ಮನೆ ರಾಜಕೀಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ- ಪಾಕಿಸ್ತಾನವನ್ನು ಒಟ್ಟಿಗೆ ತಂದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ

ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ- ಪಾಕಿಸ್ತಾನವನ್ನು ಒಟ್ಟಿಗೆ ತಂದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ

0

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತನಾಡಿ,  ಆಡಳಿತ ಪಕ್ಷದ ವಿರುದ್ಧ  ವಾಗ್ದಾಳಿ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಅಧ್ಯಕ್ಷರ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಚೀನಾವು ಒಂದು ಯೋಜನೆಯನ್ನು ಹೊಂದಿದೆ. ಚೀನಿಯರು ತಾವು ಏನು ಮಾಡಲು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಭಾರತದ ವಿದೇಶಾಂಗ ನೀತಿಯ ಏಕೈಕ ಕಾರ್ಯತಂತ್ರದ ಗುರಿಯಾಗಿದೆ. ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇರಿಸಲು ಏನು ಮಾಡಿದ್ದೀರಿ? ಬದಲಿಗೆ ಅವರನ್ನು ಒಟ್ಟಿಗೆ ಭಾರತಕ್ಕೆ ಕರೆತಂದಿದ್ದೀರಿ ಎಂದು ಆರೋಪಿಸಿದ್ದಾರೆ.

ಯಾವುದೇ ಭ್ರಮೆಗೆ ಒಳಗಾಗಬೇಡಿ, ನಿಮ್ಮ ಮುಂದೆ ನಿಂತಿರುವ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ನೀವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ. ಇದು ಭಾರತದ ಜನರ ವಿರುದ್ಧ ಮಾಡಿದ ದೊಡ್ಡ ಅಪರಾಧ, ಕಾಶ್ಮೀರ ಮತ್ತು ಜಮ್ಮುವಿನಲ್ಲಿನ ಬಹುದೊಡ್ಡ ವ್ಯೂಹಾತ್ಮಕ ತಪ್ಪು ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಶ್ರೀಲಂಕಾ, ನೇಪಾಳ, ಬರ್ಮಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾದಿಂದ ಸುತ್ತುವರೆದಿದ್ದೇವೆ. ನಮ್ಮ ವಿರೋಧಿಗಳು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಭಾರತ-ಚೀನಾ ಗಡಿ ಬಿಕ್ಕಟ್ಟನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಚೀನಾ ಅವರು ಡೋಕ್ಲಾಮ್ ಮತ್ತು ಲಡಾಖ್‌ನಲ್ಲಿ ಜಾರಿಗೆ ತಂದಿರುವ ಸ್ಪಷ್ಟವಾದ ಯೋಜನೆಯನ್ನು ಹೊಂದಿದೆ. ಇದು ಭಾರತೀಯ ರಾಷ್ಟ್ರಕ್ಕೆ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ. ನಮ್ಮ ವಿದೇಶಾಂಗ ನೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರದ ತಪ್ಪನ್ನು ಮಾಡಿದ್ದೇವೆ ಎಂದ ಅವರು, ಬಿಜೆಪಿ ಸರ್ಕಾರವು ದೋಷಯುಕ್ತ ದೃಷ್ಟಿ ಮತ್ತು ಕೇಂದ್ರೀಕೃತ ಅಧಿಕಾರವನ್ನು ಹೊಂದಿದೆ ಎಂದು ಗಾಂಧಿ ಆರೋಪಿಸಿದರು.

ಲಡಾಖ್ ಪೂರ್ವ ಗಡಿಯಲ್ಲಿ ಇರುವ ಗಾಲ್ವಾನ್ ನದಿ ಕಣಿವೆ ಮೇಲೆ ಕಣ್ಣಿಟ್ಟಿರುವ ಚೀನಾ ರಾಷ್ಟ್ರವು ಭಾರತದ ವಿರುದ್ಧ ಕಾಲ್ಕೆರೆದು ನಿಂತಿದೆ. ಇದೇ ಕಾರಣಕ್ಕೆ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದೆ. ಈ ವೇಳೆ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 43 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಚೀನಾ ಮತ್ತು ಭಾರತದ ನಡುವಿನ ಅಂತರ್‌ ಯುದ್ಧಕ್ಕೆ ಕಾರಣವಾಗಿದೆ ಎಂದರು.

ಮೇಡ್ ಇನ್ ಇಂಡಿಯಾ ನಾಶ ಪಡಿಸಿದ್ದೀರಿ:

ನೀವು ಮೆಡ್ ಇನ್‌ ಇಂಡಿಯಾ ಬಗ್ಗೆ ಮಾತನಾಡುತ್ತೀರಿ. ಆದರೆ ಮೆನ್ ಇಂಡಿಯಾ ಈಗ ಸಾಧ್ಯವಿಲ್ಲ. ಏಕೆಂದರೆ ನೀವು ಮೇಡ್ ಮೇಡ್ ಇನ್ ಇಂಡಿಯಾವನ್ನು ನಾಶ ಮಾಡಿದ್ದೀರಿ. 100 ಶ್ರೀಮಂತರು 55ಕೋಟಿ ಜನರಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಈ ಬಡ ಭಾರತ ನೋಡುತ್ತಿದೆ. ಅಸಂಘಟಿತ ವಲಯಗಳ ಮೇಲೆ ಸರ್ಕಾರ ದಾಳಿ ಮಾಡಿದೆ. ಕಳದ ವರ್ಷದ ಮೂರು ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ನಾನು ಸುಮ್ಮನೆ ಟೀಕಿಸುತ್ತಿಲ್ಲ. ಏನಾಗುತ್ತಿದೆ ಎಂಬ ಮಾಹಿತಿ ನೀಡಿದ್ದೇನೆ. ಇದು ನಮ್ಮ ಮಾಹಿತಿ ಅಲ್ಲ. ಸರ್ಕಾರದ ಅಧಿಕೃತ ಮಾಹಿತಿ ಎಂದು ಹೇಳಿದರು.

ಹಿಂದಿನ ಲೇಖನಪೆಗಾಸಸ್​ ಸ್ಪೈವೇರ್​:  ನ್ಯೂಯಾರ್ಕ್ ಟೈಮ್ಸ್ ಗೆ ಲೀಗಲ್ ನೋಟಿಸ್ ಕಳುಹಿಸಿದ ತಮಿಳುನಾಡು ವಕೀಲ
ಮುಂದಿನ ಲೇಖನಇಂಜಿನಿಯರಿಂಗ್‌ನ ಗೇಟ್ ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್