ಮನೆ ಕಾನೂನು ಕಾರವಾರ ಅಬಕಾರಿ ಡಿಸಿ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ: ಡಿಸಿ ಎಮ್​​.ರೂಪಾ ನಾಪತ್ತೆ

ಕಾರವಾರ ಅಬಕಾರಿ ಡಿಸಿ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ: ಡಿಸಿ ಎಮ್​​.ರೂಪಾ ನಾಪತ್ತೆ

0

ಉತ್ತರ ಕನ್ನಡ: ಕಾರವಾರ ಅಬಕಾರಿ ಡಿಸಿ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ ದಾಳಿ ಆಗುತ್ತಿದ್ದಂತೆ ಅಬಕಾರಿ ಡಿಸಿ ಎಮ್​​.ರೂಪಾ ನಾಪತ್ತೆಯಾಗಿದ್ದಾರೆ.

ಬೆಳ್ಳಂ ಬೆಳಿಗ್ಗೆ ಏಕಕಾಲಕ್ಕೆ ಉಡುಪಿ ಮತ್ತು ಕಾರವಾರದ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ, ಈವರೆಗೂ ಅಬಕಾರಿ ಡಿಸಿ M.ರೂಪಾ ಕಚೇರಿ ಹಾಗೂ ಮನೆಗೆ ಬಂದಿಲ್ಲ. ಈ ಹಿನ್ನಲೆ ಕಚೇರಿ ಸಿಬ್ಬಂದಿ ಕರೆದು ಸತತ 6 ಗಂಟೆಯಿಂದ ಅಧಿಕಾರಿಗಳು ದಾಖಲೆ ಕಲೆ ಹಾಕುತ್ತಿದ್ದಾರೆ.

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಬೀದರ್, ಕಲಬುರಗಿ, ವಿಜಯಪುರ, ಧಾರವಾಡ, ಕೋಲಾರ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ  ಲೋಕಾಯುಕ್ತ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿದ್ದಾರೆ. ಅದರಂತೆ ಭಾಲ್ಕಿ ಕಾರಂಜಾ ವಿಭಾಗದ ಇಇ ಶಿವಕುಮಾರ್​ ಸ್ವಾಮಿಗೆ ಸೇರಿದ ಮನೆಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೆಕಾರ್ ನೇತ್ರತ್ವದ ಸಿಬ್ಬಂದಿಯಿಂದ ದಾಳಿ ನಡೆಸಿದ್ದು, ಜೊತೆಗೆ ಕಲಬುರಗಿ ನಗರದ ಎಂ.ಬಿ.ಕಾಲೋನಿಯ ಮನೆಯಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನಸಂಸದ ಪ್ರತಾಪಸಿಂಹ ಅವರಿಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯ ಇದೆ: ಬಿ.ವೈ. ವಿಜಯೇಂದ್ರ
ಮುಂದಿನ ಲೇಖನರಾಜೀವ್ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ: ಸಿಎಂ ಸಿದ್ದರಾಮಯ್ಯ