ಬ್ರೆಸ್ಟ್ ಕ್ಯಾನ್ಸರ್ ಹೆಸರು ಕೇಳಿದರೆ, ಮಹಿಳೆಯರಲ್ಲಿ ನಡುಕ ಪ್ರಾರಂಭವಾಗುತ್ತದೆ, ಏಡ್ಸ್ ನಂತರ ಧುನಿಕ ಸ್ತ್ರೀಯರು ಹೆಚ್ಚಾಗಿ ಭಯಪಡಿಸುವುದು ಈ ರೋಗವೇ. ಇದು ಹೆಚ್ಚಾಗಿ ವೃತ್ತಿ, ಉದ್ಯೋಗಗಳಲ್ಲಿ ಇರುವ ಮಹಿಳೆಯರಿಗೆ ಬರುತ್ತದೆ. ಅಮೆರಿಕಾ, ಇಂಗ್ಲೆಂಡ್ ಗಳಲ್ಲಿ ಸರ್ವೇಸಾಮಾನ್ಯ.
ಬೆಸ್ಟ್ ಕ್ಯಾನ್ಸರ್ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಹಳ ಕಡಿಮೆ ಕಾಣಿಸುತ್ತದೆ. ಚೀನಾದಲ್ಲಿಯೂ ಬೊಂಬಾಯಿನ ಪಾರ್ಸಿ ಜನಾಂಗದ ಸ್ತ್ರೀಯರಲ್ಲಿಯೂ ಇದೇಕೋ ಅಷ್ಟೊಂದು ಕಾಣಿಸದಿರುವುದು ವಿಚಿತ್ರ.
ನಮ್ಮ ದೇಶದಲ್ಲಿ ಪ್ರತಿವರುಷ ಪಟ್ಟಣವಾಸಿ ಸ್ತ್ರೀಯರಲ್ಲಿ ಶೇಕಡ 25 ಮಂದಿಯಲ್ಲಿಯೂ ಗ್ರಾಮಾಂತರದಲ್ಲಿ ಶೇಕಡ 7 ಮಂದಿಯಲ್ಲಿಯೂ ಸ್ಥಾನ ಕ್ಯಾನ್ಸರ್ ನಮೂದಾಗುತ್ತಿದೆ. ಕಾಯಿಲೆ ಯಾವ ವಯೋಮಾನವರಿಗೆ ಆಗಲಿ ಬರಬಹುದಾದರೂ, 45ರ ಆಸುಪಾಸಿನ ಸ್ತ್ರೀಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ
ಸ್ತ್ರೀ ದೇಹದಲ್ಲಿನ ಅಂಡಾಶಯಗಳು, ಆಡ್ರಿನಲ್ ಗ್ರಂಥಿಗಳು, ಪಿಟ್ಯುಟರಿ ಗ್ರಂಥಿ ದಂತಹ ಅವಯನಗಳಿಂದ ಬಿಡುಗಡೆಯಾಗುವ ಹಾರ್ಮೋನು ಗಳ ಪ್ರಭಾವದಿಂದ,ಸ್ಥಾನಗಳು ಕೆಲಸ ಮಾಡುತ್ತವೆ, ಹಾರ್ಮೋನ್ ಗಳ ಬಿಡುಗಡೆಯ ಮೇಲೆ ಇಷ್ಟೊಂದು ಅವಲಂಬಿ ರುವುದರಿಂದ,ಬ್ರೇಸ್ಟ್ ಕ್ಯಾನ್ಸರ್ ರೋಗಗಳಿಗೆ ಹಾರ್ಮೋನ್ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಯಾರಿಗೆ ಬರಬಹುದು?
40 ವರ್ಷ ವಯಸ್ಸು ಮೀರಿದ ಸ್ತ್ರೀಯರು.
ಸಾಮಾನ್ಯವಾಗಿ ಆರ್ಥಿಕವಾಗಿ ಉಚ್ಚ ಸ್ಥಿತಿಯಲ್ಲಿರುವ ಸ್ತ್ರೀಯರು.
ವೃತ್ತಿ ವ್ಯಾಪಾರಗಳನ್ನು ಮಾಡುವ ಸ್ತ್ರೀಯರು.
ಅವಿವಾಹಿತ ಮಹಿಳೆಯರು.
ಮಕ್ಕಳಾಗದ ಸ್ತ್ರೀಯರು.
ಆಯಾಮಗಳು
ವಯಸ್ಸು ಮೀರಿ ಮಕ್ಕಳನ್ನು ಪಡೆದ ಸ್ತ್ರೀಯರು.
ಹೆರಿಗೆಯ ನಂತರ ಹಾಲು ಉತ್ಪತ್ತಿಯಾದ ಸ್ತ್ರೀಯರು.
ಮಗುವಿಗೆ ಹಾಲೂಡದ ಸ್ತ್ರೀ.
ಚಿಕ್ಕ ವಯಸ್ಸಿನಲ್ಲೇ ರಜಸ್ವಾಲೆ ಯಾದವರು.
ಕಾಲುಮೀರಿ ಮೀಟ್ಟುನಿಂತ ಸ್ತ್ರೀ
ಗರ್ಭಾಶಯ, ಹೊಟ್ಟೆ ರೆಕ್ಟಮ್, ಅಂಡಾಶಯಗಳ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆದ ಸ್ತ್ರೀಯರು.
ಕೊಬ್ಬು ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವ ಸ್ಥೂಲಕಾಯಕದ ಸ್ತ್ರೀಯರು.
ದೀರ್ಘ ಕಾಲ ಹಾರ್ಮೋನ್ಗಳಿಂದ ಕೂಡಿದ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿದವರು.
ಅಮ್ಮ, ಅಜ್ಜಿ, ಅಕ್ಕತಂಗಿಯರು, ಮಕ್ಕಳಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇರುವ ಸ್ತ್ರೀಯರಿಗೆ ಇವರಲ್ಲಿ ಎಷ್ಟು ಮಂದಿಗೆ ಯಾವ ಯಾವ ವಯಸ್ಸಿನಲ್ಲಿ ಬ್ರೆಸ್ಟ್ ಕ್ಯಾನ್ಸರ್ ಆಗುತ್ತೆಂಬುದಕ್ಕೆ ಅನುಗುಣವಾಗಿ ಈಕೆಗೂ ಬರುವ ಸಂಭವ ಇರುತ್ತದೆ.
ಅಂತಹ ಬಂಧುಗಳಲ್ಲಿರುವ ಸ್ತ್ರೀಯರಿಗೆ ಅತಿ ಚಿಕ್ಕ ವಯಸ್ಸಿನಲ್ಲೆಯೇ ಬ್ರೆಸ್ಟ್ ಕ್ಯಾನ್ಸರ್ ಬರುವ ಅವಕಾಶಗಳು ಇನ್ನೂ ಹೆಚ್ಚಾಗಿರುತ್ತದೆ.
ಮೇಲೆ ಹೇಳಿದ ರೀತಿಯಲ್ಲಿ ಬೆಸ್ಟ್ ಕ್ಯಾನ್ಸರ್ ಬರುವ ಸಂಭವ ಹೆಚ್ಚಾಗಿರುವ ಸ್ತ್ರೀಯರು ಆಗಾಗ ಡಾಕ್ಟರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಸ್ಥಾನಗಳನ್ನು ಸ್ವಯಂಪರೀಕ್ಷೆ ಮಾಡಿಕೊಳ್ಳುವುದು ಬಹಳ ಸುಲಭವೂ ಆಗಿರುತ್ತದೆ. ಖರ್ಚಿಲ್ಲದ ಕೆಲಸ ಕೂಡಾ. ಆದ್ದರಿಂದ ಅವರವರೆ ಹೇಗೆ ಪರೀಕ್ಷೆ ಮಾಡಿಕೊಳ್ಳಬೇಕೂ ಕಲಿತಿರಬೇಕು.