ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ನಿಮಗಿಂದು ಶುಭ ದಿನವೇ ಅಥವಾ ಅಶುಭ ದಿನವೇ? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎಂಬುದನ್ನು ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.

ಮೇಷ ರಾಶಿ

ಈ ದಿನ ಉಚ್ಛ ಚಂದ್ರ ಎರಡನೇ ಮನೆಯಲ್ಲಿದ್ದು ನಿಮಗೆ ಕುಟುಂಬದಲ್ಲಿ ಸಂತೋಷಕರ ವಾತಾವರಣ ಮೂಡಿಸುತ್ತಾನೆ. ಹಾಲು, ಮೊಸರು, ಕೂಲ್ ಡ್ರಿಂಕ್ಸ್, ಐಸ್ ಕ್ರೀಂ ವ್ಯಾಪಾರಿಗಳಿಗೆ ಶುಭದಿನ. 12ರಲ್ಲಿ ಗುರು 2ನೇ ಮನೆಯ ಚಂದ್ರ ನಿಮ್ಮ ರಾಶಿಗೆ ಈ ದಿನ ಒಂದು ಬಲವನ್ನು ಕೊಡುತ್ತಾನೆ. ಹಿಡಿದ ಕೆಲಸಕಾರ್ಯಗಳಲ್ಲಿ ಜಯ ಸಿಗುತ್ತದೆ.

ವೃಷಭ ರಾಶಿ

ಈ ದಿನ ಜನಿಸಿದವರೆಲ್ಲ ವೃಷಭರಾಶಿಯವರು. ವೃಷಭದಲ್ಲಿ ಚಂದ್ರನಿಗೆ ಶಕ್ತಿ ಹೆಚ್ಚು. ವೃಷಭರಾಶಿಯ ಅಲಂಕಾರ ಸಾಮಗ್ರಿ ವ್ಯಾಪಾರ, ಆಭರಣ, ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಶುಭದಿನ. ಸಂಗೀತಕಲಾವಿದರಿಗೂ ಈ ದಿನ ವಿಶೇಷ ಲಾಭ ಇದೆ. ದೇಹಕ್ಕೆ ಆರಾಮ ಎನಿಸುತ್ತದೆ. ಮನಸ್ಸು ಹಗುರವಾಗಿರುತ್ತದೆ.

ಮಿಥುನ ರಾಶಿ

ಈ ದಿನ ಹಣ ಹರಿದುಬಂದರೂ ಖರ್ಚೂ ಇದೆ. ಆದರೆ ಒಳ್ಳೆಯ ಕೆಲಸಕ್ಕಾಗಿ ಖರ್ಚು ಮಾಡುತ್ತೀರಿ. ಮನಸ್ಸಿಗೆ ಕೊಂಚ ಕಸಿವಿಸಿ ಎನಿಸಿದರೂ ದಿನದ ಅಂತ್ಯದಲ್ಲಿ ಮನಸ್ಸು ನೆಮ್ಮದಿ ಪಡೆದುಕೊಳ್ಳುತ್ತದೆ. ನಿಮ್ಮ ಒಂದು ಒಳ್ಳೆಯ ಮಾತಿನಿಂದ ಎದುರಿನವರ ಮನಸ್ಸು ಗೆಲ್ಲುತ್ತೀರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಬೇಕು.

ಕರ್ಕಾಟಕ ರಾಶಿ

ನಿಮ್ಮ ಬಹುದಿನಗಳ ಆಸೆ ಈ ದಿನ ನೆರವೇರುವ ಸಮಯ. ನೌಕರಿಯಲ್ಲಿ ಬಡ್ತಿ ಸಿಗಬಹುದು. ಅಥವಾ ಈ ವಿಷಯ ಚರ್ಚೆಗೆ ಬಂದು ನಿಮ್ಮ ಮನಸ್ಸಿಗೆ ಖುಷಿ ಆಗಬಹುದು. ಮೇಲಧಿಕಾರಿಗಳಿಂದ ಪ್ರಶಂಸೆ ಇದೆ. ತಾಯಿಯಿಂದ ಸಹಾಯ ಇದೆ. ಹಣ್ಣುಗಳ ವ್ಯಾಪಾರಿಗಳಿಗೆ ಸಿಹಿತಿಂಡಿ ವ್ಯಾಪಾರಿಗಳಿಗೆ ಶುಭದಿನ.

