ದೆಹಲಿಯ ಆರ್ ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಪಶ್ಚಿಮ ವಿಹಾರ್ನಲ್ಲಿರುವ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ಗೆ ಇ-ಮೇಲ್ ಮೂಲಕ ಇಂದು ಬಾಂಬ್ ಬೆದರಿಕೆ ಬಂದಿದೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ದೆಹಲಿ ಅಗ್ನಿಶಾಮಕ ಇಲಾಖೆಗೆ ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲಾಯಿತು.
ಬೆದರಿಕೆ ಮೇಲ್ ಬಂದ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಿದ್ದು, ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಎರಡೂ ಶಾಲೆಗಳಲ್ಲಿ ತಪಾಸಣೆ ನಡೆಯುತ್ತಿದೆ ಮತ್ತು ಇದುವರೆಗೆ ಅನುಮಾನಾಸ್ಪದವಾದದ್ದೇನೂ ಕಂಡುಬಂದಿಲ್ಲ.
ದೆಹಲಿಯ ಎರಡು ಮತ್ತು ಹೈದರಾಬಾದ್ನ ಒಂದು ಸೇರಿದಂತೆ ರಾಷ್ಟ್ರದಾದ್ಯಂತ ಹಲವಾರು ಸಿಆರ್ಪಿಎಫ್ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಒಂದು ತಿಂಗಳ ನಂತರ ಈ ಇತ್ತೀಚಿನ ಘಟನೆ ನಡೆದಿದೆ.
ಅಕ್ಟೋಬರ್ 21 ರ ರಾತ್ರಿ ತಮಿಳುನಾಡಿನ ಸಿಆರ್ ಪಿಎಫ್ ಶಾಲೆಗೆ ಮೊದಲ ಬಾರಿಗೆ ಬೆದರಿಕೆ ಬಂದಿದ್ದು, ಅದರ ನಂತರ ದೇಶದ ಎಲ್ಲಾ ಅಂಗಸಂಸ್ಥೆ ಶಾಲೆಗಳಿಗೆ ಎಚ್ಚರಿಕೆಯನ್ನು ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ಆ ಸಮಯದಲ್ಲಿ ತಿಳಿಸಿದ್ದಾರೆ.