ಮನೆ ಕಾನೂನು ಜುಲೈ ೮ ರಂದು ಪಾಂಡವಪುರದಲ್ಲಿ ಬೃಹತ್ ಜನತಾ ನ್ಯಾಯಾಲಯ: ಎಂ.ಮಹೇಶ್

ಜುಲೈ ೮ ರಂದು ಪಾಂಡವಪುರದಲ್ಲಿ ಬೃಹತ್ ಜನತಾ ನ್ಯಾಯಾಲಯ: ಎಂ.ಮಹೇಶ್

0

ಪಾಂಡವಪುರ:ಜುಲೈ ೮ ರಂದು ಬೃಹತ್ ಜನತಾ ನ್ಯಾಯಾಲಯ' ವನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆವರಣರದಲ್ಲಿ ಏರ್ಪಡಿಸಲಾಗಿದ್ದು ಕಕ್ಷಿದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಶ್ ತಿಳಿಸಿದರು.

Join Our Whatsapp Group

ಜಿಲ್ಲಾ ಹಾಗೂ ತಾಲೂಕು ಕಾನೂನು ಪ್ರಾಧಿಕಾರ ಹಾಗೂ ವಕೀಲರ ಸಂಘದ ವತಿಯಿಂದ ನಡೆಸಲಾ ಗುತ್ತಿರುವಬೃಹತ್ ಜನತಾ ನ್ಯಾಯಾಲಯದ ಮೂಲಕ ಜಾಲ್ತಿಯಲ್ಲಿರುವ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಳ್ಳಲು ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೃಹತ್ ಜನತಾ ನ್ಯಾಯಾಲಯದಲ್ಲಿ ಜಾಲ್ತಿಯಲ್ಲಿರುವ ಸಿವಿಲ್ ಪ್ರಕರಣದಡಿ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳ ಬಹುದಾಗಿದ್ದು, ಅರ್ಜಿದಾರರು ತಮ್ಮ ವಕೀಲರನ್ನು ಸಂಪರ್ಕಿಸಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಜನತಾ ನ್ಯಾಯಾಲಯದಲ್ಲಿ ಮೋಟಾರು ವಾಹನ ಪ್ರಕರಣಗಳು, ಚೆಕ್‌ಬೌನ್ಸ್, ಜೀವನಾಂಶದ ಪ್ರಕರಣಗಳು,ಭೂಸ್ವಾಧೀನ ಪ್ರಕರಣಗಳು, ಕ್ರಿಮಿನಲ್ ಪ್ರಕರಣದ ಕೆಲವು ಕಾಯ್ದೆಗಳು, ದಂಡ ಪ್ರಕ್ರಿಯೆ ಸಮಿತಿ ಕಾಯ್ದೆಯಡಿಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಸದ್ಬಳಕೆ, ಅರ್ಜಿದಾರರು ಜನತಾ ನ್ಯಾಯಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೃಹತ್ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದೆ ಆ ಪ್ರಕರಣವನ್ನು ಮತ್ತೊಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.ಇತ್ಯರ್ಥಗೊಂಡು ಪ್ರಕರಣಕ್ಕೆ ಅರ್ಜಿದಾರರು ಸಲ್ಲಿಸಿದ್ದ ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಅರ್ಜಿದಾರರಿಗೆ ವಾಪಸ್ಸು ನೀಡಲಾಗುತ್ತದೆ.ಅರ್ಜಿದಾರರಿಗೆ ಸಮಯ, ಹಣದ ಉಳಿತಾಯವಾಗಲಿದೆ, ರಾಜಿಮಾಡಿಕೊಳ್ಳುವುದರಿಂದ ಎರಡು ಕಡೆಯ ಅರ್ಜಿದಾರರಲ್ಲಿರುವ ನಮಸ್ತಾಪ, ಧ್ವೇಷ ಹೋಗಿ ಪರಸ್ಪರ ಭಾಂದ್ಯವ ಬೆಳೆಯುದು ಉತ್ತಮ ಸಂಬಂಧ ಬೆಳೆಯಲಿದೆ ಎಂದರು.
ಪಟ್ಟಣದ ಜೆಎಂಎಫ್‌ಸಿ ಐದು ನ್ಯಾಯಾಲಯಗಳಿಂದ ಒಟ್ಟು ೭೬೧೭ ಪ್ರಕರಣಗಳ ವಿಚಾರಣೆಗಳು ಬಾಕಿ ಇದ್ದು ಇವುಗಳ ಪೈಕಿ ೨ ಸಾವಿರ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅರ್ಹ ಪ್ರಕರಣಗಳು ಎಂಬುದಾಗಿ ಗುರುತಿಸಿ ಜನತಾ ನ್ಯಾಯಾಲಯಕ್ಕೆ ವರ್ಗಾಹಿಸಲಾಗಿದೆ.ಕಳೆದ ವರ್ಷ ನಡೆದ ಜನತಾ ನ್ಯಾಯಾಲಯದಲ್ಲಿ ಜಿಲ್ಲೆಗೆ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು.ಕಳೆದ ವರ್ಷ ೧೯೪೧ ಪ್ರಕರಣಗಳ ಪೈಕಿ ೩೮೯ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಈ ವರ್ಷವು ಹೆಚ್ಚಿನ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಲು ಗುರಿಹೊಂದಲಾಗಿದೆ. ಸಾರ್ವಜನಿಕರು ಜನತಾ ನ್ಯಾಯಾಲಯದ ಸೌಲಭ್ಯವನ್ನು ಸದ್ಬಳಕೆಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಜುಲೈ.೮ರಂದು ನ್ಯಾಯಾಲಯದ ಆವರಣದಲ್ಲಿ ಬೃಹತ್ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿದ್ದು ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಂಜುನಾಥ್,ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ, ೧ನೇ ಅಪರ ಸಿವಿಲ್ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್., ೨ನೇ ಅಪರ ಸಿವಿಲ್ ನ್ಯಾಯಾಧೀಶೆ ಎಂ.ಪದ್ಮ, ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ‍್ಯದರ್ಶಿ ಕೆ.ಎನ್. ನಾಗರಾಜು ಇದ್ದರು.

ಹಿಂದಿನ ಲೇಖನಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಎಸ್ ಐ ಟಿ ತನಿಖೆಗೆ ?: ಸಂಪುಟ ಸಭೆಯಲ್ಲಿ ಚರ್ಚೆ
ಮುಂದಿನ ಲೇಖನದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಸೆಮಿಫೈನಲ್​ ಗೆ ಎಂಟ್ರಿಕೊಟ್ಟ ಭಾರತ..!