ಮನೆ ಅಪರಾಧ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ವ್ಯಕ್ತಿಯ ಬಂಧನ

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ವ್ಯಕ್ತಿಯ ಬಂಧನ

0

ಬೆಂಗಳೂರು(Bengaluru): ವಿಧಾನಸೌಧದಲ್ಲಿ ಬಾಂಬ್ ಇರಿಸಿರುವುದಾಗಿ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ,

ನಿನ್ನೆ(ಶುಕ್ರವಾರ) ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಕೆ ಕರೆ ಮಾಡಿದ್ದ ಆರೋಪಿಯು ʼವಿಧಾನಸೌಧದಲ್ಲಿ ಬಾಂಬ್‌ ಇರಿಸಲಾಗಿದೆ. ಸದ್ಯದಲ್ಲೇ ಸ್ಪೋಟಗೊಳ್ಳಲಿದೆ ಎಂದು ಬೆದರಿಕೆ ಕರೆ ಮಾಡಿದ ಹಿನ್ನೆಲೆ ಕೋಡಲೇ ಎಚ್ಚೆತ್ತುಕೊಂಡ ಪರಿಶೀಲನೆ ಮಾಡಲಾಗಿತ್ತು.
ತದ ನಂತರ ಇದು ಹುಸಿ ಕರೆ ಎಂದು ತಿಳಿದುಬಂದಿದ್ದು, ಕರೆ ಮಾಡಿದವರನ ವಿರುದ್ಧ ಪ್ರಕರಣವನ್ನು ದಾಖಲಿಸಿ ಹುಡುಕಾಟ ನಡೆಸಲಾಗಿತ್ತು.
ಹೆಬ್ಬಗೋಡಿ ನಿವಾಸಿಯಾದ 41 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ಎಂದು ತಿಳಿದುಬಂದಿದ್ದು, ಈತನನ್ನು ಪರಪ್ಪನ ಅಗ್ರಹಾರ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

ಕರೆ ಮಾಡಲು ಕಾರಣವೇನು ಎಂಬುರದ ಬಗ್ಗೆ ವಿಚಾರಣೆಯ ನಂತರವಷ್ಟೇ ತಿಳಿಯಬೇಕಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಹಿಂದಿನ ಲೇಖನಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದರ ಬೊಂಬಾಟ್ ಲಾಭ!
ಮುಂದಿನ ಲೇಖನ`ಕಾಂತಾರ’ ಸಿನಿಮಾ ಮೆಚ್ಚಿಕೊಂಡ ಕಿಚ್ಚ ಸುದೀಪ್