ಮನೆ ಅಪರಾಧ ಬಿರ್ಭೂಮ್ ಪ್ರಕರಣ: 21 ಶಂಕಿತರ ಮೇಲೆ ಎಫ್ ಐಆರ್ ದಾಖಲಿಸಿದ ಸಿಬಿಐ

ಬಿರ್ಭೂಮ್ ಪ್ರಕರಣ: 21 ಶಂಕಿತರ ಮೇಲೆ ಎಫ್ ಐಆರ್ ದಾಖಲಿಸಿದ ಸಿಬಿಐ

0

ಕೊಲ್ಕತ್ತಾ: ಬಿರ್ಭೂಮ್ ಅಗ್ನಿಸ್ಪರ್ಶ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಎಫ್‌ಐಆರ್ ನಲ್ಲಿ 21 ಶಂಕಿತರನ್ನು ಹೆಸರಿಸಿದೆ.

ಮಾರ್ಚ್ 21 ರಂದು ಪಶ್ಚಿಮ ಬಂಗಾಳದ ಬಿರ್ಭೂಮ್ ನ ಬೊಗ್ಟುಯಿ ಗ್ರಾಮದಲ್ಲಿ, ದುಷ್ಕರ್ಮಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು.

ಶುಕ್ರವಾರ ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಸ್ಥಳೀಯ ಪಂಚಾಯತ್ ನ ಟಿಎಂಸಿ ‘ಉಪ-ಪ್ರಧಾನ್’ ಆಗಿದ್ದ ಭದು ಶೇಖ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ನಡೆಸಿದ ‘ಪ್ರತಿಕಾರ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಸಿಬಿಐ ತನ್ನ ಎಫ್‌ಐಆರ್ ನಲ್ಲಿ ಹೇಳಿದೆ. 

ಇದಲ್ಲದೆ, ’70-80 ಜನರ ಗುಂಪು’ ಸಂತ್ರಸ್ತರ ಮನೆಗಳನ್ನು ಧ್ವಂಸ ಮಾಡಿದೆ. ‘ಮನೆಯಲ್ಲಿದ್ದವರನ್ನು ಕೊಲ್ಲುವ ದೃಷ್ಟಿಯಿಂದ’ ಬೆಂಕಿ ಹಚ್ಚಿದೆ ಎಂದು ಎಫ್‌ಐಆರ್ ಹೇಳುತ್ತದೆ.

ಹಿಂದಿನ ಲೇಖನಚಾಮರಾಜನಗರ ನಗರಸಭೆ ಆಯುಕ್ತರಿಗೆ ನಿಂದನೆ: ಸದಸ್ಯನಿಗೆ 1 ವರ್ಷ ಜೈಲು
ಮುಂದಿನ ಲೇಖನಕೇರಳದ ಶ್ರೀ ರಾಜರಾಜೇಶ್ವರ ದೇಗುಲಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