ಧಮನಿಗಳ ಮೂಲಕ ರಕ್ತವು ಹರಿಯುವ ವೇಗವೂ, ಆ ರಕ್ತದ ಚಲನೆಯಲ್ಲಿ ತೋರುವ ಶಕ್ತಿಯುತವಾದ ಕ್ರಿಯೆಗೆ ರಕ್ತದ ಒತ್ತಡವೆನ್ನುತ್ತಾರೆ ಈ ರಕ್ತದ ಒತ್ತಡ ಪ್ರತಿಯೊಬ್ಬರಿಗೂ ಇರುತ್ತದೆ. ಇದು ಇರಲೇಬೇಕು ಹೃದಯವು ಒತ್ತಡ ಹಾಕಿ ರಕ್ತಕ್ಕೆ ಚಲನೆ ನೀಡುತ್ತದೆ. ಆಗ ರಕ್ತ ಒತ್ತಡದಿಂದ ರಕ್ತನಾಳಗಳಲ್ಲಿ ಮುನ್ನುಗ್ಗುತ್ತದೆ ಕ್ರಿಯೆಯಲ್ಲಿ ವ್ಯತ್ಯಾಸವಾದರೆ ರಕ್ತದ ಒತ್ತಡ ದೋಷ ಬರುತ್ತದೆ. ಇದು ಸಾಮಾನಾಂತರವಾಗಿದ್ದರೆ, ಯಾವ ದೋಷವಿರುವುದಿಲ್ಲ.ಇದರಲ್ಲಿ ಏರುಪೇರು ಅದರೆ ಮಾತ್ರ ಈ ದೋಷ ಬರುತ್ತದೆ.
ರಕ್ತದೊತ್ತಡವೆಂದರೆ ರಕ್ತವು ರಕ್ತನಾಳಗಳಲ್ಲಿ ಹರಿದು ಹೋಗುವಂತೆ ಹೃದಯವು ಹಾಕುವ ಒತ್ತಡಕ್ಕೆ ರಕ್ತದೊತ್ತಡ ವೆನ್ನುತ್ತೇವೆ.ಈ ರೀತಿ ಹೃದಯ ಒತ್ತಡ ಹಾಕಿದರೆ ಮಾತ್ರ ಶುದ್ಧ ರಕ್ತವು ರಕ್ತನಾಳಗಳನ್ನು ವಿಕಾಸ ಮಾಡಿಕೊಂಡು ಮುಂದೆ ಸಾಗುತ್ತದೆ. ಈ ರಕ್ತವು ದೇಹದ ಎಲ್ಲಾ ಅವಯವಗಳು ಕೆಲಸ ಮಾಡಲು ಅನುಕೂಲವಾಗುವಂತೆ ಅವಯವಗಳಲ್ಲಿರುವ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪ್ರೋಟೀನ್, ವಿಟಾಮಿನ್ ಯುಕ್ತ ಆಹಾರವನ್ನು ನೀಡಿ, ಅವಯವಗಳಲ್ಲಿ ಉತ್ಪತ್ತಿಯಾಗುವ ಇಂಗಾಲದ ಡೈಯಾಕ್ಸೈಡ್ ಮತ್ತು ನಾಶವಾದ ಮತ್ತು ನಾಶವಾದ ಜೀವಕೋಶಗಳು, ಅವು ವಿಸರ್ಜಿಸುವ ಕಶ್ಮಲಗಳನ್ನು ಹೊತ್ತು ಮತ್ತೆ ಹೃದಯವನ್ನು ಸೇರುತ್ತದೆ.ಇದನ್ನು ನಾವು ಮಲಿನ ರಕ್ತವೆನ್ನುತ್ತೇವೆ.
