ಮನೆ ಸುದ್ದಿ ಜಾಲ ಭಾರತ-ಪಾಕ್ ಗಡಿ ಎಲ್ಒಸಿ ಬಳಿ ಸೇನಾ ಹೆಲಿಕಾಪ್ಟರ್ ಪತನ

ಭಾರತ-ಪಾಕ್ ಗಡಿ ಎಲ್ಒಸಿ ಬಳಿ ಸೇನಾ ಹೆಲಿಕಾಪ್ಟರ್ ಪತನ

0

ಶ್ರೀನಗರಭಾರತ-ಪಾಕಿಸ್ತಾನದ ಗಡಿ ಪ್ರದೇಶ ಗಡಿ ನಿಯಂತ್ರಣ ರೇಖೆ (ಎಲ್ ಒಸಿ)ಬಳಿ ಸೇನಾ ಹೆಲಿಕಾಪ್ಟರ್ ಶುಕ್ರವಾರ ಪತನವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಗುರೆಜ್ ಸೆಕ್ಟರ್‌ನ ಬರೌಮ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ.

ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಹೆಲಿಕಾಪ್ಟರ್ ಪತನಗೊಂಡಿದ್ದು, ತಕ್ಷಣಕ್ಕೆ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಹಿಮದಿಂದ ಆವೃತ್ತವಾಗಿರುವ ಪ್ರದೇಶಕ್ಕೆ ರಕ್ಷಣಾ ಕಾರ್ಯಾಚರಣೆಗಾಗಿ ಭದ್ರತಾ ಪಡೆಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ ಎಂದು ಸುದ್ದಿಸಂಸ್ಧೆ ವರದಿ ಮಾಡಿದೆ.

ಹೆಲಿಕಾಪ್ಟರ್ ಸಿಬ್ಬಂದಿಯ ರಕ್ಷಣೆಗಾಗಿ ಭದ್ರತಾ ಪಡೆಗಳ ಶೋಧ ತಂಡಗಳು ಹಿಮದಿಂದ ಆವೃತವಾಗಿರುವ ಪ್ರದೇಶಕ್ಕೆ ತೆರಳುತ್ತಿದ್ದು, ಶೀಘ್ರದಲ್ಲೇ ಶೋಧ ಕಾರ್ಯಾಚರಣೆ ನಡೆಸಲಿವೆ.

ಹಿಂದಿನ ಲೇಖನಕೋರ್ಟ್ ನಲ್ಲೇ ವಕೀಲನಿಗೆ ಚಾಕುವಿನಿಂದ ಹಲ್ಲೆ
ಮುಂದಿನ ಲೇಖನಉಕ್ರೇನ್ ನ ಮನೋವೈದ್ಯಕೀಯ ಆಸ್ಪತ್ರೆ ಮೇಲೆ ಬಾಂಬ್ ದಾಳಿ