ಮನೆ ಮನೆ ಮದ್ದು ಕರಿಮೆಣಸು

ಕರಿಮೆಣಸು

0

ಕರಿಮೆಣಸು ಮಸಾಲೆ ರೂಪದಲ್ಲಿ ಬಹಳ ಬಳಕೆಯಾಗುತ್ತದೆ. ಇದು ವಾಯುನಿವಾರಕ ಮತ್ತು ಪಾಚಕವಾಗಿರುತ್ತದೆ. ಆದ್ದರಿಂದಲೇ ಆರ್ಯುವೇದ, ಯುನಾನಿ ಔಷಧಿಗಳಲ್ಲಿ ಕರಿಮೆಣಸು ಒಳಗೊಂಡಿರುತ್ತದೆ. ವೈಜ್ಞಾನಿಕ ಪರೀಕ್ಷಣೆಯಿಂದ ಇದರಲ್ಲಿ ರೋಗ ಪ್ರತಿರೋಧಕ ಗುಣವಿರುವುದು ಕಂಡುಬಂದಿದೆ.

ಯಾರ ಮನೆಯಲ್ಲಿ ಕೆಂಪು ಬಾರದ ಬದಲು ಈ ಕರಿಮೆಣಸಿನ ಖಾರ ಉಪಯೋಗಿಸುತ್ತಾರೋ ಅವರು ಆಸ್ಪತ್ರೆಗಳಿಗೆ ಭೇಡಿ ನೀಡುವುದು ಅಪರೂಪ. ಇದೊಂದು ಬಳ್ಳಿ ಜಾತಿಯ ವನಸ್ಪತಿಯಾಗಿದ್ದು ಶಾಖೆಗಳಲ್ಲಿ ಕಾಳುಗಳ ಗುಚ್ಛಾವಾಗುತ್ತದೆ.

ಆರ್ಯುವೇದ ಪದ್ದತಿಯಂತೆ ಸ್ವಾದದಲ್ಲಿ ಖಾರ, ತೀಕ್ಷ್ಣ, ಉಷ್ಣ, ಪಿತ್ತಕಾರಕ, ವಾತ ಮತ್ತು ಕಫ ನಾಶಕ. ಬೆವರು ಹರಿಸುವುದು. ಪಚನದಲ್ಲಿ ಹಗುರ, ಉದರ ಮತ್ತು ಗಾಯಗಳ ಕ್ರಿಮಿ ನಾಶಗೊಳಿಸುತ್ತದೆ, ರುಚಿ ಉತ್ಪಾದಿಸುತ್ತದೆ. ಉದರ ವಾಯು, ಹೃದಯ ರೋಗಿಗಳಿಗೆ ಲಾಭದಾಯಕವಾಗಿದೆ. ನೇತ್ರ ರೋಗ, ನಾಸಿಕ ತೊಂದರೆ, ಸಿರೋ ರೋಗಗಳಲ್ಲಿ ಉಪಯುಕ್ತವಾಗಿದೆ. ಯುನಾನಿ ಯಂತೆ ಇದು ಕಾಮೋದ್ದೀಪಕ, ವಿರೇಚಕ, ಹಲ್ಲಿನ ತೊಂದರೆ ನಿವಾರಕ, ಯಕೃತ, ಸ್ನಾಯುಗಳ ನೋವು, ಜೀರ್ಣ ಜ್ವರ, ಸ್ತ್ರೀಯರ ಮಾಸಿಕ ತೊಂದರೆಗೆ ಇದು ಬಹಳ ಉಪಯುಕ್ತವಾಗಿದೆ.

ಔಷಧೀಯಾ  ಗುಣಗಳು :-

ದಮ್ಮು-ಕೆಮ್ಮು :-  ಕರಿಮೆಣಸು ಜೇನಿನಲ್ಲಿ ಬೆರೆಸಿ ನೆಕ್ಕುವುದರಿದ ಶೀತದಿಂದಾಗಿ ಕೆಮ್ಮು-ದಮ್ಮು ಹಾಗೂ ಎದೆನೋವು ಗುಣವಾಗುತ್ತದೆ. ಮತ್ತು ಪುಪ್ಪುಸದಿಂದ ಕಫ ಹೊರ ಹೋಗುತ್ತದೆ.

ಉದರ ಕ್ರಿಮಿ :- ಮೆಣಸಿನ ಪುಡಿ 1ಗ್ರಾಂ, ಕಾಲು ಲೀಟರ್ ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕ್ರಿಮಿಗಳು ನಾಶವಾಗುತ್ತದೆ.

ಶೀತ :- ಇದು ಸಾಮಾನ್ಯವಾದ ಮನೆಯ ಮದ್ದಾಗಿದೆ, ಬಿಸಿ ಹಾಲಿನಲ್ಲಿ ಮೆಣಸಿನ ಚೂರ್ಣ ಬೆರೆಸಿ ಅಥವಾ ಚಹಾ ಸೇವಿಸುವುದರಿಂದ ಶೀತ, ನೆಗಡಿ, ಶೀತಜ್ವರ ಗುಣವಾಗುತ್ತದೆ.

ಮೊಡವೆ :- ಇಪ್ಪತ್ತು ಮೆಣಸಿನ ಕಾಳು, ಗುಲಾಬಿ ಹೂವಿನ ನೀರಿನಲ್ಲಿ ಅರೆದು ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿ, ಮುಂಜಾನೆ ಬಿಸಿ ನೀರಿನಿಂದ ತೊಳೆಯಬೇಕು. ಇದರಿಂದ ಮುಖದ ಮೇಲಿನ ಕಲೆ, ಮೊಡವೆ, ಗೆರೆಗಳು ಮಾಯವಾಗಿ ಮುಖ ಸ್ವಚ್ಛವಾಗುತ್ತದೆ.

ಮೂತ್ರ ತಡೆ :- ಮೂತ್ರವು ತಡೆದು ತಡೆದುನೋವಿನಿಂದ ಬರುತ್ತಿದ್ದರೆ, ಮೆಣಸಿನ ಪುಡಿಯನ್ನು ದ್ರವಿತ ತುಪ್ಪದಲ್ಲಿ ಬೆರೆಸಿ ಎರಡು ಮೂರು ಹನಿಗಳಷ್ಟು ಮೂತ್ರ ಮಾರ್ಗದಲ್ಲಿ ಬಿಟ್ಟರೆ ಮೂತ್ರವು ಸಲೀಸಾಗಿ ಏನೂ ತೊಂದರೆಯಿಲ್ಲದೆ ಬರುತ್ತದೆ.

ಬಿಕ್ಕಳಿಕೆ :- ಸೂಜಿಯ ತುದಿಗೆ ಮೆಣಸಿನ ಕಾಳು ಚುಚ್ಚಿ ದೀಪದ ಮೇಲೆ ಸುಡಬೇಕು. ಇದರಿಂದ ಹೊರಟ ಹೊಗೆ ಮೂಸಬೇಕು. ಇದರಿಂದ ಬಿಕ್ಕಳಿಕೆ ಮತ್ತು ತಲೆ ನೋವು ಗುಣವಾಗುತ್ತದೆ.

ಕಣ್ಣು ಮಂಜು :- ಬೀಸಿದ ಮೆಣಸಿನ ಪುಡಿಯನ್ನು ತಾಜಾ ಬೆಣ್ಣೆಯಲ್ಲಿ ಬೆರೆಸಿ ಸೇವಿಸಿದರೆ ಕಣ್ಣುಗಳ ಮಂಜು ಕಡಿಮೆಯಾಗಿ ನೇತ್ರ ಜ್ಯೋತಿ ಹೆಚ್ಚುತ್ತದೆ.

ಸ್ಮರಣ ಶಕ್ತಿ :- ಬೆಣ್ಣೆಯ ಜತೆ ಮೆನಸಿನ ಪುಡಿ ಸಕ್ಕರೆಯನ್ನು ಬೆರೆಸಿ ದಿನಾಲೂ ಸೇವಿಸಿದರೆ, ಮೆದುಳಿನ ದುರ್ಬಲತೆ ಕಡಿಮೆಯಾಗುತ್ತದೆ.

ಹಾನಿಕಾರಕ ಅಂಶಗಳು :-

ಕರಿಮೆಣಸಿನ ಅಧಿಕ ಸೇವನೆಯಿಂದ ಗಂಟಲಿಗೆ ಹಾನಿಕಾರಕ, ಮೂತ್ರಪಿಂಡದ ರೋಗಿಗಳು ಇದನ್ನು ಉಪಯೋಗಿಸಬಾರದು.

ಹಿಂದಿನ ಲೇಖನರಾಘವೇಂದ್ರ ತವನಾಮವೇ ಮಧುರ
ಮುಂದಿನ ಲೇಖನಶೀರ್ಷಾಸನ – ಯೋಗಾಸನಗಳ ರಾಜ