ಮನೆ ಅಪರಾಧ ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ

ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ

0

ಸಂಕೇಶ್ವರ: ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆ ಬಳಿ ಯುವಕನ ಶವವೊಂದು ಪತ್ತೆಯಾಗಿದ್ದು, ಯುವಕನ ಮುಖದ ತುಂಬೆಲ್ಲಾ ಗಾಯಗಳಾಗಿರುವ ಹಿನ್ನೆಲೆ ಕೊಲೆ ಮಾಡಿ ಬಿಸಾಕಿರುವ ಸಂಶಯ ವ್ಯಕ್ತವಾಗಿದೆ.

ಸಂಕೇಶ್ವರ ಪಟ್ಟಣದ ಬೈಪಾಸ್ ರಸ್ತೆಯ ಗಡಹಿಂಗ್ಲಜ್ ರಸ್ತೆಯ ಬಳಿ ಸುಮಾರು 25-30 ವರ್ಷ ವಯಸ್ಸಿನ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ.

ಯುವಕನ ಟಿ ಶರ್ಟ್ ಮೇಲೆ ಶಿವರಾಜ್ ಕಾಲೇಜ್ ಎಂದು ಬರೆಯಲಾಗಿದ್ದು, ಈತ ಮಹಾರಾಷ್ಟ್ರ ಮೂಲದವನಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಹಿಂದಿನ ಲೇಖನಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ
ಮುಂದಿನ ಲೇಖನಕೊಲೆಸ್ಟ್ರಾಲ್