರಾಜು ಒದಗಿಸುವ ಆರೋಗ್ಯ ಮೈತ್ರಿ ಯೋಜನೆಯನ್ನು ಪ್ರಧಾನಿ ಮೋದಿ ಅವರು ಇದೇ ವರ್ಷದ ಜನವರಿಯಲ್ಲಿ ನಡೆದ ಜಾಗತಿಕ ದಕ್ಷಣ ಶೃಂಗಸಭೆಯಲ್ಲಿ ಘೋಷಿಸಿದರು. ಜುಲೈಯಲ್ಲಿ ಮೊದಲ ಬಾರಿ ಆರೋಗ್ಯ ಮೈತ್ರಿ ಕ್ಯೂಬ್ ಅನ್ನು ಮ್ಯಾನ್ಮಾರ್ ಅಧಿಕಾರಿಗಳಿಗೆ ಪ್ರದರ್ಶಿಸಲಾಯಿತು. ಈ ಕ್ಯೂಬ್ ಗಳನ್ನು ಮ್ಯಾನ್ಮಾರ್ ಗೆ ಭಾರತ ದೇಣಿಗೆ ನೀಡಿದೆ. ಇದೆ ವೇಳೆ ಶ್ರೀಲಂಕಕ್ಕೆ ಒಂದು ಕ್ಯೂಬ್ ನೀಡಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನG20ಗೂ ಮುನ್ನ ಇಂಡೋನೇಷ್ಯಾಕ್ಕೆ ಪ್ರಧಾನಿ ಮೋದಿ
ಮುಂದಿನ ಲೇಖನವಿವಾದಾತ್ಮಕ ಹೇಳಿಕೆ ನೀಡಿರುವ ಉದಯನಿಧಿ : ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