ಮನೆ ಯೋಗಾಸನ ಸಮಾಧಿ

ಸಮಾಧಿ

0

ʼಸಮಾಧಿʼ ಎನ್ನುವುದು ಸಾಧಕನ ಅಂತ್ಯ ಗುರಿ. ಧ್ಯಾನವಸ್ಥೆಯ ತುತ್ತ ತುದಿಯನ್ನು ಮುಟ್ಟಿದಾಗ ಆತನ ಸಮಾಧಿ ಸ್ಥಾನನಾಗುತ್ತಾನೆ. ಆಗ ಆತನ ದೇಹ ಇಂದ್ರಿಯಗಳು ಆತನ ನಿದ್ರೆಯಲ್ಲಿ ಇದ್ದಂತೆ ವಿಶ್ರಾಂತಿಯಲ್ಲಿರುತ್ತಾನೆ. ಆದರೆ ಮನಸ್ಸು ಮತ್ತು ಬುದ್ಧಿ ಎಚ್ಚರವಾಗಿದ್ದವನಂತೆ ಜಾಗೃತವಾಗಿರುತ್ತದೆ. ಆದರೂ ಸಾಮಾನ್ಯ ಜಾಗೃತ ವ್ಯವಸ್ಥೆಗಿಂತ ಅತೀತಸ್ಥಿತಿಯಲ್ಲಿರುತ್ತಾನೆ. ಸಮಾಜಸ್ಥಾನದವನು ಪೂರ್ಣಜಾಗ್ರತನಾಗಿರುತ್ತಾನೆ.

Join Our Whatsapp Group

ಎಲ್ಲಾ ಸೃಷ್ಟಿಯೂ ಪರಮಾತ್ಮನೇ ಸಾಧಕನು. ತಾನು ಎಲ್ಲಿಂದ ಬಂದನೆಂದು ಅದರಲ್ಲೇ ಉಸಿರಾಡುತ್ತಿರುವನೆಂದು, ಅದರಲ್ಲೇ ಲೀನವಾಗುವನೆಂದು, ತಿಳಿದು ಭಕ್ತಿಯಲ್ಲೇ ಪರವಶನಾಗುತ್ತಾನೆ. ಹೃದಯದಲ್ಲಿರುವ ಅಣೋರಣೀಯವಾದ ಆತ್ಮವು ಮಹತೋಮಹಿಯಾವಾಗಿ ಆಕಾಶಕ್ಕಿಂತ ದೊಡ್ಡದೆನಿಸುತ್ತದೆ. ಎಲ್ಲಾ ಕಾಮಗಳು, ಕರ್ಮಗಳು ಅದರಲ್ಲಿ ಇರುತ್ತದೆ. ಇದರಲ್ಲಿ ಸಾಧಕನು ಲೀನವಾಗುತ್ತಾನೆ. ಆಗ ದೀರ್ಘ ನಿದ್ದೆಯಲ್ಲಿರುವಂತೆ ಆತನ ದೇಹ, ಮನಸ್ಸು, ಬುದ್ಧಿಲೀನವಾಗಿ ʼನಾನುʼ, ʼನನ್ನದುʼ ಎಂಬ ಭಾವಗಳೇ ಇರುವುದಿಲ್ಲ.  ಆಗ ಸಾಧಕರು ನಿಜವಾದ ಯೋಗ ಸ್ಥಿತಿಯಲ್ಲಿ ಇರುತ್ತಾನೆ. ಆಗ ಆನಂದದ ಅನುಭವ ಮಾತ್ರ ಅವನಿಗಿರುತ್ತದೆ. ಬುದ್ಧಿಶಕ್ತಿಗೆ ನೀಲುಕದ ಶಾಂತಿ ತಾನೇತಾನಾಗಿರುತ್ತದೆ ; ಮನಸ್ಸಿಗೆ ನಿಲುಕದ, ನಾಲಿಗೆಗೆ ಹತ್ತದ ಅನುಭವ ಅದು ಸಮಾಧಿಯ ಅನುಭವದೊಂದಿಗೆ ಇತರ ಸಾಮಾನ್ಯ ಅನುಭವಗಳನ್ನು ಹೋಲಿಸಿ ಅದನ್ನ ಋಷಿಗಳು ʼನೇತಿʼ, ʼನೇತಿʼ ಎಂದು ಹೇಳಿದ್ದಾರೆ. ಅದನ್ನು ವಿವರಿಸಬೇಕಾದರೆ ಉಪಶಾಂತಿಯೇ ಗತಿ. ಯೋಗಿಯು ಈ ವ್ಯವಹಾರಿಕ ಪ್ರಪಂಚವನ್ನು ಬಿಟ್ಟು ನಿತ್ಯ ಲೋಕಕ್ಕೆ ತೆರಳಿರುತ್ತಾನೆ. ಆಗ ಕರ್ಪೂರ ಮತ್ತು ಬೆಂಕಿಗೆ ಯಾವ ಭೇದವು ಇಲ್ಲದಿರುವಂತೆ ಜ್ಞಾತಾಜ್ಞಾತದ  ಭೇದವಿರುವುದಿಲ್ಲ.

