ಮನೆ ಮನೆ ಮದ್ದು ಮಡ್ಡಿ ಸಾಮ್ರಾಣಿ

ಮಡ್ಡಿ ಸಾಮ್ರಾಣಿ

0

ಪೂರ್ವ ಬಯಲು ಸೀಮೆ ಮತ್ತು ಘಟ್ಟ ನಾಡಿನ ಮಧ್ಯಮ ಗಾತ್ರದ ಮರ ಎಲೆಗಳಲ್ಲಿ ಬಹಳ ಸುಗಂಧವಿರುತ್ತದೆ. ತಾದುಕಿನ ಮರವೆಂದು ಹಳೆಗನ್ನಡ ಹೆಸರಿದೆ. ಹಿಂದೆ ಇದರ ಕಾಯಿಯನ್ನು ಉಪ್ಪಿನಕಾಯಿಯ ಮೂಲ ವಸ್ತುವಾಗಿ ಬಳಸುತ್ತಿದ್ದರು.

ಬಲಿತ ಮರದ ಕಾಂಡವನ್ನು ಗೀರುತಾರೆ. ಇದರಿಂದ ಸುರಿವ ಅಂಟು ಸಲ್ಲಕೀ ಎಂಬ ಹೆಸರಿನಿಂದ ಬಳಕೆ ಆಗುತ್ತದೆ. ಇದರ ಗೊಂದು ಒಳ್ಳೆಯ ನೋವು ನಿವಾರಕವಾಗಿದೆ. ಇದು ಗುಜರಾತ ಹಾಗೂ ಮಹಾರಾಷ್ಟ್ರದಲ್ಲಿ ಬಹಳ ಪ್ರಮಾಣದಲ್ಲಿ ಬೆಳೆಯುತ್ತಾರೆ.

ಔಷಧೀಯ ಗುಣಗಳು :-

* ಗುಣವಾಗದ ಗಾಯ ಮಾಯಲು ನೀರಿನ ಜೊತೆ ಅಂಟು ಕದಡಿಸಿ ಹಚ್ಚುತ್ತಾರೆ. ನಿಂಬೆರಸಂಗಡ ಅರೆದು ಲೇಪಿಸುತ್ತಾರೆ.

* ಹಲ್ಲು ನೋವು, ವಸಡಿನ ತೊಂದರೆ ಜಾಲಿ ಮರದ ಅಂಟಿನ ಜತೆ ಕೂಡಿಸಿ ಸೇವನೆ ಅಥವಾ ಸ್ಥಾನಿಕ ಪ್ರಯೋಗದಿಂದ ಲಾಭವಾಗುತ್ತದೆ.

* ಹಳೆ ಜಜ್ಜು ನೋವು, ಕೀಲು ನೋವು, ಬಾವು ಮತ್ತು ಉರಿಯುತ ಪರಿಹಾರಕ್ಕೆ ಅಂಟನ್ನು ಹರಳೆಣ್ಣೆ ಸಂಗಡ ಪೋಲ್ಟೀಸು ಹಾಕಿದರೆ ಬಾವು ಮತ್ತು ಉರಿಯೂತ ನಿವಾರಣೆ ಆಗುತ್ತದೆ.

*ಬಿಸಿ ನೀರು ಅನುಪಾತದಲ್ಲಿ ಅಂಟು ಸೇವಿಸಿದರೆ ಕೀಲುಗಂಟು ನೋವು, ಹಳೆಯಗಾಯವು ಮಾಯವಾಗುತ್ತದೆ.

* ಮೈ ಕೈಯಲ್ಲಿ ನೀರು ಸೇರಿದ ಕಾಯಿಲೆಗೆ ಸಾಮ್ರಾಣಿ ಅಂಟು ಸೇವಿಸಿದರೆ ಪರಿಹಾರವಾಗುತ್ತದೆ.