ಮನೆ ಸುದ್ದಿ ಜಾಲ ಏ.28ರಂದು ವಿದ್ಯುತ್ ವ್ಯತ್ಯಯ

ಏ.28ರಂದು ವಿದ್ಯುತ್ ವ್ಯತ್ಯಯ

0

ಮಂಡ್ಯ: 66/11 ಕೆ.ವಿ ಕೆ.ಐ.ಎ.ಡಿ.ಬಿ, ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಮಾರ್ಗದಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತುರ್ತು ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿAದ ಏಪ್ರಿಲ್ 28 ರಂದು ಬೆಳಿಗ್ಗೆ 09:00 ರಿಂದ ಸಂಜೆ 6:00 ಗಂಟೆಯವರೆಗೆ ಫ್ಯಾಕ್ಟರಿ ವೃತ್ತ, ಅಸಿಟೇಟ್ ಟೌನ್, ಡಿ.ಜಿ.ದೊಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


 ಶ್ರೀನಿವಾಸಪುರ ಗೇಟ್, ಹನಕೆರೆ ಐ.ಪಿ ವ್ಯಾಪ್ತಿ, ಕೀಲಾರ ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ. ವ್ಯಾಪ್ತಿ, ಬೂದನೂರು, ಭೂತನ ಹೊಸೂರು, ಚನ್ನಪ್ಪನ ದೊಡ್ಡಿ, ಹಂಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.