ಮನೆ ರಾಜಕೀಯ ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ ಬಿಜೆಪಿ ಸಂಸದ

ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ ಬಿಜೆಪಿ ಸಂಸದ

0

ನವದೆಹಲಿ: ಸಂಸತ್ತಿನಲ್ಲಿ ಭಾನುವಾರ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿದ ಭಾಷಣವು ಕೋಲಾಹಲವನ್ನೇ ಸೃಷ್ಟಿಸಿದ್ದು, ಬಿಜೆಪಿಯ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ರಾಹುಲ್‌ ವಿರುದ್ಧ ಹಲವು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಭಾಷಣದ ಮೂಲಕ ದೇಶದ ಜನರನ್ನು ರಾಹುಲ್‌ ಗಾಂಧಿ ಪ್ರಚೋದಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ರಾಹುಲ್‌ ವಿರುದ್ಧ ‘ಹಕ್ಕುಚ್ಯುತಿ’ಹಾಗೂ ‘ಸದನದ ನಿಂದನೆಗೆ ಸಂಬಂಧಿಸಿದಂತೆ ದುಬೆ ನೋಟಿಸ್‌ ನೀಡಿದ್ದಾರೆ.

ನಿನ್ನೆ ಸಂಸತ್‌ನಲ್ಲಿ ಮಾತನಾಡಿದ್ದ ರಾಹುಲ್‌, ‘ಇಲ್ಲಿ ಎರಡು ಭಾರತಗಳಿವೆ. ಮೊದಲನೆಯದ್ದು ಶ್ರೀಮಂತರಿಗೆ ಸೇರಿದ ಭಾರತ. ಎರಡನೆಯದ್ದು ಬಡವರಿಗೆ ಸೇರಿದ ಭಾರತ. ‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ವ್ಯಕ್ತಿಯೊಬ್ಬ ರಾಜಾಡಳಿತ ನಡೆಸಲು ಸಾಧ್ಯವಿಲ್ಲ. ರಾಜ್ಯಗಳ ಒಕ್ಕೂಟದಲ್ಲಿ, ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಿಜೆಪಿಯ ದೋಷಪೂರಿತ ದೃಷ್ಟಿಕೋನವು ನಮ್ಮ ದೇಶವನ್ನು ದುರ್ಬಲಗೊಳಿಸಿದೆ’ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದರು.

ಹಿಂದಿನ ಲೇಖನಇಂಜಿನಿಯರಿಂಗ್‌ನ ಗೇಟ್ ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಪ್ರತಿಭಟನೆ