ಮನೆ ಕ್ರೀಡೆ ಡಿ.6 ರಿಂದ 17 ರವರೆಗೆ ಅಂಧರ 3ನೇ ಟಿ20 ವಿಶ್ವಕಪ್ ಟೂರ್ನಿ

ಡಿ.6 ರಿಂದ 17 ರವರೆಗೆ ಅಂಧರ 3ನೇ ಟಿ20 ವಿಶ್ವಕಪ್ ಟೂರ್ನಿ

0

ಬೆಂಗಳೂರು(Bengaluru): ಅಂಧರ ಮೂರನೇ ಟಿ20 ವಿಶ್ವಕಪ್ ಟೂರ್ನಿಯು ಡಿಸೆಂಬರ್ ಆರರಿಂದ 17ರವರೆಗೆ ಭಾರತದಲ್ಲಿ ನಡೆಯಲಿದೆ ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯು (ಸಿಎಬಿಐ) ಅಧ್ಯಕ್ಷ ಮಹಾಂತೇಶ್ ಜಿ.ಕೆ. ತಿಳಿಸಿದರು.

ಕೆಎಸ್‌ಸಿಎಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಟೂರ್ನಿ ಆಯೋಜನೆಯಾಗಲಿದ್ದು, ಆತಿಥೇಯ ಭಾರತ ಸೇರಿ ಏಳು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಭಾಗವಹಿಸಲಿರುವ ಇನ್ನುಳಿದ ತಂಡಗಳಾಗಿವೆ ಎಂದರು.

ಡಿ.6ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ನೇಪಾಳಕ್ಕೆ ಮುಖಾಮುಖಿಯಾಗಲಿದೆ. ಫರೀದಾಬಾದ್‌ನಲ್ಲಿ ಈ ಪಂದ್ಯ ನಡೆಯಲಿದೆ. ಒಟ್ಟು 24 ಪಂದ್ಯಗಳು ನಡೆಯಲಿದ್ದು, 17ರಂದು ಫೈನಲ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಯುವರಾಜ್ ಸಿಂಗ್ ರಾಯಭಾರಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಪ್ರಚಾರ ರಾಯಭಾರಿಯಾಗಿದ್ದಾರೆ. 2017ರಲ್ಲಿ ನಡೆದಿದ್ದ ಟೂರ್ನಿಗೆ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು.

ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಕರ್ನಾಟಕದ ಪ್ರಕಾಶ್ ಜಯರಾಮಯ್ಯ, ಲೋಕೇಶ್ ಮತ್ತು ಸುನಿಲ್ ರಮೇಶ್ ಸ್ಥಾನ ಪಡೆದಿದ್ದಾರೆ.ಸಿಎಬಿಐ ಪ್ರಧಾನ ಕಾರ್ಯದರ್ಶಿ ಇ. ಜಾನ್ ಡೇವಿಡ್‌ ಮತ್ತು ಭಾರತ ತಂಡದ ನಾಯಕ ಅಜಯ್‌ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಭಾರತ ತಂಡ ಇಂತಿದೆ: ಅಜಯ್‌ಕುಯಮಾರ್ ರೆಡ್ಡಿ (ನಾಯಕ), ವೆಂಕಟೇಶ್ವರ ರಾವ್ ದುನ್ನಾ (ಉಪನಾಯಕ), ಲಲಿತ್ ಮೀನಾ, ಪ್ರವೀಣ್ ಕುಮಾರ್ ಶರ್ಮಾ, ಸುಜೀತ್ ಮುಂಡಾ, ನೀಲೇಶ್ ಯಾದವ್‌, ಸೋನು ಗೋಲ್ಕರ್, ಸುವೇಂದು ಮೆಹತಾ, ನಕುಲ್ ಬಡಾನಾಯಕ್, ಇರ್ಫಾನ್ ದಿವಾನ್, ಲೋಕೇಶ್, ತೊಂಪಕಿ ದುರ್ಗಾ ರಾವ್‌, ಸುನಿಲ್ ರಮೇಶ್, ಎ.ರವಿ, ಪ್ರಕಾಶ್ ಜಯರಾಮಯ್ಯ, ದೀಪಕ್ ಮಲಿಕ್‌, ದಿನಕರ್ ಜಿ.

ಹಿಂದಿನ ಲೇಖನಪುನಶ್ಚೇತನಗೊಂಡ ಬಲಿಜ ಸಂಘ: ಮೀನಾ ತೂಗುದೀಪ ಶ್ರೀನಿವಾಸ್
ಮುಂದಿನ ಲೇಖನದೇಶದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಮಕ್ಕಳ ಸಂಖ್ಯೆ ಹೆಚ್ಚಳ: ಟಿ.ರಾಮಸ್ವಾಮಿ