ಮನೆ ದೇಶ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬ್ರಿಜೇಶ್ ಕಾಳಪ್ಪ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬ್ರಿಜೇಶ್ ಕಾಳಪ್ಪ

0

ನವದೆಹಲಿ(New Delhi): ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಶಕ್ತಿ ಮತ್ತು ಉತ್ಸಾಹದ ಕೊರತೆ ಬಗ್ಗೆ ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ನೀವು ನನಗೆ ಒದಗಿಸಿದ ಹಲವಾರು ಅವಕಾಶಗಳಿಗಾಗಿ ನನ್ನ ಹೃತೂರ್ವಕ ಧನ್ಯವಾದಗಳು. ಮತ್ತೊಮ್ಮೆ ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ನೇಮಕಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2013 ರಲ್ಲಿ ಯುಪಿಎ ವರ್ಷದಿಂದ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್‌ಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸುಮಾರು ಒಂದು ದಶಕದ ಕಾಲ ಮತ್ತು 6,497 ಚರ್ಚೆಗಳನ್ನು ನಡೆಸಿದ್ದೇನೆ. ಜೊತೆಗೆ, ಪಕ್ಷವು ನನಗೆ ರಾಜಕೀಯ ಕೆಲಸವನ್ನು ನಿಯಮಿತವಾಗಿ ನಿಯೋಜಿಸುತ್ತಿದೆ. ನಾನು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು ನನಗೆ ತೃಪ್ತಿಯಿದೆ.

ಟಿವಿ ಚರ್ಚೆಗಳಿಗೆ ಸಂಬಂಧಿಸಿದಂತೆ ನಾನು ಎಲ್ಲಾ ಸಮಯದಲ್ಲೂ ನನ್ನ ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದೇನೆ. ಯಾವುದೇ ಚರ್ಚೆಗೆ ಸಾಕಷ್ಟು ತಯಾರಿ ಇಲ್ಲದೆ ಎಂದಿಗೂ ಹೋಗಿಲ್ಲ. 2014 ಮತ್ತು 2019 ರ ಸೋಲಿನ ಸಮಯದಲ್ಲೂ ನಾನು ಹಿಂಜರಿಯಲಿಲ್ಲ. ಆಗ ಉತ್ಸಾಹ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸಿದೆ ಎಂದು ಕಾಳಪ್ಪ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾನು ಭಾವೋದ್ರೇಕದ ಕೊರತೆಯನ್ನು ಕಂಡುಕೊಂಡಿದ್ದೇನೆ. ಆದರೆ ನನ್ನ ಸ್ವಂತ ಕಾರ್ಯಕ್ಷಮತೆ ನಿರಾಸಕ್ತಿ ಮತ್ತು ನಿಷ್ಟ್ರಯೋಜಕವಾಗಿದೆ. ಈ ಪರಿಸ್ಥಿತಿಯಲ್ಲಿ ನಾನು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ 1997ರಲ್ಲಿ ಆರಂಭವಾದ ಈ ಸಂಘವನ್ನು ಕೊನೆಗಾಣಿಸುತ್ತಿದ್ದೇನೆ ಎಂದು ಫೇಸ್​ಬುಕ್​ ಮೂಲಕ ಹೇಳಿಕೊಂಡಿದ್ದಾರೆ.