ಮನೆ ಅಪರಾಧ ಬೈಕ್​ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಬಸ್: ಇಬ್ಬರ ದುರ್ಮರಣ

ಬೈಕ್​ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಬಸ್: ಇಬ್ಬರ ದುರ್ಮರಣ

0

ದಾವಣಗೆರೆ: ದ್ವಿಚಕ್ರ ವಾಹನದಲ್ಲಿ ಮದುವೆ ಮನೆಗೆ ತೆರಳುತ್ತಿದ್ದ ಇಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಆರನೇ ಮೈಲಿಗ್ಗಲು (ತರಳಬಾಳು ನಗರ) ಗ್ರಾಮದಲ್ಲಿ ತಡರಾತ್ರಿ ನಡೆಯಿತು.

Join Our Whatsapp Group

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹದಡಿ ಗ್ರಾಮದ ರಾಜು (38) ಮತ್ತು ರಾಮಪ್ಪ (40) ಮೃತರೆಂದು ಗುರುತಿಸಲಾಗಿದೆ. ಮೃತದೇಹಗಳನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಹದಡಿ ಗ್ರಾಮದಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ದಾವಣಗೆರೆ ಕಡೆಯಿಂದ ಚನ್ನಗಿರಿ ಕಡೆ ಸಂಚರಿಸುತ್ತಿದ್ದ ಬಸ್ ಡಿಕ್ಕಿಯಾಗಿ, ಬಳಿಕ ಮನೆಗೆ ನುಗ್ಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಇಡೀ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಹದಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಪ್ಪ ಹಾಗು ರಾಜು ಆಪ್ತ ಮಿತ್ರರಾಗಿದ್ದು, ತಮ್ಮದೇ ದ್ವಿಚಕ್ರ ವಾಹನದಲ್ಲಿ ಸಂಬಂಧಿಕರ ಮದುವೆಗೆಂದು ದಾವಣಗೆರೆ ಬರುತ್ತಿದ್ದರು. ಈ ವೇಳೆ ಬಸ್ ಯಮನಂತೆ ಎದುರಾಗಿದ್ದು, ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.