ಮನೆ ರಾಜ್ಯ ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ: ಸಚಿವ ಎಂ.ಬಿ ಪಾಟೀಲ್

ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ: ಸಚಿವ ಎಂ.ಬಿ ಪಾಟೀಲ್

0

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.

Join Our Whatsapp Group

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರ ಬೀಳಿಸುವುದು ಅಸಾಧ್ಯವಾದ ಮಾತು. ಸರ್ಕಾರ ಬೀಳಿಸಬೇಕಾದರೇ 60 ಶಾಸಕರು ಬೇಕು ಎಂದರು.

ರಾಜಕೀಯಕ್ಕಾಗಿ  ಹೆಚ್. ಡಿ ಕುಮಾರಸ್ವಾಮಿ, ಬಿಜೆಪಿಯವರು ಹೇಳುತ್ತಾರೆ. ಜೆಡಿಎಸ್ ಪಕ್ಷದಲ್ಲಿರುವವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೆಲನಾಯಕರು ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತಿದ್ದಾರೆ ಎಂದು ಎಂ. ಬಿ ತಿಳಿಸಿದರು.

ಹಿಂದಿನ ಲೇಖನಉತ್ತರಾಖಂಡದಲ್ಲಿ ಭಾರಿ ಮಳೆ: ಬದರಿನಾಥ–ರಿಷಿಕೇಶ ಹೆದ್ದಾರಿ ಬಂದ್
ಮುಂದಿನ ಲೇಖನದಾಬೋಲ್ಕರ್ ಹಿಂದೂ ವಿರೋಧಿ ಎಂದು ಹಣೆಪಟ್ಟಿ ಹಚ್ಚಿ ಹಂತಕರು ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದು ಖಂಡನೀಯ: ಪುಣೆ ನ್ಯಾಯಾಲಯ