ಈ ರಕ್ತವು ನಮ್ಮ ದೇಹದಲ್ಲಿ ದೊಡ್ಡ ಸಣ್ಣ ಅತಿ ಸಣ್ಣ ರಕ್ತನಾಳಗಳಲ್ಲಿ ಹರಿದು ಹೋಗುತ್ತದೆ. ಈ ರೀತಿ ರಕ್ತವು ರಕ್ತನಾಳಗಳಲ್ಲಿ ಸುಮಾರು 60,000 ಮೈಲಿ ಒಟ್ಟು ಉದ್ದವಾಗಿ ಹರಿದು ಮತ್ತೇ ಹೃದಯ ಸೇರುತ್ತದೆ. ಆದ್ದರಿಂದ ಹೃದಯವು ಒತ್ತಡ ಹಾಕಿದರೆ ಮಾತ್ರ ಇಷ್ಟು ದೂರ ರಕ್ತ ಹರಿದು ಮತ್ತೆ ಹೃದಯಕ್ಕೆ ಬಂದು ಸೇರುತ್ತದೆ. ನಮ್ಮ ಹೃದಯದಲ್ಲಿ ಎರಡು ಪಾರ್ಶ್ವಗಳಿವೆ ಒಂದು ಎಡಪಾರ್ಶ್ವ ಮತ್ತೊಂದು ಬಲಪಾರ್ಶ್ವವಾಗಿ,ಒಂದೊಂದು ಪದಲ್ಲಿರ್ಶ್ವ ಎರಡು ಕೋಣೆಗಳಿವೆ.ಒಂದು ಮೇಲಿನ ಮತ್ತೊಂದು ಕೆಳಗಿನ ಕೋಣೆಗಳೆಂದು ಕರೆಯುತ್ತೇವೆ. ಈ ಎರಡು ಕೋಣೇಗಳ ಮಧ್ಯೆ ಒಂದು ಕವಟವಿದೆ. ಇದು ಕೆಳಮುಖವಾಗಿ ಮಾತ್ರ ತೆಗೆದುಕೊಳ್ಳುತ್ತದೆ.ಎಂದು ಮೇಲ್ಮುಖವಾಗಿ ತೆರೆಯದು ಬಲಪಾರ್ಶ್ವದ ಮೇಲೆ ಕೋಣೆಯಲ್ಲಿ ಮೇಲಿನರಕ್ತ ಮತ್ತು ಎಡರ್ಶ್ವದಮ್ತ ಮೇಲಿನ ಕೋಣೆಯಲ್ಲಿ ಶುದ್ಧ ರಕ್ತ ಶೇಖರವಾಗಿರುತ್ತದೆ.
ನಮ್ಮ ದೇಹದಲ್ಲಿ ಈ ಮಲಿನ ರಕ್ತವನ್ನು ಶುದ್ಧೀಕರಿಸಲು ಎರಡು ಅಂಗಗಳಿವೆ. ಒಂದು ಶ್ವಕೋಶಗಳು ಮತ್ತೊಂದು ಮೂತ್ರಪಿಂಡಗಳು. ಈ ಶ್ವಾಸಕೋಶವು ನಮ್ಮ ಮಲಿನ ರಕ್ತದಲ್ಲಿರುವ ಇಂಗಾಲದ ಡೈಯಾಕ್ಸೈಡ್ ಅನ್ನು ಹೊರ ಬಿಟ್ಟು ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ರಕ್ತ ಶುದ್ಧ ಮಾಡುತ್ತದೆ. ಮೂತ್ರಪಿಂಡಗಳು ನಮ್ಮ ರಕ್ತದಲ್ಲಿರುವ ಅಶುದ್ಧ ಕಶ್ಮಲಗಳು ವಿಷಯುಕ್ತವಾದ ಔಷಧಗಳನ್ನು ಶೋಷಣೆ ಮಾಡಿ ತೆಗೆದು ಸಣ್ಣ ಕರುಳಿನಿಂದ ಬರುವ ದ್ರವಯುಕ್ತವಾದ ಪ್ರೋಟೀನ್, ವಿಟಾಮಿನ್ ಯುಕ್ತವಾದ ಆಹಾರಗಳನ್ನು ರಕ್ತಕ್ಕೆ ನೀಡಿ ಶಕ್ತಿಯುತಗೊಳಿಸುತ್ತದೆ.
