ಮನೆ ಸುದ್ದಿ ಜಾಲ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

0

ಅಹ್ಮದಾಬಾದ್ (Ahmedabad)-ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುಜರಾತ್ ನಲ್ಲಿರುವ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಜಗತ್ತಿನ ಉತ್ತಮ ಬದಲಾವಣೆಗಾಗಿ ತತ್ವ ಹಾಗೂ ಅಹಿಂಸೆಗಳ ಮಾರ್ಗ ಹಿಡಿದ ಅಸಾಧಾರಣ ವ್ಯಕ್ತಿ ಎಂದು ಮಹಾತ್ಮ ಗಾಂಧಿಯನ್ನು ಬೋರಿಸ್ ಬಣ್ಣಿಸಿದ್ದಾರೆ.
ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಭೇಟಿ ನೀಡುತ್ತಿರುವುದು ಹಾಗೂ ಜಗತ್ತಿನ ಉತ್ತಮ ಬದಲಾವಣೆಗಾಗಿ ತತ್ವ ಹಾಗೂ ಅಹಿಂಸೆಗಳ ಮಾರ್ಗ ಹಿಡಿದಿದ್ದನ್ನು ಅರ್ಥ ಮಾಡಿಕೊಂಡಿದ್ದು ವಿಶೇಷವಾಗಿತ್ತು ಎಂದು ಆಶ್ರಮದ ಪುಸ್ತಕದಲ್ಲಿ ಬರೆದಿದ್ದಾರೆ.


ಬ್ರಿಟನ್ ನ ಆಡಳಿತದಲ್ಲಿರುವವರು ಮಹಾತ್ಮ ಗಾಂಧಿ ಬಗ್ಗೆ ಈ ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಪರೂಪ.
1947 ರ ನಂತರ ಗುಜರಾತ್ ಗೆ ಭೇಟಿ ನೀಡುತ್ತಿರುವ ಮೊದಲ ಬ್ರಿಟನ್ ಪ್ರಧಾನಿ ಎಂಬ ಹೆಗ್ಗಳಿಕೆಗೂ ಬೋರಿಸ್ ಜಾನ್ಸನ್ ಪಾತ್ರರಾಗಿದ್ದಾರೆ.

ಹಿಂದಿನ ಲೇಖನದೆಹಲಿ: ಕೋವಿಡ್ ಸ್ಯಾಂಪಲ್ ಗಳಲ್ಲಿ ಓಮಿಕ್ರಾನ್ ಉಪ ವೆರಿಯಂಟ್ ಬಿಎ .2.12 ಪತ್ತೆ
ಮುಂದಿನ ಲೇಖನಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