ಮನೆ ಮನೆ ಮದ್ದು ಬಿಲ್ವಪತ್ರೆ 

ಬಿಲ್ವಪತ್ರೆ 

0

ಆಯುರ್ವೇದದ 10 ಬೇರುಗಳ ಪೈಕಿ ಬಿಲ್ವಪತ್ರೆ  ಮುಖ್ಯವಾಗಿದೆ. ಹಾಗಾಗಿ ಮರದ ಬೇರಿನ ಹೊರ ತೊಗಟೆ ಸಹ ಅತ್ಯಂತ ಬೆಲೆಬಾಳುವ ಸಸ್ಯ ಸಂಪತ್ತಾಗಿದೆ. ಬೆಂಗಾಲ್ ಕ್ವೀನ್ಸ್ ಎಂಬ ಹೆಸರಿನ ಹಿಂದೆ ಇದರ ಮೂಲ ನೆಲೆ ಅಥವಾ ಸಮೃದ್ಧ ನೆಲೆ ಬಂಗಾಳ, ಗಂಗಾ ನದಿ ತಟವರ್ತಿ ಪ್ರದೇಶ ಇರುವ ಸಾಧ್ಯತೆ ಬಹಳ. ಪೂಜೆಯಲ್ಲಿ ದಿನನಿತ್ಯ ಸುವಸ್ತುವಾಗಿ ಬಳಕೆಯಾಗುತ್ತದೆ. ಈಶ್ವರನ ಪೂಜೆಗಂತೂ ಅಕ್ಕರೆ ಸಾಮಗ್ರಿಯಾಗಿದೆ. ಸುಶ್ರುತ ಸಂಹಿತೆ ಕಾಲದಲ್ಲಿ ಕೂಡ ಬಿಲ್ಪತ್ರೆ ಎಲೆಯನ್ನು ಮುಪ್ಪು, ರೋಗ ಬರದಂತೆ ಮಾಡಲು ಬಳಸುತ್ತಿದ್ದರು.

ಮಾಧ್ಯಮ ಗಾತ್ರದ ಮರ 50 ಅಡಿಯವರೆಗೆ ಬೆಳೆಯುತ್ತದೆ. ಎಳೆ ರೆಂಬೆಗಳಲ್ಲಿ ಮುಳ್ಳು ಮೂರು ಉಪ ಎಲೆಗಳು. ಮಾಘ, ಪಾಲ್ಗುಣ ಮಾಸ (ಚಳಿಗಾಲ)ದಲ್ಲಿ ಎಳೆಯುತ್ತಿರುತ್ತದೆ. ಹೊಸ ಎಲೆಗಳು ಚಿಗುರುವಾ ಸಮಯದಲ್ಲಿ ಹೂ, ಬಿಳಿಯ ದಳಗಳ ಸುಂದರ ಹೂ. ಅನಂತರ ಮೂಸಂಬಿ ಗಾತ್ರದ ಗಟ್ಟಿ ಕವಚದ ಕಾಯಿ. ಒಳಗೆ ಮಾಂಸಲ ತಿರುವಳಿನಲ್ಲಿ ಗಟ್ಟಿ ಬೀಜಗಳು ಹುದುಗಿರುತ್ತದೆ. ಎಲೆ, ಹೂ, ಕಾಯಿ ತಿರುವಿಗೆ ಮಂದ ಸುಗಂಧ ಬಿಲ್ವದಲ್ಲಿ ಎರಡು ಬಗೆಯ ಫಲಗಳ ಪ್ರಭೇದ. ಕಾಡು ಜಾತಿಯ ಮರದಲ್ಲಿ ಕಹಿ ಮತ್ತು ಒಗರಾದ ಫಲಗಳಿರುತ್ತದೆ. ನೆಟ್ಟು ಬೆಳೆಸಿದ ಗ್ರಾಮ್ಯ ಜಾತಿಯ ಅತಿ ಸಿಹಿ ಮತ್ತು ಬೀಜ ರಹಿತ, ಸುಗಂಧಿ ಫಲವಿರುತ್ತದೆ. ವನ್ಯ ಜಾತಿಯ ಕಾಯಿಯೊಳಗಿನ ಬೀಜದಲ್ಲಿ ಬಹಳ ಜಿಗುಟು ಅಂಟುವಿರುತ್ತದೆ.

