ಮನೆ ರಾಜ್ಯ ಬೆತ್ತಲೆಗೊಳಿಸಿ, ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಕೃಷಿ ಹೊಂಡದಲ್ಲಿ ಶವ ಪತ್ತೆ

ಬೆತ್ತಲೆಗೊಳಿಸಿ, ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಕೃಷಿ ಹೊಂಡದಲ್ಲಿ ಶವ ಪತ್ತೆ

0

ಗದಗ : ವ್ಯಕ್ತಿಯೋರ್ವನನ್ನು ಬೆತ್ತಲೆಗೊಳಿಸಿ, ಕೈ,ಕಾಲು ಕಟ್ಟಿ ನೀರಿನಲ್ಲಿ ಎಸೆದಿರುವ ಘಟನೆ ತಾಲೂಕಿನ‌ ಕಣಗಿನಹಾಳ ಗ್ರಾಮದಲ್ಲಿ ನಡೆದಿದೆ.

ಈಶಪ್ಪ ಕುರಿ ಎಂಬುವರ ಜಮೀನಿನ ನೀರಿನ ಹೊಂಡದಲ್ಲಿ ಸುಮಾರು 35 ರಿಂದ 40 ವರ್ಷದ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಹೆಸರು ವಿಳಾಸ ಇನ್ನೂ ತಿಳಿದು ಬಂದಿಲ್ಲ.

ದುಷ್ಕರ್ಮಿಗಳು ವ್ಯಕ್ತಿಯನ್ನು ಒಳ ಉಡುಪುನಿಂದ ಕೈ ಹಾಗೂ ಪ್ಯಾಂಟ್‌ನಿಂದ ಕಾಲು ಕಟ್ಟಿ ನೀರಿನಲ್ಲಿ ಎಸೆದಿದ್ದಾರೆ. ಮುಖ, ಕುತ್ತಿಗೆ ಹಾಗೂ ತಲೆಗೆ ಗಾಯವಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆತ್ತಲೆಗೊಳಿಸಿ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ಎಸ್.ಪಿ ರೋಹನ್‌ಜಗದೀಶ್, ಡಿವೈಎಸ್ಪಿ ಮುರ್ತುಜಾ ಖಾದ್ರಿ ಹಾಗೂ ಸಿಪಿಐ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.