ಮನೆ ಸುದ್ದಿ ಜಾಲ ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ ಎಫ್ ದಾಳಿ

ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ ಎಫ್ ದಾಳಿ

0
ಸಾಂದರ್ಭಿಕ ಚಿತ್ರ

ನವದೆಹಲಿಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಹೊಡೆದುರುಳಿಸಿದ್ದಾರೆ.

ನಿನ್ನೆ ತಡರಾತ್ರಿ ಪಂಜಾಬ್‌ನ ಅಮೃತಸರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಡ್ರೋನ್‌ಗೆ ಗುಂಡು ಹಾರಿಸಿದ ನಂತರ ಅದು ಪಾಕಿಸ್ತಾನದ ಕಡೆಗೆ ತೆರಳಿದೆ.

ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುವ ಡ್ರೋನ್​​ನ ಶಬ್ದ ಕೇಳಿದ ನಂತರ ಸೇನಾ ಪಡೆ ಸಿಬ್ಬಂದಿ ಡ್ರೋನ್‌ನತ್ತ ಗುಂಡು ಹಾರಿಸಿದವು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮ ಘಗ್ಗರ್ ಮತ್ತು ಸಿಂಗೊಕೆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಹಳದಿ ಬಣ್ಣದ ಎರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರೋನ್​ನಿಂದಲೇ ಆ ಪ್ಯಾಕೆಟ್‌ಗಳನ್ನು ಬೀಳಿಸಿರುವ ಶಂಕೆ ಇದೆ. ಕೆಳಗೆ ಬಿದ್ದಿದ್ದ ಪ್ಯಾಕೆಟ್‌ನಲ್ಲಿ ಪಿಸ್ತೂಲ್ ಸುತ್ತಿಕೊಂಡಿರುವುದು ಕಂಡುಬಂದಿದ್ದು, ಗಡಿಯ ಬೇಲಿಯಿಂದ ಸುಮಾರು 2.7 ಕಿಮೀ ದೂರದಲ್ಲಿ ಈ ವಸ್ತು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹಿಂದಿನ ಲೇಖನನಾಳೆ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ
ಮುಂದಿನ ಲೇಖನಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣ: ಆರ್.ಧ್ರುವನಾರಾಯಣ್