ಹೃದಯವು ನಿಮಿಷಕೆ 72 ಸಲ ಮಿಡಿಯುತ್ತದೆ.ಈ ರೀತಿ ಒಂದು ಸಲ ಮಿಡಿದಾಗ ಹೃದಯದ ಎಡಪಾರ್ಶ್ವದಿಂದ ಮೇಲಿನ ಕೋಣೆಯ ಶುದ್ಧ ರಕ್ತವು ಒತ್ತಡದಿಂದ ಕವಾಟದ ಮೂಲಕ ಕೆಳಕೋಣೆಗೆ ಹರಿಯುತ್ತದೆ.ಆಗ ಕೆಳಕೋಣೆಯಲ್ಲಿ ನಿಂತ ರಕ್ತವು ಒತ್ತಡದಿಂದ ಕವಾಟದ ಮೂಲಕ ರಕ್ತನಾಳಗಳನ್ನು ವಿಕಾಸಗೊಳಿಸುತ್ತಾ ಮುಂದೆ ಸಾಗುತ್ತದೆ.ಅದು ಒಟ್ಟು 60,000 ಮೈಲಿ ಸುತ್ತಿ ಮತ್ತೆ ಮಲಿನ ರಕ್ತವಾಗಿ ಹೃದಯದ ಬಲಪಾರ್ಶ್ವದ ಮೇಲಿನ ಕೋಣೆಯನ್ನು ಸೇರುತ್ತದೆ. ಈ ರೀತಿ ಮಲಿನ ರಕ್ತವು ಬಲಪಾರ್ಶ್ವಸೇರುವ ಮೊದಲು ಮೂತ್ರಪಿಂಡಗಳಲ್ಲಿ ಮಲಿನ ದ್ರವರೂಪದ ಕಲ್ಮಶಗಳನ್ನು ಬಿಟ್ಟು ಶುದ್ಧವಾದ ಪೌಷ್ಠಿಕ ಆಹಾರವನ್ನು ಮಾತ್ರ ತೆಗೆದುಕೊಂಡು ಬಂದಿರುತ್ತದೆ. ಮತ್ತೊಂದು ಸಲ ಹೃದಯ ಮಿಡಿದಾಗ ಬಲಪಾರ್ಶ್ವದ ಮೇಲಿನ ಕೋಣೆಯ ಮಲಿನ ರಕ್ತವು ಒತ್ತಡದಿಂದ ಕವಟದ ಮೂಲಕ ಕೆಳಗಿನ ಕೋಣೆಗೆ ಹರಿದಾಗ ಕೆಳಗಿನ ಕೋಣೆಯಲ್ಲಿ ನಿಂತ ರಕ್ತವು ಅದೇ ಒತ್ತಡದಿಂದ ಕೆಳಗಿನ ಕೋಣೆಯಿಂದ ರ್ಶ್ವಸಕೋಶಗಳಿಗೆ ಪುಲಮೋನರಿ ರಕ್ತನಾಳ ಮೂಲಕ ಕಡೆ ಹರಿಯುತ್ತದೆ. ಈ ಶ್ವಾಸಕೋಶಗಳಲ್ಲಿ ಮಲಿನ ರಕ್ತ ಶುದ್ಧವಾಗಿ ಮತ್ತೆ ಹೃದಯದ ಎಡ ಪಿರ್ಶ್ವದ ಮೇಲಿನ ಕೋಣೆಗೆ ತಲುಪುತ್ತದೆ.
ನಮ್ಮ ಹೃದಯವು ಒಂದು ಸಲ 70 ಮಿಲಿಮೀಟರ್ ರಕ್ತವನ್ನು ಒತ್ತಡದಿಂದ ಹೊರ ತಳ್ಳುತ್ತದೆ ಈ ರೀತಿ ನಿಮಿಷಕ್ಕೆ 72 ಸಲ ಹೃದಯ ಬಡಿದಾಗ 72 ಸಲವೂ ಹೃದಯ ರಕ್ತವನ್ನು ಒತ್ತಡದಿಂದ ಹೊರ ತಳ್ಳುತ್ತದೆ ಅಂದರೆ ಪ್ರತಿ ಸಲ 70 ಮಿಲಿಮೀಟರ್ ರಕ್ತವನ್ನು ತಳ್ಳಿದರೆ,ನಿಮಿಷಕ್ಕೆ 72 ಸಲ ರಕ್ತ ವರ ತಳ್ಳಿದರೆ ಸುಮಾರು 5000 ಮಿಲಿಲೀಟರ್ರಕ್ತವು ಹೃದಯದಲ್ಲಿ ಒಂದು ನಿಮಿಷದಲ್ಲಿ ಸಂಚರಿಸುತ್ತದೆ. ಒಂದು ದಿನಕ್ಕೆ 6000 ಲೀಟರ್ ರಕ್ತವನ್ನು ಈ ಮುಷ್ಟಿಗಾತ್ರದ ಹೃದಯ ಪಂಪ್ ಮಾಡುತ್ತದೆಂದರೆ ಆಶ್ಚರ್ಯವೇ ಸರಿ.