ಬಿಲ್ವಪತ್ರೆಯಲ್ಲಿ ಮಲ ಘನಗೊಳಿಸುವ ಕರುಳಿಗೆ ಟಾನಿಕ್ ಆಗಬಲ್ಲ ಪೆಕ್ವಿನ್ ಅಂಶವಿದೆ. ರೆಡ್ಯೂಸಿಂಗ್ ಶುಗರ್, ಶುಗರ ಶೇ. ೫ ರಷ್ಟು ತೈಲಾಂಶ ಮತ್ತು ತೈಲಾಂಶದಲ್ಲಿ ವಾರ್ಮೆಲೋಸಿನ್ ಗಳಿವೆ. ಕಾಯಿಯಲ್ಲಿ ಟ್ಯಾನಿನ್ ಅಂಶವು ಹೇರಳವಾಗಿರುತ್ತದೆ. ಬೀಜದಲ್ಲಿ ಕೂಡ ಅತಿ ಹಗುರವಾದ ತೈಲಾಂಶವಿರುತ್ತದೆ. ಚಿಗುರೆಲೆಗಳಲ್ಲಿ ನಾರ್ ಎಡ್ರಿನಲಿನ್ ಎಂಬ ಅಪರೂಪದ ಹಾರ್ಮೋನು ಅಂಶವು  ಕೂಡ ಪತ್ತೆಯಾಗಿದೆ. ಹಾಗಾಗಿ ಬಿಲ್ವದ ಸರ್ವರೋಗ ಶ್ರಮನೀಯ ಶಕ್ತಿಯ ಬಗ್ಗೆ ಅಚ್ಚರಿಪಡಬೇಕಾದ ಪ್ರಸಂಗವಿಲ್ಲ. ಅತಿ ಸೂಕ್ಷ್ಮ ರೂಪದಲ್ಲಿ ಇಂತಹ ಹಾರ್ಮೋನು ದೇಹರೋಗ್ಯದಲ್ಲಿ ಉತ್ತಮ ಪ್ರಭಾವ ಬೀರಬಲ್ಲದು.

ಬಿಲ್ಪತ್ರೆಯಲ್ಲಿ ಬಲವರ್ಧಕ ಟಾನಿಕ್ ಎಂದು ವಿವರಿಸಿದೆ. ಉಷ್ಣಗುಣವಿದ್ದರೂ ಎಂಥವೇ ದ್ರವಮಲ, ಭೇದಿ ನಿಲ್ಲಿಸುವಂತದ್ದು, ಮೈಬಾವು, ಸಂದು ಕೀಲು ನೋವು ಪರಿಹಾರಿ ಜ್ವರ ನಿವಾರಕ. ಹೂ ಬಳಸಿ ಭೇದಿ, ವಾಂತಿ, ಅತಿ ಬಾಯಾರಿಕೆ ಪರಿಹರಿಸಬಹುದು. ಬೀಜದ ಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಕೊಟ್ಟರೂ ಅತಿ ವಿರೇಚಕ ಭೇದಿ ಮಾಡಿಸುತ್ತದೆ. ಮಧುಮೇಹ, ಕಿವಿ ನೋವು, ವಾಂತಿ, ಕಾಮಾಲೆ, ಮೂಲವ್ಯಾಧಿ, ಜ್ವರದಲ್ಲಿ ಬಿಲ್ಪತ್ರೆ ಬಳಕೆಯಿಂದ ವಿಶೇಷ ಪರಿಹಾರ ದೊರೆಯುತ್ತದೆ.

ಔಷಧೀಯ ಗುಣಗಳು :-

1.ಮಧುಮೇಹ ಇದ್ದವರೂ ಇದರ ಸೇವನೆಯಿಂದ ವಿಶೇಷ ಲಾಭ ಪಡೆಯಬಹುದು.

