ಮನೆ ರಾಜಕೀಯ ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸ್ಐಟಿ ನಡೆಸಲಿ: ಸಿ ಟಿ ರವಿ

ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸ್ಐಟಿ ನಡೆಸಲಿ: ಸಿ ಟಿ ರವಿ

0

ಬೆಂಗಳೂರು: ಪೊಲೀಸರ ವಶದಲ್ಲಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ಪೆನ್ ಡ್ರೈವ್ ಗಳ ಬಗ್ಗೆ ಮೂಲ ಮಾಹಿತಿಯನ್ನು ಬಹಿರಂಗಗೊಳಿಸಿದರೆ ಸರ್ಕಾರಕ್ಕೆ ಸಂಚಕಾರ ಎಂದು ಹೇಳಿರುವುದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಭೀತಿಯುಂಟಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಸಿ ಟಿ ರವಿ ಹೇಳಿದರು.

Join Our Whatsapp Group

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮತ್ತು ಡಿಕೆ ಶಿವಕುಮಾರ್ ನಿರ್ದೋಷಿಗಳು ಅಂತ ಹೇಳಿದ್ದಾರೆ, ಅದರೆ ಪ್ರಕರಣದಲ್ಲಿ ಅನುಮಾನದ ಮುಳ್ಳು ಕಾಂಗ್ರೆಸ್ ಕಡೆ ವಾಲುತ್ತಿರುವುದರಿಂದ ಮತ್ತು ಇದರ ರಾಜಕೀಯ ದುರ್ಲಾಭ ಪಡೆಯುವ ಹುನ್ನಾರ ಮೊದಲ ದಿನದಿಂದಲೇ ನಡೆಯುತ್ತಿರುವುದರಿಂದ ತನಿಖೆಯನ್ನು ಹಾಲಿ ಸುಪ್ರೀಮ್ ಕೋರ್ಟ್ ಇಲ್ಲವೇ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸಐಟಿ ನಡೆಸಲಿ ಎಂದು ರವಿ ಹೇಳಿದರು.

ತಪ್ಪು ಯಾರೇ ಮಾಡಿರಲಿ, ಅವರಿಗೆ ಶಿಕ್ಷೆಯಾಗಬೇಕು ಆದರೆ ಸಿದ್ದರಾಮಯ್ಯ ಅವರು ಪ್ರಾಮಾಣಿಕವಾದ ಹೇಳಿಕೆಗಳನ್ನು ನೀಡಿದ್ದೇಯಾದರೆ, ತಾನು ಹೇಳಿದಂತೆ ಹಾಲಿ ನ್ಯಾಯಾಧೀಶರೊಬ್ಬರ ಉಸ್ತುವಾರಿಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯಾಗಲಿ ಎಂದು ರವಿ ಹೇಳಿದರು.

ಹಿಂದಿನ ಲೇಖನಗರ್ಭಧಾರಣೆ ಕುರಿತ ಕೃತಿಯಲ್ಲಿ ‘ಬೈಬಲ್’ ಪದ ಬಳಕೆ: ನಟಿ ಕರೀನಾ ಕಪೂರ್ ಖಾನ್‌ಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್
ಮುಂದಿನ ಲೇಖನಭರಮಸಾಗರ: ಮದುವೆಯಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು