ಮನೆ ಆರೋಗ್ಯ ರಕ್ತಸ್ರಾವ

ರಕ್ತಸ್ರಾವ

0

ಚಿಕ್ಕ ಮಕ್ಕಳಿಗೆ ರಕ್ತಸ್ರಾವವಾಗುವ ಸ್ಥಿತಿಯನ್ನು ಬ್ಲೀಡಿಂಗ್ ರಿಸೋರ್ಡರ್ಸ್ ಎನ್ನುತ್ತಾರೆ. ಯಾವುದೇ ಪೆಟ್ಟು, ಗಾಯವಿಲ್ಲದೆ ಇದ್ದಕ್ಕಿದ್ದಂತೆ ರಕ್ತಸ್ರಾವವಾಗುತ್ತದೆ. ಕೆಲವು ಮಕ್ಕಳಿಗೆ ಸಣ್ಣಪುಟ್ಟ ಪೆಟ್ಟಿಗೆಲ್ಲ. ಚರ್ಮ ಸುಟ್ಟಂತಾಗುತ್ತದೆ. ಚರ್ಮದ ಕೆಳಗೆ ರಕ್ತನಾಳಗಳು ಒಡೆದು ಗಡ್ಡೆಕಟ್ಟುತ್ತದೆ. ಮತ್ತೊಮ್ಮೆ ಒಂದೇ ಕಡೆಯಲ್ಲಿ ವಿವಿಧ ಭಾಗಗಳಲ್ಲಿ ಹೀಗಾಗುತ್ತದೆ. ಕೆಲವರಿಗೆ ರಕ್ತಗಾಸ್ರಾವವಾಗತೊಡಗಿದರೆ ನಿಲ್ಲದೆ ಸುರಿಯುತ್ತಲೇ ಇರುತ್ತದೆ. 

ಬ್ಲೀಡಿಂಗ್ ಡಿಸಾರ್ ಡರ್ಸ್(desardas)

ರಕ್ತದಲ್ಲಿ ಪ್ಲೇಟ್ ಲೆಟ್ಸ್ ಬಹು ಕಡಿಮೆಇರುವುದು. ರಕ್ತ ಹೆಪ್ಪುಗಟ್ಟದಲ್ಲೂ ಬೇಕಾಗುವ ಇತರೆ ಫ್ಯಾಕ್ಟರ್ಸ್ ಕಡಿಮೆಯಿರುವುದು ಬ್ಲೀಡಿಂಗ್ ರಿಸಾರ್ಡರ್ಸ್ ಮುಖ್ಯ ಕಾರಣ.

ಬ್ಲೀಡಿಂಗ್ ಡಿಸಾರ್ಡರ್ಸ್  ಹುಟ್ಟಿನಿಂದಲೇ ಇರಬಹುದು ಇಲ್ಲವೇ, ನಂತರ ಕಾಣಿಸಿಕೊಳ್ಳಬಹುದು.

ಪ್ರಯೋಗಾಲಯಗಳ ಪರೀಕ್ಷೆಗಳ ಮೂಲಕ ಬ್ಲೀಡಿಂಗ್ ಡಿಸಾರ್ಡರ್ಸ್ ನ್ನು ತಿಳಿಯಬಹುದು. ಬ್ಲೀಡಿಂಗ್ ಟೈಮ್, ಕ್ಲಾಟಿಂಗ್ (ಹೆಪ್ಪುಗಟ್ಟುವಿಕೆ) ಟೈಮ್ ಮೂಲಕ ಇದನ್ನು ತಿಳಿದುಕೊಳ್ಳುವಂತೆ, ಟಾರ್ನಿಕ್ ಪರೀಕ್ಷೆಯ ಮೂಲಕವೂ ತಿಳಿದುಕೊಳ್ಳಬಹುದು. bp ಪರೀಕ್ಷಿಸುವ ಪಟ್ಟಿಯನ್ನು ಕೈಗೆ ಕಟ್ಟಿ, ಗಾಳಿಯನ್ನು ಪಂಪ್ ಮಾಡಿ ಆ ವ್ಯಕ್ತಿಯ ಸಿಸ್ಟಾಲಿಕ್, ಡಯಾಸ್ಟೋಲಿಕ್ ಒತ್ತಡದ ನಡುವೆ 5 ನಿಮಿಷ ಇರಿಸಿ, ಆ ನಂತರ ಗಾಳಿಯನ್ನು ತೆಗೆದುನೋಡಿದರೆ ಪಟ್ಟಿ ಕಟ್ಟಿದ ಭಾಗದಲ್ಲಿ ರಕ್ತನಾಳಗಳು ಒಡೆದಿದ್ದರೆ ಬ್ಲೀಡಿಂಗ್ ಡಿಸಾರ್ಡರ್ಸ್ ಇದೆ ಎಂದು ನಿರ್ಧರಿಸಬಹುದು.