ಆತ್ಮಷಟ್ಕದಲ್ಲಿ ಶ್ರೀ ಶಂಕರಚಾರ್ಯರು ಹೇಳಿರುವಂತೆ ಯೋಗಿಯ ಹೃದಯದಿಂದ ಆತ್ಮಗೀತವು ಹೊರಹೊಮ್ಮುತ್ತದೆ.

ಆತ್ಮಸಾಕ್ಷಾತ್ಕಾರವನ್ನು ಗಳಿಸಿದ ಯೋಗಿಯ ಹೃದಯದಲ್ಲಿ ಆತ್ಮ ವಿಷಯಕರವಾದ ಒಂದು ಗಾನವು  ಸದಾ ನಡೆಯುತ್ತಿರುತ್ತದೆ. ವಿಚಾರ ಪರನಾದ ಯೋಗಿಯು, ʼತಾನಾರು?ʼ ಎಂಬ ವಿಚಾರಕ್ಕೆ ತೊಡಗಿ, ʼನಶ್ವರವಾದ ಯಾವ ವಸ್ತುವು ನಾನಲ್ಲ. ಸತ್ ಚಿತ್ ಆನಂದ ಸ್ವರೂಪನಾದ ಆ ಪರಶಿವನೇ (ಪರಬ್ರಹ್ಮಸ್ವರೂಪ) ನಾನುʼ ಎಂಬ ನಿರ್ಧಾರಕ್ಕೆ ಬಂದು ಆ ವಿಧವಾದ ನಿರ್ಗಳವಾದ ಗಾನವು ನನ್ನ ಹೃದಯದಿಂದ ಹೊರ ಹೊಮ್ಮುತ್ತಿರುವುದನ್ನೇ ಕೇಳುತ್ತಿರುವನು. ಆತ್ಮವನ್ನು ವಿಚಾರದಿಂದಲೇ ಸಾಕ್ಷಾತ್ಕರಿಸಿ ಅದರ ಸ್ವರೂಪವೆಂದರೆ ಪದ್ಯ ರೂಪದಲ್ಲಿ ಆತ್ಮ ಷಟ್ಕವೆಂಬ ಶಿರೋನಾಮೆಯುಳ್ಳ ಶ್ರೀ ಪರಮಹಂಸಪರಿವ್ರಾಜಕಾರಚಾರ್ಯ ಶ್ರೀ ಮದಾರಿಶಂಕರದಿಂದ ರಚಿತವಾದ “ಶಿವೋಹಂ ಶಿವೋಹಂ” ಎಂಬ ಪಲ್ಲವಿಯಿಂದೊಡಗೂಡಿದ ಈ ಆಧ್ಯಾತ್ಮಿಕ ಸ್ತೋತ್ರವನ್ನು ವಾಚಕರ ಅವಾಗಹನೆಗಾಗಿ ಈ ಮುಂದೆ ತಾತ್ಪರ್ಯ ಸಹಿತವಾಗಿ ಕೊಟ್ಟಿದೆ :

