ಮನೆ ರಾಜ್ಯ 75ನೇ  ಸ್ವಾತಂತ್ರ್ಯೋತ್ಸವದ  ಸಂದರ್ಭದಲ್ಲಿ ಮೈಸೂರು, ಕರ್ನಾಟಕದ ಪಾತ್ರ ಬಹಳ ದೊಡ್ಡದು: ರಾಮದಾಸ್                

75ನೇ  ಸ್ವಾತಂತ್ರ್ಯೋತ್ಸವದ  ಸಂದರ್ಭದಲ್ಲಿ ಮೈಸೂರು, ಕರ್ನಾಟಕದ ಪಾತ್ರ ಬಹಳ ದೊಡ್ಡದು: ರಾಮದಾಸ್                

0

ಮೈಸೂರು(Mysuru):- ದೇಶದ 75ನೇ ಸ್ವತಂತ್ರೋತ್ಸವದ  ಸಂದರ್ಭದಲ್ಲಿ ಮೈಸೂರು ಮತ್ತು ಕರ್ನಾಟಕದ ಪಾತ್ರ ಬಹಳ ದೊಡ್ಡದು  ಎಂದು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ತಿಳಿಸಿದರು.

ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ರಾಮಸ್ವಾಮಿ ವೃತ್ತದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಶಿಲಾಫಲಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರಾಮಸ್ವಾಮಿ ಕೇವಲ 18 ವರ್ಷದವರಿದ್ದಾಗ ಮೊದಲನೇ ಡಿಗ್ರಿಯಲ್ಲಿ ಓದುತ್ತಿದ್ದಾಗ ಬ್ರಿಟಿಷರ ವಿರುದ್ಧವಾದ ಒಂದು ಹೋರಾಟದಲ್ಲಿ ಸ್ವದೇಶಿಯ ಆಂದೋಲನದ ಮೊದಲನೇ ಬಲಿ ಎಂದು ತಿಳಿಸಿದರು.

ಮೈಸೂರಿನಲ್ಲಿ  ಸ್ವಾತಂತ್ರಕ್ಕೋಸ್ಕರವಾಗಿ ಯಾರು ಯಾರು ಹೋರಾಟವನ್ನು ಮಾಡಿ ತನ್ನ ಪ್ರಾಣವನ್ನು.ತನ್ನ ಸರ್ವಸ್ವವನ್ನೂ, ಕಳೆದುಕೊಂಡು  ದೇಶಕ್ಕೋಸ್ಕರವಾಗಿ      ತ್ಯಾಗ ಮಾಡಿದವರು ನೆನಪಿಸಿಕೊಳ್ಳುವುದರ  ಜೊತೆಗೆ ತಾಯಿ ಭಾರತಾಂಬೆಯ 75 ವರ್ಷಗಳಲ್ಲಿ ಕರ್ನಾಟಕದ ಪಾತ್ರ ಬಿಂಬಿಸುವಂತಹ  ಸಾಹಿತ್ಯ, ಕಲೆ, ಸಂಸ್ಕೃತಿ, ಸ್ವತಂತ್ರದ ಇತಿಹಾಸ ಬಿಂಬಿಸುವಂತಹ ಎಲ್ಲಾ ಬಿತ್ತಿ  ಚಿತ್ರಗಳು ಮತ್ತು ವಿಶೇಷವಾಗಿ ವೇಷಭೂಷಣಗಳು,  ನೃತ್ಯ ಇವೆಲ್ಲದರ ಮೂಲಕವಾಗಿ ಆ ದಿನವನ್ನು ನೆನಪು ಮಾಡಿಕೊಂಡು ಮುಂದೆ ಬರುತ್ತಿರುವಂತಹ ಸ್ವಾತಂತ್ರ್ಯೋತ್ಸವವನ್ನು ನಾವು ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುನಂದಾ ಪಾಲನೇತ್ರ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ,ಹೆಚ್ಚುವರಿ ಆಯುಕ್ತರಾದ ರೂಪ. ಎಂ.ಜೆ ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿಂದಿನ ಲೇಖನಮೈಸೂರು ಅಭಿವೃದ್ಧಿ ಯೋಜನೆಗಳ ಚರ್ಚೆ: ಪ್ರತಾಪ್ ಸಿಂಹ ಪಂಥಾಹ್ವಾನಕ್ಕೆ ಡೇಟ್ ಫಿಕ್ಸ್ ಮಾಡಿದ ಎಂ. ಲಕ್ಷ್ಮಣ್
ಮುಂದಿನ ಲೇಖನಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ  ‘ಲಕ್ಷ್ಯ’ ಪ್ರಶಸ್ತಿ