ಕಲಬುರಗಿ: ಸಿಎಂ ಆದವರಿಗೆ ವಿರೋದ ಪಕ್ಷದ ನಾಯಕ ಸ್ಥಾನ ನೀಡುತ್ತಿಲ್ಲ. ಈ ಮೂಲಕ ಪಾಪ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿಯವರು ಅವಮಾನ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಸಚಿವ ಸಂಪುಟವೇ ದೆಹಲಿಗೆ ಹೋಗಿ ಸಭೆ ಮಾಡುವುದು ಸರಿಯಲ್ಲ. ಇದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ಹೇಳಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೀಗಾಗಿ ದೆಹಲಿಗೆ ಹೋಗುವುದು, ಬರುವುದು ಇದ್ದದ್ದೆ. ಮೊದಲು ಅವರ ಮನೆಯಲ್ಲಿ ಆಗುತ್ತಿರುವ ಅವಮಾನದ ಬಗ್ಗೆ ಲೆಕ್ಕ ಹಾಕಲಿ ಎಂದು ಹೇಳಿದ್ದಾರೆ.
Saval TV on YouTube