ಸಿಂಹ ರಾಶಿ

ಈ ದಿನ ನಿಮಗೆ ನೌಕರಿಯ ಜಾಗದಲ್ಲಿ ಒಳ್ಳೆಯ ಸುದ್ದಿ ಇದೆ. ವ್ಯಾಪಾರಿಗಳಿಗೆ ಧನಲಾಭ ಇದೆ. ಬಹುದಿನಗಳ ಯೋಜನೆಯೊಂದು ಈ ದಿನ ಫಲ ಕೊಡುತ್ತದೆ. ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ಸಹೋದರಿ ವರ್ಗದಿಂದ ಲಾಭ ಇದೆ. ವ್ಯವಸಾಯಗಾರರಿಗೆ ಲಾಭ ಇದೆ.

ಕನ್ಯಾ ರಾಶಿ

ಈ ದಿನ ಕೊಂಚ ಅಧೈರ್ಯದ ದಿನ. ಏನೂ ಕೆಲಸ ಮಾಡಲು ನೀವು ಮುನ್ನುಗ್ಗಿ ಹೋಗುವುದಿಲ್ಲ. ಆದರೂ ನಿಮಗೆ ಚಿಂತೆ ಇಲ್ಲ. ನೀವಂದುಕೊಂಡ ಕೆಲಸಕಾರ್ಯಗಳು ದೈವಾನುಗ್ರಹದಿಂದ ಮುಂದುವರೆಯುತ್ತದೆ. ಶುಭಫಲ ನೀಡುತ್ತದೆ. ಮಕ್ಕಳ ಹಠ ಕೋಪದಿಂದ ಮನಸ್ಸಿಗೆ ಬೇಸರವಾಗಬಹುದು. ಎಲೆಕ್ಟ್ರಾನಿಕ್ಸ್ ಉದ್ಯಮಿಗಳಿಗೆ ಈದಿನ ಶುಭ.

ತುಲಾ ರಾಶಿ

ನೀವು ಹೆಜ್ಜೆಹೆಜ್ಜೆಗೂ ಎಚ್ಚರಿಕೆ ವಹಿಸಬೇಕು. ವಿರೋಧಿಗಳಿದ್ದಾರೆ. ನಿಮ್ಮ ಆತ್ಮೀಯರೂ ನಿಮ್ಮ ವಿರೋಧ ತಿರುಗಬಹುದು. ಹನುಮಂತನ ಧ್ಯಾನ ಮಾಡಿ. ಮನೆಯಲ್ಲೂ ಅನುಕೂಲಕರ ವಾತಾವರಣ ಇಲ್ಲ. ಮೈಯಲ್ಲಿ ಕೊಂಚ ಇರಿಸುಮುರಿಸು ಆನಾರೋಗ್ಯದ ಸೂಚನೆ ಕಾಣಬಹುದು. ಹಣದ ವಿಷಯದಲ್ಲಿ ಎಚ್ಚರಿಕೆ ಇರಲಿ.

ವೃಶ್ಚಿಕ ರಾಶಿ

ಮಕ್ಕಳಿಂದ ಖುಷಿ. ಮಕ್ಕಳ ಪ್ರಗತಿ ಮನಸ್ಸಿಗೆ ಮುದ ನೀಡುತ್ತದೆ. ಹಣಕಾಸಿನ ಹರಿವು ಉತ್ತಮವಾಗಿದೆ. ಅಂದುಕೊಂಡ ಕೆಲಸಗಳಲ್ಲಿ ಜಯ ಸಾಧಿಸುತ್ತೀರಿ. ಆಕಸ್ಮಿಕ ಧನಲಾಭ ಇದೆ. ದೂರಪ್ರಯಾಣ ಅಥವಾ ಪ್ರವಾಸದ ಚಿಂತನೆ ಮಾಡುತ್ತೀರಿ. ಆಪಾದನೆಗಳಿಂದ ಪಾರಾಗುತ್ತೀರಿ.

ಧನಸ್ಸು ರಾಶಿ

ಬಂಧುವರ್ಗದಿಂದ ವಿರೋಧ ಕಿರಕಿರಿ ಎದುರಿಸಬೇಕಾಗುತ್ತದೆ. ಏನೇ ಆದರೂ ನಿಮ್ಮ ನಿರ್ಧಾರ ಅಚಲವಾಗಿರುತ್ತದೆ. ಸ್ನೇಹಿತರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಮಕ್ಕಳ ಆರೋಗ್ಯ ಪ್ರಗತಿಯಲ್ಲಿ ಹಿನ್ನಡೆ ಇದೆ. ಮಕ್ಕಳು ನಿಮ್ಮ ಮೇಲೆ ಮುನಿಸಿಕೊಳ್ಳಲೂಬಹುದು. ನೀವು ಕೈಗೊಂಡ ಕೆಲಸಕಾರ್ಯಗಳು ಈ ದಿನ ನಿಮ್ಮ ವಿರುದ್ಧವೇ ಆಗುತ್ತದೆ.

ಮಕರ ರಾಶಿ

ದೂರ ಪ್ರಯಾಣಯೋಗ ಇದೆ. ಹಣದ ಖರ್ಚೂ ಇದೆ. ಹಣ ಹೊಂದಿಸಲಾಗದೆ ಒದ್ದಾಡುತ್ತೀರಿ. ಸೋದರವರ್ಗದಿಂದ ಸಹಾಯ ಬೆಂಬಲ ಇದೆ. ಯಾವಕೆಲಸ ಮಾಡಲೂ ಕೊಂಚ ಯೋಚಿಸಿ ಹೆಜ್ಜೆ ಇಡಿ. ಮನೆದೇವರ ಪ್ರಾರ್ಥನೆ ಮಾಡಿಕೊಳ್ಳಿ. ನೌಕರಿಯಲ್ಲೂ ಒತ್ತಡ ಇದೆ. ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಮಕ್ಕಳ ವಿಚಾರದಲ್ಲಿ ಪ್ರಗತಿ ಇದೆ.

ಕುಂಭ ರಾಶಿ

ಶುಭಕಾರ್ಯಕ್ಕಾಗಿ ಪ್ರಯಾಣ ಮಾಡುತ್ತೀರಿ. ದೈವದರ್ಶನದ ಯೋಗವೂ ಇದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ ಇದೆ. ಹಣದ ಹರಿವು ಉತ್ತಮವಾಗಿದೆ. ಆಭರಣ, ವಸ್ತ್ರ, ಅಲಂಕಾರ ಸಾಮಗ್ರಿ ಮುಂತಾದವನ್ನು ಖರೀದಿ ಮಾಡುತ್ತೀರಿ. ವಸ್ತ್ರ-ಆಭರಣ ವ್ಯಾಪಾರಿಗಳಿಗೆ ಲಾಭವಿದೆ. ಹೆಣ್ಣುಮಕ್ಕಳಿಂದ ಸಹಾಯ ಇದೆ.

ಮೀನ ರಾಶಿ

ಸಹೋದರಿ ವರ್ಗದಿಂದ ಸಹಾಯ ಇದೆ. ಆಕಸ್ಮಿಕವಾಗಿ ಹಣ ಒದಗಿಬರುತ್ತದೆ. ಮನೆ ಕೊಂಡುಕೊಳ್ಳಲು, ಆಸ್ತಿ ಖರೀದಿ ಮಾಡಲು ಯೋಜನೆ ಮಾಡುವುದಕ್ಕೆ ಶುಭದಿನ. ಬಂದುವರ್ಗದವರೊಂದಿಗೆ ಸಂತೋಷಕೂಟ ಇದೆ. ಮನಸ್ಸಿಗೆ ನೆಮ್ಮದಿ ಆಹ್ಲಾದ ಸಿಗುತ್ತದೆ. ಮಕ್ಕಳಿಂದ ಶುಭಸುದ್ದಿ ಇದೆ. ನೌಕರಿಯಲ್ಲೂ ಶುಭಸುದ್ದಿ ಇದೆ.

ಹಿಂದಿನ ಲೇಖನಟೈಲರ್‌ ಕನ್ಹಯ್ಯಾ ಹತ್ಯೆ ಪ್ರಕರಣ: ಎನ್‌ಐಎನಿಂದ 8ನೇ ಆರೋಪಿ ಬಂಧನ
ಮುಂದಿನ ಲೇಖನ5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