ಮನೆ ಸುದ್ದಿ ಜಾಲ G20ಗೂ ಮುನ್ನ ಇಂಡೋನೇಷ್ಯಾಕ್ಕೆ ಪ್ರಧಾನಿ ಮೋದಿ

G20ಗೂ ಮುನ್ನ ಇಂಡೋನೇಷ್ಯಾಕ್ಕೆ ಪ್ರಧಾನಿ ಮೋದಿ

0

ಹೊಸದಿಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಗೆ ದೊಡ್ಡಮಟ್ಟದಲ್ಲಿ ಸಿದ್ಧತೆ ನಡೆದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 6 ಮತ್ತು 7ರಂದು ಆಸಿಯಾನ್ ಸಭೆಗೆಂದು ಇಂಡೋನೇಶ್ಯಕ್ಕೆ ತೆರಳಲ್ಲಿದ್ದಾರೆ.

ಜಕಾರ್ತದಲ್ಲಿ ನಡೆಯಲಿರುವ ಆಸಿಯಾನ್ ಭಾರತ ಪೂರ್ವ ಏಷ್ಯಾ ಶೃಂಗಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಶೇಷವೇನೆಂದರೆ ಸೆಪ್ಟೆಂಬರ್ 9 10ರಂದು g20 ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ಅಮೆರಿಕ ಅಧ್ಯಕ್ಷ ಕೂಡ ಭಾರತಕ್ಕೆ ಆಗಮಿಸುತ್ತಿದ್ದು, ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಅಮೆರಿಕದ ಶ್ವೇತ ಭವನ ಬೈಡೆನ್ ಅವರ ಭೇಟಿಯನ್ನು ಖಾತರಿಪಡಿಸಿದೆ. ದ್ವಿಪಕ್ಷಿಯ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ. ಇದಲ್ಲದೆ ಹವಾಮಾನ ಬದಲಾವಣೆ ರಷ್ಯಾ- ಉಕ್ರೇನ್ ಸಂಘರ್ಷಗಳಿಂದ  ಜಾಗತಿಕ ರಾಷ್ಟ್ರಗಳ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಶ್ವೇತ ಭವನ ಪ್ರಕಟನೆಯಲ್ಲಿದೆ ಹೇಳಿದೆ.

ಹಿಂದಿನ ಲೇಖನನವ ದೆಹಲಿ: ಟ್ಯೂಷನ್ ಟೀಚರ್ ಹತ್ಯೆಗೈದ 14 ವರ್ಷದ ಬಾಲಕನ ಬಂಧನ
ಮುಂದಿನ ಲೇಖನಭೀಷ್ಮ್ :ಭಾರತದಿಂದು ಜಗತ್ತಿನಲ್ಲಿ ಮೊದಲ ಸ್ಥಳಾಂತರ ಆಸ್ಪತ್ರೆ ಸಿದ್ಧ