ಮನೆ ರಾಜ್ಯ ಶಿಥಿಲಾವಸ್ಥೆ ಯಲ್ಲಿ ಸೇತುವೆ:  ಜೀವ ಭಯದಲ್ಲೇ ಜನರ ಸಂಚಾರ

ಶಿಥಿಲಾವಸ್ಥೆ ಯಲ್ಲಿ ಸೇತುವೆ:  ಜೀವ ಭಯದಲ್ಲೇ ಜನರ ಸಂಚಾರ

0

ಕೊಡಗು(Kodagu): ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆಯ ಪರಿಣಾಮ ಮೊಂಣ್ಣಗೇರಿಯ ಸೇತುವೆಯ ಎರಡೂ ಕಡೆ ಮಣ್ಣು ಕೊಚ್ಚಿ ಹೋಗಿದ್ದು ರಸ್ತೆಯ ಸಂಪರ್ಕವಿಲ್ಲದ ಕಾರಣ ಗ್ರಾಮಸ್ಥರು ಜೀವ ಕೈಯಲ್ಲಿಡಿದು ಸೇತುವೆ ದಾಟುತ್ತಲ್ಲಿದ್ದಾರೆ.

 ಮಡಿಕೇರಿ ತಾಲೂಕಿನ ಗಾಳಿಬೀಡು ಪಂಚಾಯಿತಿಗೆ ಸೇರಿದ ಮೊಂಣ್ಣಗೇರಿಯ ರಾಮನದಿಯ ಸೇತುವೆಯ ಎರಡೂ ಕಡೆಗಳಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಗ್ರಾಮಕ್ಕೆ ತೆರಳಲು ಇದೊಂದೇ ಮಾರ್ಗವಿರುವ ಕಾರಣ ಸೇತುವೆಯ ಎರಡೂ ಕಡೆ ಮರದ ಕಟ್ಟಿಗೆಗಳನ್ನು ಜೋಡಿಸಲಾಗಿದೆ. ಜೀವ ಭಯದಲ್ಲೇ ಜನರು ಸಂಚಾರ ಮಾಡುತ್ತಿದ್ದಾರೆ.

2018ರಲ್ಲಿ ರಾಮನದಿಗೆ ಸೇತುವೆ ಕಟ್ಟಲಾಗಿದೆ. ಆದರೆ ಸೇತುವೆ ಕೆಳ ಭಾಗಕ್ಕೆ ಕಬ್ಬಿಣದ ಪಿಲ್ಲರ್ ಹಾಕದೇ ಹಾಗೇ ಒಂದು ಕಲ್ಲಿನ ಮೇಲೆ ಸಿಮೆಂಟ್ ಹಾಕಿ ಕಟ್ಟಲಾಗಿತ್ತು. ಈಗ ಮಳೆಯಿಂದ ಬೇಸ್​ನಲ್ಲಿದ್ದ ಕಲ್ಲು ಕೊಚ್ಚಿ ಹೋಗಿ ಸೇತುವೆ ಬೀಳುವ ಹಂತಕ್ಕೆ ತಲುಪಿದೆ. ಇದು 30 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು, ಎಲ್ಲರೂ ಈ ಸೇತುವೆಗೆ ಅವಲಂಬಿತರಾಗಿದ್ದಾರೆ. ಆದಷ್ಟು ಬೇಗ ಈ ಸೇತುವೆ ಸರಿ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

  • ಟ್ಯಾಗ್ಗಳು
  • kodagu
ಹಿಂದಿನ ಲೇಖನಬಿಜೆಪಿ ದಪ್ಪ ಚರ್ಮದ ಭ್ರಷ್ಟ ಸರ್ಕಾರ: ಡಿಕೆಶಿ ಆರೋಪ
ಮುಂದಿನ ಲೇಖನರಾಜಕುಮಾರ ಟಾಕಳೆ ನನ್ನ ಗಂಡ: ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