ಮನೋಬುದ್ದ್ಯಹಂಕಾರಚಿತ್ತಾನಿ ನಾsಹಂ

ನ ಚ ಶ್ರೋತ್ರಜಿಹ್ವೇ, ನ ಚ ಘ್ರಾಣನೇತ್ರೇ |

ನ ಚ ವ್ಯೋಮ ಭೂಮೀ ನ ತೇಜೋ ನ ವಾಯುಃ

ಚಿದಾನಂದರೂಪಃ ಶಿವೋsಹಂ ಶಿವೋsಹಮ್                  ||೧||

ನ ಚ ಪ್ರಾಣಸಂಜ್ಞೋನ ವೈ ಪಂಚವಾಯುಃ

ನ ವಾ ಸಪ್ತಧಾತುಃ ನವಾ ಪಂಚಕೋಶಾಃ |

ನ ವಾಕ್ಪಾಣಿ ಪಾದೌ ನ ಚೋಪಸ್ಥಾಪಾಯೂ

ಚಿದಾನಂದರೂಪಃ ಶಿವೋsಹಂ ಶಿವೋsಹಮ್                 ||೨||               

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ

ನ ಮೇ ವೈ ಮದೋ ನೈವ ಮಾತ್ಸರ್ಯಭಾವಃ |

ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ

ಚಿದಾನಂದರೂಪಃ ಶಿವೋsಹಂ ಶಿವೋsಹಮ್                  ||೩||

ನ ಪುಣ್ಯಾಂ ನ ಪಾಪಂ ನ ಸೌಖ್ಯಾಂ ನ ದುಃಖಂ

ನ ಮಂತ್ರೋ ನ ತೀರ್ಥಾಂ ನ ವೇದಾನ ಯಜ್ಞಾ |

ಅಹಂ ಬೋಜನಂ ನೈವ ಮಾತಾ ನ ಭೋಕ್ತಾ

 ಚಿದಾನಂದರೂಪಃ ಶಿವೋsಹಂ ಶಿವೋsಹಮ್                  ||೪||

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಾಃ

ಪಿತಾ ನೈವ ಮೇ ನೈವ ಮಾತಾ ನ ಜನ್ಮ |

ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ

ಚಿದಾನಂದರೂಪಃ ಶಿವೋsಹಂ ಶಿವೋsಹಮ್                    ||೫||

ಅಹಂ ನಿರ್ವಿಕಲ್ಪೋ ನಿರಾಕಾರರೂಪೋ

ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |

ನ ಚಾ ಸಂಗತಂ ನೈವ ಮುಕ್ತಿರ್ನಮೇಯಃ

ಚಿದಾನಂದರೂಪಃ ಶಿವೋsಹಂ ಶಿವೋsಹಮ್                   ||೬||

೧. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರವೆಂಬ ಅಂತಃಕರಣಚತುರ್ಥ್ಯಗಳು ಆತ್ಮನಾದ ನಾನಲ್ಲ. ಅಲ್ಲದೆ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮವೆಂಬ ಜ್ಞಾನೇಂದ್ರಿಯಗಳು ನಾನಲ್ಲ. ಪೃಥ್ವಿ, ಅಪಹ, ತೇಜಸ್ಸು, ವಾಯು, ಆಕಾಶವೆಂಬ ಸ್ತೂಲ ಪಂಚಭೂತಗಳಾಗಿ ಇಲ್ಲವೇ, ಸೂಕ್ಷ್ಮ ಪಂಚಗಳಾಗಲಿ ನಾನಲ್ಲ. ಆದರೆ ಚಿದಾನಂದ ಸ್ವರೂಪನಾದ, ಮಂಗಳಾತ್ಮಕವಾದ, ತತ್ವ ವಾವುದುಂಟೋ, ಅದೇ ನನ್ನ ಸ್ವರೂಪ. ಅಂದರೆ ನಿತ್ಯವಾದಸತ್ ಚಿತ್ ಸುಖಸ್ವರೂಪ ಎನಿಸಿದ ಪರಮಾತ್ಮತತ್ವವೇ ನನ್ನ ನಿಜವಾದ ಸ್ವರೂಪ.

೨. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಹೆಸರುಳ್ಳ ಪಂಚಪ್ರಾಣವಾಯುಗಳು ನಾನಲ್ಲ;  ನಮ್ಮ ದೇಹ ರಚನೆಗೆ ಅತ್ಯಾವಶ್ಯಕವೆನಿಸಿದ ವಾತ, ಪಿತ್ತ, ರಕ್ತ, ಮಾಂಸ, ನರ, ಅಸ್ತಿ, ಮಜ್ಜೆ, ಎಂಬುವ ಸಪ್ತ ಧಾತುಗಳು ನನ್ನ ಸ್ವರೂಪವಲ್ಲ ; ಅನ್ನಮಯ, ಪ್ರಾಣಾಯಮ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಎಂಬ ಹೆಸರಿನ ಪಂಚಕೋಶಗಳು ನಾನಲ್ಲ; ವಾಕ್, ಪಾಣಿ, ಪಾದ, ವಾಯು, ಉಪಸ್ಥೆಗಳೆಂಬ ಈ ಕರ್ಮೇಂದ್ರಿಯಗಳೂ ನನ್ನ ಸ್ವರೂಪವಲ್ಲ, ಆದರೆ ಚಿದಾನಂದಸ್ವರೂಪವೆನಿಸಿದ ಪರಶಿವನೆಂಬ ಪರಮಾತ್ಮ ಸ್ವರೂಪವೇ ನಾನು.

