ಮನೆ ರಾಜ್ಯ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು

ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು

0

ವಿಜಯಪುರ: ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ​ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲಗಬಾಲ್ ಕ್ರಾಸ್ ಬಳಿ ನಡೆದಿದೆ.

ತುಂಬಗಿ ಗ್ರಾಮದ ಮೆಹಬೂಬ್ (35) ಮತ್ತು ಹುಸೇನ್ ​(38) ಮೃತ ದುರ್ದೈವಿಗಳು.

ಮೆಹಬೂಬ್ ಮತ್ತು ಹುಸೇನ್ ಬೈಕ್ ಮೂಲಕ ತಾಳಿಕೋಟೆಯಿಂದ ಮುದ್ದೇಬಿಹಾಳಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ​ಗೆ ಬೈಕ್ ಡಿಕ್ಕಿಯಾಗಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನತೆಲಂಗಾಣ ವಿಧಾನಸಭಾ ಚುನಾವಣೆ: ಆರಂಭಗೊಂಡ ಮತದಾನ
ಮುಂದಿನ ಲೇಖನಎಫ್‌ ಡಿಎ ನೇಮಕಾತಿ ಪರೀಕ್ಷಾ ಅಕ್ರಮ: ಇಬ್ಬರು ಪ್ರಾಂಶುಪಾಲರ ಬಂಧನ