ಮನೆ ಮನರಂಜನೆ ಶೂಟಿಂಗ್ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್’ಗೆ ಗಂಭೀರ ಗಾಯ

ಶೂಟಿಂಗ್ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್’ಗೆ ಗಂಭೀರ ಗಾಯ

0

ಹೈದರಾಬಾದ್‌’ನಲ್ಲಿ ಹೆಸರಿಡದ ಚಿತ್ರವೊಂದರ ಚಿತ್ರೀಕರಣದಲ್ಲಿದ್ದ ಬಾಲಿವುಡ್‌’ನ ಬಿಗ್‌ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ವೇಳೆ ಬಿದ್ದು ಪಕ್ಕೆಲುಬಿಗೆ ಗಂಭೀರ ಗಾಯವಾಗಿದೆ.

ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬು ಮುರಿದಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅಮಿತಾಬ್ ಬಚ್ಚನ್, ಹೈದರಾಬಾದ್‌’ನಲ್ಲಿ ಪ್ರಾಜೆಕ್ಟ್ ‘ಕೆ’ ಚಿತ್ರೀಕರಣದಲ್ಲಿ, ಆಕ್ಷನ್ ದೃಶ್ಯ ಚಿತ್ರಿಸುವ ಸಮಯದಲ್ಲಿ, ನನಗೆ ಗಾಯವಾಗಿದೆ. ಪಕ್ಕೆಲುಬು ಮುರಿದಿದೆ. ಹೈದರಾಬಾದ್‌’ನ ಎಐಜೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಮನೆಗೆ ಮರಳಿರುವೆ. ನೋವಾಗುತ್ತಿದೆ. ಅಗತ್ಯ ಚಿಕಿತ್ಸೆ ನೀಡಲಾಗಿದೆ. ಚೇತರಿಕೆಗೆ ಕೆಲ ದಿನಗಳು ಬೇಕು. ವಿಶ್ರಾಂತಿ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.

ಚಿತ್ರೀಕರಣವು ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬೈನ ನಿವಾಸದಲ್ಲಿ ಅಮಿತಾಭ್‌ ವಿಶ್ರಾಂತಿ ಪಡೆಯುತ್ತಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಅಮಿತಾಭ್‌ ಎರಡು ಸಲ ಕೋವಿಡ್‌’ಗೆ ತುತ್ತಾಗಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಬ್‌ ಹೇಳಿಕೊಂಡಿದ್ದರು.

ಹಿಂದಿನ ಲೇಖನಪೊಲೀಸರ ವಿರುದ್ಧ ನ್ಯಾಯಾಲಯಗಳು ನೀಡುವ ಕಠಿಣ ಹೇಳಿಕೆಗಳಿಂದ ಅವರ ಕೆಲಸದ ಮೇಲೆ ಪರಿಣಾಮ: ದೆಹಲಿ ಹೈಕೋರ್ಟ್ ಎಚ್ಚರಿಕೆ
ಮುಂದಿನ ಲೇಖನಶಾಲಾ ವಿದ್ಯಾರ್ಥಿಗಳಿದ್ದ ಕ್ರೂಸರ್ ಪಲ್ಟಿ; ಹಲವರಿಗೆ ಗಂಭೀರ ಗಾಯ