2. ಚೆನ್ನಾಗಿ ಕಳಿತ ಹಣ್ಣಿನ ಚಿರಳು ಮಲರೇಚಕ ಶರಾಬತ್ತು ರೂಪದಲ್ಲಿ ಬಿಸಿಲ ಬೇಗೆ ಪರಿಹಾರವಾಗುತ್ತದೆ. ಉತ್ತಮ ಪೌಷ್ಟಿಕವಾಗಿದೆ. ಹೊಟ್ಟೆ ಒಬ್ಬರ ಮೂಲವ್ಯಾಧಿಗೆ ಪರಿಹಾರಕವಾಗಿದೆ.

3. ಹುರಿದ ಕಾಯಿ, ಎಳೆಕಾಯಿ ಬಳಸಿದರೆ ರಕ್ತ ಬೇಧಿ, ಆಮಶಂಕೆ ಪರಿಹಾರವಾಗುತ್ತದೆ.

4. ಹಳೆಯ ಬೇಧಿ ಪರಿಹಾರಕ್ಕೆ ಶುಂಠಿ ಸಂಗಡ ಬಿಲ್ಪತ್ರೆಗಳ ತಿರುಳು ಸೇವನೆಯಿಂದ ಉತ್ತಮ ಲಾಭ ದೊರೆಯುತ್ತದೆ.

5.  ತೀವ್ರ ನೋವು ಇರುವ ಮೂಲವ್ಯಾಧಿ ಅಂಕುಗಳಿಗೆ ಬೇರು ತೊಗಟೆಯ ಕಷಾಯದಲ್ಲಿ ಕುಳಿತುಕೊಂಡರೆ ಗುಣವಾಗುತ್ತದೆ.

6. ಕಾಯಿ ಸಹಿತ ಎಣ್ಣೆ ಕಾಯಿಸಿ ಕಿವಿಗೆ ಹಾಕಿದರೆ ಕಿವಿ ಕಾಯಿಲೆ ಪರಿಹಾರವಾಗುತ್ತದೆ.

7. ಅನಿದ್ರೆ, ಹೃದಯ ಧಡಗುಟ್ಟುವ ಪರಿಹಾರಕ್ಕೆ ಬೇರಿನ ಕಷಾಯ ಸೇವನೆಯಿಂದ ಬಹಳ ಲಾಭಕಾರಿಯಾಗಿದೆ.

8.  ಜೀರಿಗೆ ಜೊತೆ ಬೇರಿನ ಸಿಪ್ಪೆ ಪುಡಿ ಮಾಡಿದರೆ ಶುಕ್ರ ದಾತುವಿನ ತರುಲತೆ ಬಲಹೀನತೆಗೆ ಪರಿಹಾರ.

9. ತಾಜ ಎಲೆ ರಸ ಕುಡಿದರೆ ಜ್ವರ, ಕಫ, ನೆಗಡಿ ಪರಿಹಾರವಾಗುತ್ತದೆ. ಕಿವಿ ನೋವಿಗೆ ಎಣ್ಣೆಯಲ್ಲಿ ಕಾಯಿಸಿ ಕಿವಿಯಲ್ಲಿ ಹಾಕಿಕೊಳ್ಳಬಹುದು. ಹಳೆಯ ಗಾಯಕ್ಕೆ ಎಳೆಯ ಪೋಲ್ಟೀಸು ಹಾಕುವುದರಿಂದ ಹಿತಕಾರಿಯಾಗಿದೆ. ಅಸ್ತಮಾದಲ್ಲಿ ಕೂಡ ತಾಜಾ ಏಲೆ ರಸ ಸೇವಿಸಿದರೆ ಉತ್ತಮ.

ಹಿಂದಿನ ಲೇಖನಶರಣು ಸಿಧ್ಧಿ ವಿನಾಯಕ
ಮುಂದಿನ ಲೇಖನಯೋಗದ ಹಂತಗಳು