ಮನೆ ದೇಶ ಮೈಸೂರು ಶಿಲ್ಪ ಕಲಾವಿದನ ಕೈನಲ್ಲಿ  ಅರಳಲಿರುವ ನೇತಾಜಿ ಪ್ರತಿಮೆ

ಮೈಸೂರು ಶಿಲ್ಪ ಕಲಾವಿದನ ಕೈನಲ್ಲಿ  ಅರಳಲಿರುವ ನೇತಾಜಿ ಪ್ರತಿಮೆ

0
ಸಂಗ್ರಹ ಚಿತ್ರ

ನವದೆಹಲಿ(New Delhi): ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗುವ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯ ಮೈಸೂರು ಮೂಲದ ಶಿಲ್ಪಕಲಾವಿದ ಅರುಣ್‌ ಯೋಗಿರಾಜ್‌ ಅವರ ಕೆತ್ತನೆಯಲ್ಲಿ ಅರಳಲಿದೆ.

ಆಗಸ್ಟ್‌ 15ರೊಳಗೆ ಪ್ರತಿಮೆ ಕೆತ್ತನೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಈ ಮೊದಲು ಇದೇ ಸ್ಥಳದಲ್ಲಿದ್ದ ಅಮರ ಜವಾನ್ ಜ್ಯೋತಿ ಹಿಂಭಾಗದಲ್ಲಿನ ಬೃಹತ್ ಮಂಟಪದಲ್ಲಿ ಬೋಸ್‌ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಎಂದು ಎಂದು ಸಂಸ್ಕೃತಿ ಸಚಿವಾಲಯದ ಮೂಲಗಳು ಹೇಳಿವೆ.

ಬೋಸ್‌ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು, ಬೋಸ್‌ ಅವರ 125ನೇ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಘೋಷಿಸಿದ್ದರು.

ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿರುವ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಅರುಣ್ ಅವರೇ ಕೆತ್ತಿದ್ದಾರೆ. ಕಳೆದ ವರ್ಷ ಈ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.

ಹಿಂದಿನ ಲೇಖನಮೈಸೂರು: ಮಗು ಸಮೇತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ
ಮುಂದಿನ ಲೇಖನಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬ್ರಿಜೇಶ್ ಕಾಳಪ್ಪ