ಚಿಕ್ಕಮಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಭ್ಯರ್ಥಿ ಸಿ.ಟಿ ರವಿ ತಡರಾತ್ರಿ ನಗರದ ಆಶ್ರಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿದ್ದ ಸಿ.ಟಿ ರವಿ, ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು.
ಕಳೆದ ತಿಂಗಳು ಏಪ್ರಿಲ್ 16ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಿ.ಟಿ.ರವಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕ್ಕಮಗಳೂರು ನಗರದ ಖಾಸಗಿ (ಆಶ್ರಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮತ್ತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಏಪ್ರಿಲ್ 15ರ ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಮತ್ತೊಮ್ಮೆ ಸಿ.ಟಿ.ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಶ್ರಯ ಆಸ್ಪತ್ರೆಗೆ ತೆರಳಿ ಅಡ್ಮೀಟ್ ಆಗಿದ್ದರು. ಕಿಡ್ನಿಯಲ್ಲಿ 12 ಎಂ.ಎಂ. ಕಲ್ಲು ಇರುವುದಾಗಿ ವೈದ್ಯರು ತಿಳಿಸಿದ್ದರು.
ಮತದಾನ ಪೂರ್ಣಗೊಂಡ ಬಳಿಕ ತಡರಾತ್ರಿ ಚಿಕಿತ್ಸೆಗಾಗಿ ಸಿ.ಟಿ.ರವಿ ಆಸ್ಪತ್ರೆಗೆ ದಾಖಲಾಗಿದ್ದಾರೆ.