ಒಬ್ಬ ಸಾಮಾನ್ಯ ಆರೋಗ್ಯವಂತನ ದೇಹದಲ್ಲಿ ಯಾವಾಗಲೂ ಐದು ಲೀಟರ್ ರಕ್ತ ಹರಿಯುತ್ತಿರುತ್ತದೆ. ಈ ರೀತಿ ರಕ್ತನಾಳಗಳು ಮೂರು ವಿಧಗಳಲ್ಲಿ ಇರುತ್ತದೆ. ಶುದ್ಧವಾದ ರಕ್ತನಾಳ ದಮನಿಗಳು ಸೂಕ್ಷ್ಮರಕ್ತನಾಳಗಳು, ಅತಿ ಸೂಕ್ಷ್ಮ ರಕ್ತನಾಳಗಳಲ್ಲಿ ಹರಿದು ಮತ್ತೆ ಅಲ್ಲಿಂದಲೇ ಮೇಲಿನ ರಕ್ತನಾಳಗಳ ಮುಖಾಂತರವಾಗಿ ರಕ್ತ ಹಿಂತಿರುಗಿ ಹೃದಯವನ್ನು ಸೇರುತ್ತದೆ. ಹೀಗೆ ಹೃದಯ ಸೇರುವಾಗ ಅಲ್ಪ ಪ್ರಮಾಣದ ರಕ್ತವು ಮೂತ್ರಕೋಶಗಳ ಕಡೆ ಹೋಗಿ ಶುದ್ಧವಾಗಿ ಬರುತ್ತದೆ ಇದು ಸುಮಾರು ಎರಡು ಸಾವಿರ ಲೀಟರ್ ರಕ್ತ ಪ್ರತಿನಿಧಿ ಶುದ್ದಿಗೊಳಿಸುತ್ತದೆ ರಕ್ತ ಫಿಲ್ಟರ್ ಆಗಿ ಬರುತ್ತದೆ .
ಈ ರೀತಿ ರಕ್ತ ಸುಲಭವಾಗಿ ದೇಹದಲ್ಲಿ ಸುಮಾರು 60,000 ಮೈಲಿ ದೂರವನ್ನು ಸುತ್ತಿಬರಲು ಅದಕ್ಕೆ ಶಕ್ತಿ ಬೇಕು.ಈ ಶಕ್ತಿಯೇ ಹೃದಯವು ಹಾಕುವ ಒತ್ತಡದಲ್ಲಿರುತ್ತದೆ ಹೃದಯವು ಯಾವ ಇಂಧನ ಶಕ್ತಿಯಿಲ್ಲದೆ ಕೇವಲ ದೇವಶಕ್ತಿ ಆಧಾರವಾಗಿ ಕೆಲಸ ಮಾಡುತ್ತದೆ. ಈ ರೀತಿ ಹೃದಯವು ರಕ್ತದ ಮೇಲೆ 120 ಎಂ.ಎಂ.ಎಚ್. ಜಿ ಒತ್ತಡವನ್ನು ತರುವುದರಿಂದ ರಕ್ತವು ದೇಹದ ಪೂರ್ತಿ ರಕ್ತನಾಳಗಳಲ್ಲಿ ಹರಿದು ಮತ್ತೆ ಹೃದಯವನ್ನು ಸೇರುವಾಗ ಶೂನ್ಯ ಒತ್ತಡದಿಂದ ಸೇರುತ್ತದೆ. ಹೃದಯದ ಎಡ ಪಾರ್ಶ್ವಕ್ಷದ ಮೇಲಿನ ಕೋಣೆಯಿಂದ ಒತ್ತಡದಿಂದ ಹರಿದು ರಕ್ತ ಕೆಳಕೋಣೆಯನ್ನು ಸೇರುತ್ತದೆ. ಆಗ ಮೇಲಿನ ಕೋಣೆಯಲ್ಲಿ ರಕ್ತ ಖಾಲಿಯಾಗಿ ತಕ್ಷಣ ಶ್ವಾಸಕೋಶದಿಂದ ಅಲ್ಲಿಗೆ ರಕ್ತ ಹರಿದು ಬರುತ್ತದೆ.ಮತ್ತೆ ಮುಂದಿನ ಹೃದಯ ಬಡಿತದಿಂದ ಮೇಲಿನ ಕೋಣೆಯ ರಕ್ತ ಕೆಳಗೆ ಕವಾಟದಿಂದ ಹರಿಯುತ್ತದೆ. ಕೆಳ ಕೋಣೆಯಲ್ಲಿ ನಿಂತ ರಕ್ತ.ಒತ್ತಡದಿಂದ ಮತ್ತೆ ಶುದ್ಧ ರಕ್ತನಾಳ ದಮನಿಗಳಲ್ಲಿ ಹರಿಯುತ್ತದೆ.