ಮನೆ ಯೋಗಾಸನ ಭೂಧರಾಸನ

ಭೂಧರಾಸನ

0

ಭೂಧರಾಸನದಲ್ಲಿ ಇಡೀ ಶರೀರವು ತಲೆಕೆಳಗಾದ ಇಂಗ್ಲಿಷಿನ ‘v’ ಯನ್ನು ಹೋಲುತ್ತದೆ.

Join Our Whatsapp Group

ಮಾಡುವ ಕ್ರಮ:

1) ಎರಡೂ ಕಾಲೂ ಜೋಡಿಸಿ, ನಮಸ್ಕಾರ ಮುದ್ರೆಯಲ್ಲಿ ಎದೆ ಎತ್ತಿ ನಿಲ್ಲಬೇಕು.

2) ಕಾಲುಗಳನ್ನು ಬದಲಿಸದೇ ನಮಸ್ಕಾರ ಮುದ್ರೆಯಲ್ಲೇ ಕೈಗಳನ್ನು ಮೇಲಕ್ಕೆತ್ತಬೇಕು.

3) ಅನಂತರ ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ ಮಂಡಿಯನ್ನು ಬಗ್ಗಿಸದೇ ಕೈಗಳನ್ನು ನೆಲಕ್ಕೆ ತಗಲಿಸಬೇಕು.

4) ಯಾವುದಾದರೂ ಒಂದು ಕಾಲನ್ನು ಹಿಂದಕ್ಕೆ ಚಾಚಿ ಇನ್ನೊಂದು ಕಾಲನ್ನು ಎರಡು ಕೈಗಳ ನಡುವೆ ಇಡಬೇಕು.

5) ಅನಂತರ ಇನ್ನೊಂದು ಕಾಲನ್ನು ಹಿಂದೆ ಇದ್ದ ಕಾಲಿನೊಂದಿಗೆ ಸೇರಿಸಿ ಇಡೀ ಶರೀರವನ್ನು ನೇರವಾಗಿಡಬೇಕು.

6) ಸೂರ್ಯನಮಸ್ಕಾರ ಸ್ಥಿತಿ 6ರಲ್ಲಿ ವಿವರಿಸಿದಂತೆ ‘ಸಾಷ್ಟಾಂಗ’ಗಳನ್ನು ಮಾತ್ರ ನೆಲಕ್ಕೆ ತಗಲಿಸಬೇಕು.

7) ಅನಂತರ ಸಾಷ್ಟಾಂಗ ಪ್ರಣಿಪಾತಾಸನದಿಂದ ಇಡೀ ಶರೀರವನ್ನು ಸ್ವಲ್ಪ ಮುಂದಕ್ಕೆ ತಂದು ಸೂರ್ಯನಮಸ್ಕಾರ ಸ್ಥಿತಿ 7ರಲ್ಲಿ ವಿವರಿಸಿದಂತೆ ಭುಜಂಗಾಸನವನ್ನು ಮಾಡಬೇಕು.

8) ಅನಂತರ ಸೊಂಟದ ಮೇಲ್ಭಾಗದ ಶರೀರವನ್ನು ಒಳಕ್ಕೆ ತೆಗೆದುಕೊಂಡು ಚಿತ್ರದಲ್ಲಿರುವ ಸ್ಥಿತಿಗೆ ಬರಬೇಕು. ಅದರಂತೆ ಈ ಸ್ಥಿತಿಯಲ್ಲಿ ಎರಡೂ ಕಾಲುಗಳ ಹಿಮ್ಮಡಿಗಳು ನೆಲ ಮುಟ್ಟಿರಬೇಕು, ಮತ್ತು ತಲೆಯನ್ನು ನೆಲಕ್ಕೆ ಮುಟ್ಟಿಸಲು ಆದಷ್ಟೂ ಪ್ರಯತ್ನಿಸಬೇಕು. ಕೈಗಳನ್ನು ನೇರವಾಗಿ ಚಾಚಿರಬೇಕು, ಇಲ್ಲದಿದ್ದರೆ ಭಾರ ಹೆಚ್ಚಾಗಿ ಕೈ ಕುಸಿಯುವುದು.

ಲಾಭಗಳು:

ಕೈ ಮತ್ತು ಕಾಲುಗಳು ಬಲಶಾಲಿಯಾಗುವವು. ಹೊಟ್ಟೆಯ ಬೊಜ್ಜು ಕರಗುವುದಲ್ಲದೆ ತೆಳ್ಳಗೂ ಆಗುವುದು. ಮಧುಮೇಹ ರೋಗಗಳಿಗೆ ಈ ಆಸನ ಹೆಚ್ಚು ಪ್ರಯೋಜನಕಾರಿ.

ಹಿಂದಿನ ಲೇಖನಮೈಗ್ರೇನ್ ತಲೆ ನೋವಿನ ಕಿರಿಕಿರಿಯಿಂದ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ
ಮುಂದಿನ ಲೇಖನಹಾಸ್ಯ