ಮನೆ ಸುದ್ದಿ ಜಾಲ ದೆಹಲಿ ವಿಧಾನಸಭೆಗೆ ಮತ್ತೆ ಇಮೇಲ್ ಮೂಲಕ ಬಾಂಬ್ ಬೆದರಿಕೆ..!

ದೆಹಲಿ ವಿಧಾನಸಭೆಗೆ ಮತ್ತೆ ಇಮೇಲ್ ಮೂಲಕ ಬಾಂಬ್ ಬೆದರಿಕೆ..!

0

ನವದೆಹಲಿ : ದೆಹಲಿ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಈ ಹಿಂದೆ ವಿಧಾನಸಭೆಯಲ್ಲಿ ಬಿಜೆಟ್ ಅಧಿವೇಶನ ನಡೆಯುತ್ತಿದ್ದ ವೇಳೆಯೂ ಬಾಂಬ್ ಬೆದರಿಕೆ ಬಂದಿತ್ತು. ಇಂದು (ಏ.9) ವಿಧಾನಸಭೆಗೆ ಸಂಬಂಧಿಸಿದ ಹಲವು ಸರ್ಕಾರಿ ಮತ್ತು ಇತರ ಇನ್‌ಬಾಕ್ಸ್ಗಳಿಗೆ ಸಂದೇಶ ಬಂದಿತ್ತು.

ಈ ಇಮೇಲ್‌ನಲ್ಲಿ ಇಂದು ಯಾವುದೇ ಸಮಯದಲ್ಲಾದರೂ ವಿಧಾನಸಭೆ, ಸಚಿವಾಲಯ, ಕೆಲ ಶಾಲೆಗಳು ಮತ್ತು ಯಾವುದಾದರೊಂದು ಮೆಟ್ರೋ ಸ್ಟೇಷನ್‌ಗಳಲ್ಲಿ ಸ್ಫೋಟಗಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಆದರೆ ಸ್ಫೋಟಕಗಳ ವಿವರ, ನಿಖರ ಸಮಯ ಅಥವಾ ಬೇರೆ ಯಾವುದೇ ನಿರ್ದಿಷ್ಟ ಮಾಹಿತಿ ಉಲ್ಲೇಖಿಸಿಲ್ಲ.

ಬೆದರಿಕೆ ಮಾಹಿತಿ ಬಂದ ತಕ್ಷಣ ದೆಹಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಬಾಂಬ್ ನಿಷ್ಕ್ರೀಯ ತಂಡಗಳೊಂದಿಗೆ ವಿಧಾನಸಭೆ ಪರಿಸರ, ಸಚಿವಾಲಯ, ಶಾಲೆಗಳು ಮತ್ತು ಮೆಟ್ರೋ ಸ್ಟೇಷನ್‌ಗಳಲ್ಲಿ ತಪಾಸಣೆ ಮಾಡಲಾಗಿದೆ. ಈ ಘಟನೆಯ ನಂತರ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.