ಪರ್ಪೂರಾ

ಬ್ಲೀಡಿಂಗ್ ಡಿಸಾರ್ಡರ್ಸ್ ನಲ್ಲಿ ಪರ್ಪೂರಾಸ್ ಕೂಡ ಒಂದು. ಪರ್ಪೂರಾಸ್ ಇದ್ದರೆ ಚರ್ಮದ ಮೇಲೆ ಕೆಂಪಗೆ ರ್ಯಾ(rya)ಷಸ್ ಕಾಣಿಸುತ್ತದೆ. ಹಾಗೆ ಕಾಣಿಸಿಕೊಳ್ಳುವ ಕಾರಣ ಚರ್ಮದ ಕೆಳಗಿರುವ ಸಣ್ಣಸಣ್ಣ ರಕ್ತ ಕಣಗಳು ಹೊಡೆದಿರುವುದೇ ಆಗಿರುತ್ತದೆ. ಪರ್ಪೂರದಲ್ಲಿ ಹಲವು ವಿಧಗಳು ಇವೆ. ಬ್ಲೀಡಿಂಗ್ ಡಿಸಾರ್ಡರ್ಸ್ ಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿದರೆ, ಪರ್ಪೂರವನ್ನು ನಿರ್ಧರಿಸಬಹುದು. ಮುಖ್ಯವಾಗಿ ಪ್ಲೇಟ್ ಲೆಟ್ಸ್ ಬಹು ಕಡಿಮೆ ಇರುತ್ತದೆ.

ಹಿಮೋಫಿಲಿಯ

ಬ್ಲೀಡಿಂಗ್ ಡಿಸಾರ್ಡರ್ಸ್ ನಲ್ಲಿ ಹಿಮೋಫಿಲಿಯ ಕೂಡ ಒಂದು. ಹಿಮೋಫಿಲಿಯ ಸಮಸ್ಯೆ ತಾಯಿಗೆ ಇದ್ದರೆ ಆಕೆಗೆ ಹುಟ್ಟಿದ ಗಂಡುಮಗು ರಕ್ತಸ್ರಾವ ರೋಗದಿಂದ ನರಳುತ್ತದೆ. ಹೆಣ್ಣು ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಆ ಹೆಣ್ಣು ಮಕ್ಕಳಿಗೆ, ಗಂಡುಮಗು ಹುಟ್ಟಿದರೆ ಆ ಮಗುವಿಗೆ ಹಿಮೋಫಿಲಿಯ ಸಂಕ್ರಮಣವಾಗುತ್ತದೆ.

ಹಿಮೋಫಿಲಿಯಾ ಇರುವವರಿಗೆ ಪೆಟ್ಟು ಬಿದ್ದರೆ, ಕುಯ್ದುಕೊಂಡರೆ ರಕ್ತ ನಿಲ್ಲದಂತೆ ಸುರಿಯುತ್ತದೆ. ಸುನ್ನಿಯಂಥ ಸಣ್ಣ ಶಸ್ತ್ರಚಿಕಿತ್ಸೆ ಆದರೂ ನಿಯಂತ್ರಣವಿಲ್ಲದೆ ರಕ್ತಸುರಿಯುತ್ತದೆ. ಮೊಣಕೈ, ಕಾಲುಗಳಿಗೆ ಪೆಟ್ಟುಬಿದ್ದಾಗ ಕೀಲುಗಳ ಬಳಿ ಬಹಳ ಊತ ಬರುತ್ತದೆ.

ಪರೀಕ್ಷೆ :-

1.ಕಂಪ್ಲೀಟ್ ಹಿಮೋಗ್ರಾಮ್ 2. ಎದೆಯ ಎಕ್ಸರೇ 3. ಇ.ಸಿ.ಜಿ. 4. ಎಕೋ ಕಾರ್ಡಿಯೋಗ್ರಾಮ್ (ಇ.ಸಿ.ಜಿ)