ಮನೆ ಅಪರಾಧ ಉದಯಪುರ ಶಾಲೆಯಲ್ಲಿ ಬಾಲಕನಿಗೆ ಚಾಕು ಇರಿತ: ಕಾರಿಗೆ ಬೆಂಕಿ ಹಚ್ಚಿದ ಗುಂಪು

ಉದಯಪುರ ಶಾಲೆಯಲ್ಲಿ ಬಾಲಕನಿಗೆ ಚಾಕು ಇರಿತ: ಕಾರಿಗೆ ಬೆಂಕಿ ಹಚ್ಚಿದ ಗುಂಪು

0

ಉದಯಪುರ: ರಾಜಸ್ಥಾನದ ಉದಯಪುರದ ಸರ್ಕಾರಿ ಶಾಲೆಯೊಂದರಲ್ಲಿ ಇಂದು (ಶುಕ್ರವಾರ) 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

Join Our Whatsapp Group

ಇದರ ಬೆನ್ನಲ್ಲೇ ಜನರ ಗುಂಪೊಂದು ಸುಮಾರು ಅರ್ಧ ಡಜನ್ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ನಗರದ ಕೆಲವು ಭಾಗಗಳಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಊಟದ ವಿರಾಮದ ವೇಳೆ ನಡೆದ ಜಗಳದ ವೇಳೆ ಅಪ್ರಾಪ್ತ ವಯಸ್ಕನಿಗೆ ಮತ್ತೊಬ್ಬ ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆತನ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣವಿದೆ. ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳ ನಂತರ, ನಗರದ ಕೆಲವು ಭಾಗಗಳಲ್ಲಿ ಕ್ಷೋಭೆಗೊಳಗಾದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಾರತೀಯ ನಾಗರಿಕ್ ಸುರಕ್ಷಾ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಸಹ ವಿಧಿಸಲಾಗಿದೆ.

ಉದಯಪುರದ ಜಿಲ್ಲಾಧಿಕಾರಿಗಳು ಜನರು ಶಾಂತವಾಗಿರಲು ಮನವಿ ಮಾಡಿದ್ದು ವದಂತಿಗಳಿಗೆ ಗಮನ ಕೊಡಬೇಡಿ ಎಂದು ನಿವಾಸಿಗಳನ್ನು ಒತ್ತಾಯಿಸಿದ್ದಾರೆ.

ಚಾಕು ಇರಿತದಿಂದ ಅಪ್ರಾಪ್ತ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ನಿವಾಸಿಗಳಲ್ಲಿ ಮನವಿ ಮಾಡುತ್ತೇನೆ. ನೀವು ಏನಾದರೂ ಕೇಳಿದರೆ, ಅದನ್ನು ಪೊಲೀಸರೊಂದಿಗೆ ಪರಿಶೀಲಿಸಿ, ”ಎಂದು ಜಿಲ್ಲಾಧಿಕಾರಿ ಅರವಿಂದ್ ಪೋಸ್ವಾಲ್ ಹೇಳಿದರು.

ಆರೋಪಿ ಹದಿಹರೆಯದ ಬಾಲಕನನ್ನು ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ಪೋಸ್ವಾಲ್ ಹೇಳಿದ್ದಾರೆ.