ಮನೆ ರಾಜ್ಯ ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

0

ಮೈಸೂರು: ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ. ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು. ನಾನು ಒಕ್ಕಲಿಗನಲ್ಲ ಅಂತಾ ಬಿಜೆಪಿಯವರು ಗೊಂದಲ ಮೂಡಿಸ್ತಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ನಾನು ಒಕ್ಕಲಿಗ ಅಂತಾ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಪಸಿಂಹ ಮೊದಲ ಬಾರಿ ಬಂದಾಗ ಗೌಡ ಅಂತಾ ಬದಲಿಸಿಕೊಂಡ್ರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂತಾ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂತಾ ಬರೆದುಕೊಂಡು ಓಡಾಡಲು ಆಗುತ್ತಾ? ಸಂಸದ ಪ್ರತಾಪ್ ​ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಲಕ್ಷ್ಮಣ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಜಾತಿ ಸಾಬೀತು ಮಾಡಲು ಮಾಧ್ಯಮದ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ವಂಶವೃಕ್ಷವನ್ನೇ ಬಿಚ್ಚಿಟ್ಟಿದ್ದಾರೆ. ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿಯಲ್ಲಿ. ಮೈಸೂರಿಗೆ ಬಂದು ನೆಲೆನಿಂತು 35 ವರ್ಷ ಆಯ್ತು. ನನ್ನ ತಂದೆ ಮುದ್ದಲಿಂಗೇಗೌಡ, ತಾಯಿ ಸಾಕಮ್ಮ. ನಾನು ಮೈಸೂರು ಕನ್ನೇಗೌಡನ ಕೊಪ್ಪಲಿನಲ್ಲಿದ್ದೆ. ಮಾವ ನಿವೃತ್ತ ಎನ್‌ಸಿಸಿ ಆಫೀಸರ್ ಕೆ ಸಿ.ಮರೀಗೌಡ, ಅತ್ತೆ ಲಕ್ಷ್ಮಿ. ಪತ್ನಿ ರೂಪಶ್ರೀಗೌಡ, ಮಗಳು ವರ್ಷಿತಾಗೌಡ, ಮಗ ಆದಿತ್ಯ ಲಕ್ಷ್ಮಣ್. ನಾನು ಹುಟ್ಟುತ್ತ ಒಕ್ಕಲಿಗ ಹೌದು ಆಗಂತ ಲಕ್ಷ್ಮಣ್ ಗೌಡ ಅಂತ ಹೆಸರು ಇಟ್ಟುಕೊಂಡಿಲ್ಲ. ಎಲ್ಲಾ ಜಾತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು ನಾನು ಎಂದು ಲಕ್ಷ್ಮಣ್ ತಿಳಿಸಿದರು.

ಹಿಂದಿನ ಲೇಖನ2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿವೆ: ಎಚ್.ಡಿ ಕುಮಾರಸ್ವಾಮಿ
ಮುಂದಿನ ಲೇಖನತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