ಮನೆ ರಾಷ್ಟ್ರೀಯ ಬಿಟ್ ಕಾಯಿನ್ ಹಗರಣ: ಐಜಿಪಿ ಸಂದೀಪ್ ಪಾಟೀಲ್‌ ಗೆ ಮತ್ತೆ ಎಸ್‌ ಐಟಿ ನೋಟಿಸ್

ಬಿಟ್ ಕಾಯಿನ್ ಹಗರಣ: ಐಜಿಪಿ ಸಂದೀಪ್ ಪಾಟೀಲ್‌ ಗೆ ಮತ್ತೆ ಎಸ್‌ ಐಟಿ ನೋಟಿಸ್

0

ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸ್ ಐಟಿ ಐಜಿಪಿ ಸಂದೀಪ್ ಪಾಟೀಲ್‌ ಗೆ ಮತ್ತೆ ನೋಟಿಸ್ ಜಾರಿ ಮಾಡಿದೆ.

Join Our Whatsapp Group

ವಿಚಾರಣೆಗೆ ಹಾಜರಾಗುವಂತೆ ಸಂದೀಪ್ ಪಾಟೀಲ್ ಗೆ ನೋಟಿಸ್ ನೀಡಲಾಗಿದೆ. ಜತೆಗೆ, ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಿತ್ತು. ಆದರೆ, ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಕಾರಣ ತಿಳಿಸುವಂತೆಯೂ ನೋಟಿಸ್ ನಲ್ಲಿ ಎಸ್ ಐಟಿ ಸೂಚಿಸಿದೆ.

ಬಿಟ್ ಕಾಯಿನ್ ಹಗರಣ ಸಂಬಂಧ ಫೆಬ್ರವರಿಯಲ್ಲಿ ಸಂದೀಪ್ ಪಾಟೀಲ್ ರನ್ನು ಎಸ್ ಐಟಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಸುಮಾರು ೩ ತಾಸು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿತ್ತು. ಬಿಟ್ ಕಾಯಿನ್ ಹಗರಣ ನಡೆದ ಸಂದರ್ಭದಲ್ಲಿ ಸಂದೀಪ್ ಪಾಟೀಲ್ ಸಿಸಿಬಿ ಮುಖ್ಯಸ್ಥರಾಗಿದ್ದರು.

ಹಿಂದಿನ ಲೇಖನವಿಪತ್ತು ನಿರ್ವಹಣೆಗಾಗಿ 10 ಕೋಟಿ ರೂ. ಮೀಸಲು: ತುಷಾರ್‌ ಗಿರಿನಾಥ್‌
ಮುಂದಿನ ಲೇಖನಹೆಚ್​ ಡಿ ರೇವಣ್ಣ ಜೈಲಿನಿಂದ ಬಿಡುಗಡೆ: ಅಭಿಮಾನಿಗಳನ್ನು ಚದುರಿಸಲು ಲಾಠಿಚಾರ್ಜ್