ಮನೆ ರಾಜ್ಯ CBSE ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

CBSE ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

0

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ CBSE ಇಂದು ಸೋಮವಾರ ೧೨ ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ೮೭.೯೮ ರಷ್ಟು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಶೇಕಡಾ ೦.೬೫ ರಷ್ಟು ಉತ್ತೀರ್ಣರಾಗಿದ್ದಾರೆ.

Join Our Whatsapp Group

೧೮,೪೧೭ ಶಾಲೆಗಳು ಸಿಬಿಎಸ್‌ಸಿ ೧೨ನೇ ತರಗತಿ ತರಗತಿಯ ಪರೀಕ್ಷೆಗಳನ್ನು ೭,೧೨೬ ಕೇಂದ್ರಗಳಲ್ಲಿ ನೀಡಿವೆ. ಈ ವರ್ಷ ಒಟ್ಟಾರೆ ಉತ್ತೀರ್ಣ ಶೇಕಡಾವಾರು ೮೭.೯೮ ಆಗಿದೆ. ೨೦೨೩ ರಿಂದ ಶೇಕಡಾ ೦.೬೫ ರಷ್ಟು ಹೆಚ್ಚಳವಾಗಿದೆ. ತಿರುವನಂತಪುರ ಪ್ರದೇಶವು ಶೇಕಡಾ ೯೯.೯೧ ರಷ್ಟು ಮಂದಿ ಪಾಸಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಒಟ್ಟಾರೆ ದೆಹಲಿ ಪ್ರದೇಶದಲ್ಲಿ ಶೇಕಡಾ ೯೪.೯ ರಷ್ಟು ಉತ್ತೀರ್ಣರಾಗಿದ್ದಾರೆ. ೯೧.೫೨% ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ೮೫.೧೨% ಹುಡುಗರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಹುಡುಗಿಯರು ೬.೪೦% ರಷ್ಟು ಹುಡುಗರನ್ನು ಮೀರಿಸಿ ಸಾಧನೆ ಮಾಡಿದ್ದಾರೆ. ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು. results.cbse.nic.in, cbse.gov.in ಅಥವಾ cbseresults.nic.in.

ಫಲಿತಾಂಶಗಳು UMANG ಅಪ್ಲಿಕೇಶನ್, ಡಿಜಿಲಾಕರ್ ಅಪ್ಲಿಕೇಶನ್, ಪರೀಕ್ಷಾ ಸಂಗಮ್ ಪೋರ್ಟಲ್ ಮತ್ತು SMS ಸೌಲಭ್ಯದ ಮೂಲಕ ಲಭ್ಯವಿದೆ. CBSE ೧೨ ಮತ್ತು ೧೦ ನೇ ತರಗತಿ ಪರೀಕ್ಷೆಗಳು ಫೆಬ್ರವರಿ ೧೫ ರಂದು ಪ್ರಾರಂಭವಾಗಿದ್ದು, ೧೦ ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮಾರ್ಚ್ ೧೩ ರಂದು ಮತ್ತು ೧೨ ನೇ ತರಗತಿಯು ಏಪ್ರಿಲ್ ೨ ರಂದು ಕೊನೆಗೊಳ್ಳಲಿದೆ.

ಸಿಬಿಎಸ್‌ಇ ೧೦ ಮತ್ತು ೧೨ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಕನಿಷ್ಠ ಶೇಕಡಾ ೩೩ ಅಂಕಗಳನ್ನು ಗಳಿಸಿರಬೇಕು. ೧೦ನೇ ತರಗತಿ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಕಳೆದ ವರ್ಷದ ಟ್ರೆಂಡ್‌ಗಳನ್ನು ನೋಡಿದಾಗ ೨೦೨೩ ರಲ್ಲಿ CBSE ಫಲಿತಾಂಶಗಳನ್ನು ಮೇ ೧೨ ರಂದು ಪ್ರಕಟಿಸಲಾಯಿತು. ೨೦೨೨ ರಲ್ಲಿ ಜುಲೈ ೨೨ ರಂದು ಘೋಷಿಸಲಾಯಿತು.

ಹಿಂದಿನ ಲೇಖನದೇಶದಾದ್ಯಂತ ಮುಕ್ತ ಜೈಲುಗಳನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ಸಲಹೆ
ಮುಂದಿನ ಲೇಖನಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಏಕನಾಥ್​ ಶಿಂಧೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು