ಮನೆ ಕಾನೂನು ಚಾರ್ಜ್‌ ಶೀಟ್‌ ನಿಂದ ಹೆಸರು ಕೈ ಬಿಡಲು ಲಂಚ: ಎಎಸ್‌ಐ ಲೋಕಾಯುಕ್ತ ಬಲೆಗೆ

ಚಾರ್ಜ್‌ ಶೀಟ್‌ ನಿಂದ ಹೆಸರು ಕೈ ಬಿಡಲು ಲಂಚ: ಎಎಸ್‌ಐ ಲೋಕಾಯುಕ್ತ ಬಲೆಗೆ

0

ದಾವಣಗೆರೆ: ಚಾರ್ಜ್‌ಶೀಟ್‌ನಿಂದ ಹೆಸರುಗಳ ಕೈ ಬಿಡಲು 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐಯನ್ನು ಮಂಗಳವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಈರಣ್ಣ ಬಂಧನಕ್ಕೆ ಒಳಗಾದವರು.

ದಾವಣಗೆರೆಯ ಮಣಿಕಂಠಾಚಾರ್ಯ ಎಂಬುವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಾರ್ಜ್‌ಶೀಟ್‌ನಲ್ಲಿದ್ದ ಮಣಿಕಂಠಾಚಾರ್ಯ ಅವರ ತಾಯಿ ಭಾಗಮ್ಮ ಆಚಾರ್ಯ ಮತ್ತು ಪತ್ನಿ ಅರ್ಚನಾ ಆಚಾರ್ಯ ಅವರಿಬ್ಬರ ಹೆಸರುಗಳ ಕೈ ಬಿಡಲು ಈರಣ್ಣ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಮಣಿಕಂಠಾಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಠಾಣೆಯಲ್ಲಿ ಈರಣ್ಣ ಮಣಿಕಂಠಾಚಾರ್ಯ ಅವರಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ನಿರೀಕ್ಷಕರಾದ ಸಿ. ಮಧುಸೂಧನ್, ಪ್ರಭು ಬಿ. ಸೂರಿನ, ಪಿ. ಸರಳಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.