ಮನೆ ರಾಜಕೀಯ ಮಂಡ್ಯ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ: ಸಚಿವ ಕೆ.ಗೋಪಾಲಯ್ಯ ವಿಶ್ವಾಸ

ಮಂಡ್ಯ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ: ಸಚಿವ ಕೆ.ಗೋಪಾಲಯ್ಯ ವಿಶ್ವಾಸ

0

ಮಂಡ್ಯ(Mandya): ಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದ ಟಿಎಪಿಸಿಎಂಸಿ  ಆವರಣದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಸಧೃಡ ಮಾಡಬೇಕು ಎಂದರು

ಕರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೀ ತೆಗೆದುಕೊಂಡ ನಿರ್ಧಾರಕ್ಕೆ ವಿಶ್ವದ ನಾಯಕರು ಮೆಚ್ಚಿದ್ದಾರೆ. ನಮ್ಮ ದೇಶದಲ್ಲಿ ಕೊರೊನಾ ಔಷಧಿ ಕಂಡುಹಿಡಿದರು. ದೇಶದ ನೂರು ಕೋಟಿಗೂ ಹೆಚ್ಚು ಜನರಿಗೆ ಉಚಿತ ಲಸಿಕೆ ಕೊಟ್ಟರು, ಬೇರೆ ರಾಷ್ಟ್ರಕ್ಕೂ ನಮ್ಮ ಪ್ರಧಾನಿ ಲಸಿಕೆ ಕೊಟ್ಟರು ಎಂದರು.

ಬಡವರಿಗೆ ರಾಜ್ಯ 5 ಕೆ.ಜಿ, ಹಾಗೂ ಕೇಂದ್ರ 10 ಕೆ.ಜಿ.ಅಕ್ಕಿ ಕೊಡಲಾಗುತ್ತಿದೆ. ನಮ್ಮ ಸರ್ಕಾರ ಏಳು ತಿಂಗಳು ಕಡಲೆ ಕಾಳು ಕೊಟ್ಟಿದೆ. ವಿರೋಧ ಪಕ್ಷದ ನಾಯಕರು 7 kg ಕೊಡ್ತಿದ್ವು ಎನ್ನುತ್ತಾರೆ. ನಾವು 10 ಕೆ.ಜಿ.ಅಕ್ಕಿ ಕೊಡ್ತಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ರೈತರ ಹತ್ತಿರ ಯಾವತ್ತು ಬಂದಿಲ್ಲ. ರೈತರ ಹತ್ತಿರ ಬಂದು ಸಮಸ್ಯೆಗಳ ಕೇಳಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ. ಪ್ರತಿ ರೈತರ ಕುಟುಂಬಕ್ಕೆ 10 ಸಾವಿರ ಕೊಡಲಾಗಿದೆ.ಆಯುಷ್ಮಾನ್ ಕಾರ್ಡ್  ಜನರಿಗೆ ಕೊಟ್ಟಿದ್ದು ನರೇಂದ್ರ ಮೋದಿಯವರು. 30 ಲಕ್ಷ ಕುಟುಂಬಕ್ಕೆ ಉಜ್ವಲ ಯೋಜನೆಯಲ್ಲಿ ಸಿಲಿಂಡರ್ ಕೊಟ್ಟಿದ್ದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ಜನರಿಗೆ ಯೋಜನೆಗಳನ್ನ ತಲುಪಿಸಿದೆ‌ ಎಂದರು.

ಕೆ.ಆರ್.ಪೇಟೆಯಲ್ಲಿ ಖಾತೆ ತೆರೆದಿದ್ದೇವೆ, ಮುಂದೆಯು ಸಹ 4 ರಿಂದ 5 ಖಾತೆ ತೆರೆಯುತ್ತೇವೆ.ಯಾವುದೇ ಕ್ಷೇತ್ರ ಬಿಡದೆ, ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು ಎಂದು ಹೇಳಿದರು.

ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಜಿಲ್ಲಾ‌ಧ್ಯಕ್ಷ ಸಿ.ಪಿ.ಉಮೇಶ್,ಮುಖಂಡರಾದ ಡಾ.ಇಂದ್ರೇಶ್,ಎಸ್.ಪಿ.ಸ್ವಾಮಿ ಇತರರು ಉಪಸ್ಥಿತರಿದ್ದರು. ಸಭೆಗೂ ಮುನ್ನ ಅಧ್ಯಕ್ಷರನ್ನು ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು.  ವಿವಿಧ ಜಾನಪದ‌ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು.