ಮನೆ ಅಪರಾಧ ಬಿಬಿಎಂಪಿ ಅಧಿಕಾರಿ ಹೆಸರಿನಲ್ಲಿ ಲಂಚ: ಓರ್ವನ ಬಂಧನ

ಬಿಬಿಎಂಪಿ ಅಧಿಕಾರಿ ಹೆಸರಿನಲ್ಲಿ ಲಂಚ: ಓರ್ವನ ಬಂಧನ

0

ಬೆಂಗಳೂರು(Bengaluru): ಬಿಬಿಎಂಪಿ(BBMP) ಅಧಿಕಾರಿಗಳ(Officer) ಹೆಸರಿನಲ್ಲಿ ಲಂಚ ಪಡೆಯುತ್ತಿದ್ದ ಚಂದ್ರು ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ಎಚ್‌ಎಎಲ್ ಬಡಾವಣೆ ನಿವಾಸಿಯೊಬ್ಬರು ತಾವು ಖರೀದಿಸಿದ್ದ ಫ್ಲಾಟ್ ಖಾತೆ ಬದಲಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬಿಬಿಎಂಪಿ ಎಚ್‌ಎಎಲ್‌ 2ನೇ ಹಂತದ ಕೋಡಿಹಳ್ಳಿ ಕಚೇರಿಯ ತೆರಿಗೆ ನಿರೀಕ್ಷಕ ಎಂದು ನಂಬಿಸಿ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮಂಗಳವಾರ 22 ಸಾವಿರ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

‘ಚಂದ್ರು ಬಿಬಿಎಂಪಿ ಅಧಿಕಾರಿಯಲ್ಲ. ಆದರೆ, ಲಂಚದ ಬೇಡಿಕೆಯಲ್ಲಿ ಅಧಿಕಾರಿಗಳ ಪಾತ್ರ ಇರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಜಹಂಗೀರ್ ಪುರಿ ಹಿಂಸಾಚಾರ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರ ಬಂಧನ
ಮುಂದಿನ ಲೇಖನಜಹಂಗಿರ್ ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಮ್ ಕೋರ್ಟ್ ಬ್ರೇಕ್