ನಮ್ಮ ಒತ್ತಡದ ಜೀವನ ಶೈಲಿ, ಬದಲಾದ ದಿನಚರಿ ಹಾಗೂ ವ್ಯತ್ಯಾಸವಾದ ಆಹಾರದ ಕ್ರಮದಿಂದಾಗಿ ಅನಾರೋಗ್ಯ ಎಲ್ಲರನ್ನು ಭಾಧಿಸಿದೆ ದೇಹದ ಆರೋಗ್ಯಕ್ಕಾಗಿ ಹಾಗೂ ಮುಖ್ಯವಾಗಿ ಮನಸ್ಸಿನ ಸಮತೋಲನದ ಹಿಡಿತಕ್ಕಾಗಿ ಯೋಗ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತಿದಿನದ ಯೋಗಾಭ್ಯಾಸವು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಹಾಗೂ ದೇಹದ ಸಂಚಲನವನ್ನು ಚುರುಕುಗೊಳಿಸಲು ಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂತಹ ಯೋಗದಲ್ಲಿ ಕೆಲವು ಆಸನಗಳನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ.
ಭುಜಂಗಾಸನ:
ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ‘ಭುಜಂಗಾಸನ’ ಎಂಬ ಹೆಸರು ಅನ್ವರ್ಥವಾಗಿದೆ. ಮಾಡುವ ಕ್ರಮ: 1) ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು.
ಭುಜಂಗಾಸನ ಮಾಡುವುದು ಹೇಗೆ?
ಮೊದಲು ನಿಧಾನವಾಗಿ ಹೊಟ್ಟೆಯ ಮೇಲೆ ಮಲಗಿ. ಈಗ ಎರಡು ಹಸ್ತಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ಊರಿ ನೆಲಕ್ಕೆ ಒತ್ತಿ. ಕಾಲ್ಬೆರಳುಗಳನ್ನು ಹಿಂದೆ ಚಾಚಿ. ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗ ಮೇಲಕ್ಕೆ ಬಂದಿರಬೇಕು. ದೃಷ್ಟಿ ಮೇಲೆ, ಎರಡು ಭುಜಗಳು ಹಿಂದಕ್ಕೆ, ಎರಡು ಮೊಣಕೈಗಳ ಮಧ್ಯದಲ್ಲಿ ನಾಭಿಯ ಭಾಗ ಬಂದಿರಬೇಕು. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಬೇಕು. ಹಾಗೆ ಉಸಿರನ್ನು ಹೊರಹಾಕುತ್ತ ಪೂರ್ತಿ ಕೆಳಗೆ ಬರಬೇಕು. ಹಣೆಯನ್ನು ನೆಲಕ್ಕೆ ತಾಗಿಸಿ ವಿಶ್ರಾಂತಿಯನ್ನು ಮಾಡಬೇಕು.
ಭುಜಂಗಾಸನದ ಪ್ರಯೋಜನಗಳು
1. ಬೆನ್ನು, ಎದೆ, ಹೊಟ್ಟೆಯ ಭಾಗದ ನರಗಳನ್ನು ಬಲಪಡಿಸುವುದು.
2. ಸೊಂಟದ ನರಗಳ ಬಿಗಿ ಕಡಿಮೆ ಮಾಡುವುದರಿಂದ ಸೊಂಟ ನೋವು ಇರುವವರು ಈ ಆಸನ ಅಭ್ಯಾಸ ಮಾಡುವುದು ಒಳ್ಳೆಯದು.
3. ಭುಜವನ್ನು ಬಲಪಡಿಸುತ್ತದೆ.
4. ಅನಿಯಮಿತ ಮುಟ್ಟಿನ ಸಮಸ್ಯೆಇರುವವರು ಇದನ್ನು ಅಭ್ಯಾಸ ಮಾಡಿದರೆ ನಿಯಮಿತ ಮುಟ್ಟಿಗೆ ಸಹಕಾರಿ.
5. ಹಿಂಭಾಗದ ನರವನ್ನು ಬಲ ಪಡಿಸುತ್ತದೆ.
6. ಉಸಿರಾಟದ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶಗಳು ಹಾಗೂ ಹೃದಯ ಚೈತನ್ಯಗೊಳ್ಳುವುದು, ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುವುದು.