ಕೀವ್: ಪೂರ್ವ ಉಕ್ರೇನ್‌ನ ನಗರಗಳ ಮೇಲೆ ರಷ್ಯಾದ ಪಡೆಗಳಿಂದ ಬಾಂಬ್ ದಾಳಿ ಮುಂದುವರೆದಿದ್ದು, ಇಝಿಯಂ ಪಟ್ಟಣದಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಯನ್ನು ಗುರಿಯಾಗಿಸಿ ಶುಕ್ರವಾರ ಬಾಂಬ್ ದಾಳಿ ನಡೆಸಲಾಗಿದೆ.
ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ. ಈ ಆಸ್ಪತ್ರೆಯಲ್ಲಿ ಒಟ್ಟು 330 ಜನರಿದ್ದರು. ಗಾಯಗೊಂಡಿರುವ 73 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಹಾರ್ಕಿವ್ ಪ್ರದೇಶದ ಗವರ್ನರ್ ಓಲೆಹ್ ಸಿನೆಗುಬೊವ್ ಹೇಳಿದ್ದಾರೆ.
ದಾಳಿಯಲ್ಲಿ ಹಲವರು ಸಾವಿಗೀಡಾಗಿದ್ದು, ಈ ಕುರಿತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಇದು ‘ನಾಗರಿಕರ ಮೇಲೆ ನಡೆದ ಕ್ರೂರ ದಾಳಿ’ ಎಂದು ಗವರ್ನರ್ ತಿಳಿಸಿದ್ದಾರೆ.