ಮನೆ ಸುದ್ದಿ ಜಾಲ ಶಾಲಾ ಕಟ್ಟಡಕ್ಕೆ ಬುದ್ಧರತ್ನ ಬಂತೇಜಿ ಚಾಲನೆ

ಶಾಲಾ ಕಟ್ಟಡಕ್ಕೆ ಬುದ್ಧರತ್ನ ಬಂತೇಜಿ ಚಾಲನೆ

0

ಯಳಂದೂರು ಯಳಂದೂರು ಪಟ್ಟಣದಲ್ಲಿರುವ ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆಯ ಪ್ರೌಢಶಾಲಾ ಕಟ್ಟಡದ ಮುಂದುವರೆದ ಶಾಲಾ ಕಟ್ಟಡ ಕಾಮಗಾರಿಗೆ ಈಚೆಗೆ ಹೊನ್ನೂರು ಮಹಾವನ ಬುದ್ಧ ವಿಹಾರದ ಬುದ್ಧರತ್ನ ಬಂತೇಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆಯು ಯಳಂದೂರು ಪಟ್ಟಣದಲ್ಲಿ ಕಳೆದ ೩೨ ವರ್ಷಗಳಿಂದಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ೨೦ ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲೇ ಶಾಲೆ ನಡೆಯುತ್ತಿತ್ತು. ನಂತರ ೨೦೧೩-೧೪ ನೇ ಸಾಲಿನಿಂದ ಶಾಲೆಯು ಸ್ವಂತ ಸ್ಥಳದಲ್ಲಿ ಸ್ವಂತ ಕಟ್ಟಡವನ್ನು ಮಾಡಿಕೊಂಡಿದೆ. ಈ ಶಾಲೆಗೆ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟಿದೆ. ಪ್ರಸ್ತುತ ೧೨೪ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು ಮತ್ತೆರಡು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಇಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುತ್ತಾರೆ. ಅಲ್ಲದೆ ಇಲ್ಲಿ ವ್ಯಾಸಂಗ ಮಾಡಿರುವ ನೂರಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಅನೇಕ ಸರ್ಕಾರಿ ಹಾಗೂ ಖಾಸಗಿ ಹುದ್ದೆಗಳಲ್ಲಿದ್ದಾರೆ. ಇಲ್ಲಿನ ಶಿಕ್ಷಕರಶ್ರಮದಿಂದ ಮತ್ತಷ್ಟು ಯಶಸ್ಸು ಈ ಶಾಲೆಗೆ ಲಭಿಸಲಿ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್.ಎಸ್. ಬಸವರಾಜು, ಕಾರ್ಯದರ್ಶಿ ಅಂಬಳೆ ಸಿದ್ದರಾಜು, ನಿರ್ದೇಶಕರಾದ ಕೆ. ಕೃಷ್ಣಯ್ಯ. ಎನ್. ಸಿದ್ದಯ್ಯ, ಮುಖ್ಯ ಶಿಕ್ಷಕ ಎ. ಶಿವಣ್ಣ, ಶಿಕ್ಷಕರಾದ ಆರ್. ಶಾಂತರಾಜಶೆಟ್ಟಿ, ಸಿ. ಮಂಜುನಾಥ, ನಾಗಮಣಿ, ಟಿ.ಎನ್. ರಘು, ಆರ್. ಗೋಪಾಲಸ್ವಾಮಿ, ವಿ. ನೇತ್ರಾ, ಪಿ. ಶಿವಣ್ಣ ದೈಹಿಕ ಶಿಕ್ಷಕ ಎನ್. ಮುರಳೀಧರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.