೩. ದ್ವೇಷಾನುರಾಗಗಳಾಗಲಿ, ಲೋಭಮೋಹಗಳಾಗಲಿ, ಮದಮಾತ್ಸರ್ಯಗಳಾಗಲಿ, ಎಂದಿಗೂ ನನ್ನನ್ನಂಟವು ;ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ, ಚರ್ತುವಿಧ ಪುರುಷಾರ್ಥಗಳು ನನ್ನ ಸ್ವರೂಪವಲ್ಲ, ನಾನಾದರೋ, ಚಿದಾನಂದಮೂರ್ತಿಯೆನಿಸಿದ ಸರ್ವ ಮಂಗಳಾತ್ಮಕವಾದ ಶಿವಸ್ವರೂಪವೇ ಹೌದು.

೪. ಪುಣ್ಯ ಪಾಪಗಳು, ಸುಖ ದುಃಖಗಳು, ತೀರ್ಥ ಮಂತ್ರಾದಿಗಳು, ವೇದ ಯಜ್ಞಗಳು, ಇವೊಂದು ನಾನಲ್ಲ. ನಾನು ಭೋಜನವಾಗಲಿ, ಭೋಜ್ಯವಾದ ವಸ್ತುವಾಗಲಿ, ಇಲ್ಲವೇ ಭೋಕ್ತನಾಗಲಿ ಅಲ್ಲ. ಆದರೆ ಚಿದಾನಂದ ಸ್ವರೂಪನೆನೆಸಿ ಮಂಗಳಮೂರ್ತಿಯಾದ ಪರಶಿವ ಸ್ವರೂಪವೇ ನಾನು.

೫. ನನಗೆ ಮರಣದ ಭಯವಿಲ್ಲ, ಜಾತಿಭೇದವೆಂಬುದು ನನಗಿಲ್ಲ; ನನಗೆ ತಂದೆಯು ಇಲ್ಲ, ತಾಯಿಯೂ ಇಲ್ಲವೆಂಬುವಾಗ ನನಗೆ ಜನ್ಮವೆಂಬುದುದೆಲ್ಲಿಯದು ? ನನಗೆ ಬಂಧು – ಬಳಗಗಳಿಲ್ಲ ; ಮಿತ್ರನಿಲ್ಲ, ಗುರು ಇಲ್ಲ, ಶಿಷ್ಯನು ಇಲ್ಲ, ಸಚ್ಚಿದಾನಂದೈಕರಸಾತ್ಮಕ ವಸ್ತುವಾದ ಪರಶಿವ ಸ್ವರೂಪವೇ ನಾನು.

೬. ನಾನು ವಿಕಲ್ಪರಹಿತನು, ಅಂದರೆ ನನ್ನ ಸ್ವರೂಪಕ್ಕೆ ವ್ಯತ್ಯಾಸಗಳೇ ಇಲ್ಲ. ನನಗೆ ಆಕಾರ – ವಿಕಾರಗಳಿಲ್ಲ ನಾನದಾರೋ ವಿಭುವು ಮಾತ್ರವಲ್ಲದೆ ಸರ್ವೇಂದ್ರಿಯಗಳ ಸರ್ವವ್ಯಾಪಾರಗಳಲ್ಲಿಯೂ, ಅನುಷ್ಠಯುತವಾಗಿ ವ್ಯಾಪಿಸಿರುವ ಸ್ವರೂಪವೇ ನನ್ನದು. ನನಗೆ ಎಲ್ಲವೂ ಸರ್ವಸಮ. ನನಗೆ ಬಂಧನವೇ ಇಲ್ಲದಿರುವಾಗ ಮುಕ್ತಿಯೆಂಬುದೆಲ್ಲಿಯದು ? ಆದರೆ ಚಿದಾನಂದಮಯವಾದ ಪರಮ ಮಂಗಳದಾಯಕವಾದ ಆ ಪರಶಿವ ರೂಪವೇ ನನ್ನ ನಿಜ ಸ್ವರೂಪ.

ಮೇಲಿನ ಆಧ್ಯಾತ್ಮಿಕ ಸ್ತೋತ್ರರತ್ನದ ಸಂಕ್ಷೇಪ ವಿವರಣೆ ಇದು.

ಹಿಂದಿನ ಲೇಖನಹೊಂಗೆ ಮರ
ಮುಂದಿನ ಲೇಖನಹಾಸ್ಯ