ಮೈಸೂರು: ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎ.ಎ ಮತ್ತು 308ಎ.ಬಿ ಅನ್ವಯ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಚುನಾವಣಾ ವೇಳಾಪಟ್ಟಿ:
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಜುಲೈ.6 ರಂದು ಹೊರಡಿಸಲಿದ್ದು, ಜುಲೈ.12 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಜುಲೈ.13 ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕವಾಗಿದ್ದು, ಉಮೇದುವಾರಿಕೆಗಳನ್ನ ಹಿಂತೆಗೆದುಕೊಳ್ಳಲು ಜು.15 ಕಡೆ ದಿನಾಂಕವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಮತದಾನವನ್ನು ಜು.23 ರಂದು (ಬೆಳಿಗ್ಗೆ 7:00 ಯಿಂದ ಸಂಜೆ 5:00 ವರೆಗೆ) ನಡೆಸಲಾಗುವುದು. ಮರು ಮತದಾನದ ಅವಶ್ಯಕತೆಯಿದ್ದರೆ ಜು.25 ರಂದು ಮರು ಮತದಾನವನ್ನು ನಡೆಸಲಾಗುವುದು. ಜು.26 ರಂದು ಮತ ಎಣಿಕೆಯ ಕಾರ್ಯ (ತಾಲೂಕು ಕೇಂದ್ರಗಳಲ್ಲಿ) ನಡೆಸಲಾಗುವುದು.
ಉಪಚುನಾವಣೆ ನಡೆಯುವ 9 ಗ್ರಾಮ ಪಂಚಾಯಿತಿಗಳಲ್ಲಿನ 9 ಸದಸ್ಯ ಸ್ಥಾನಗಳ ವಿವರ:
ನಂಜನಗೂಡು ತಾಲೂಕಿನ ಗ್ರಾ.ಪಂ.ಸಂ-18 ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಷೇ.ಸಂ- 7 ರ ಚಿಕ್ಕ ಕವಲಂದೆ, ಗ್ರಾ.ಪಂ.ಸಂ- 44 ದೇವರಾಯಶೆಟ್ಟಿಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಷೇ.ಸಂ 4 ರ ಹೊಸವೀಡು, ಟಿ.ನರಸೀಪುರ ತಾಲ್ಲೂಕಿನ ಗ್ರಾ.ಪಂ.ಸಂ-25 ಹೆಮ್ಮಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಷೇ.ಸಂ 6 ರ ಅಕ್ಕೂರು, ಹುಣಸೂರು ತಾಲ್ಲೂಕಿನ ಗ್ರಾ.ಪಂ.ಸಂ-4 ಜಾಬಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಷೇ.ಸಂ 2 ರ ಜಾಬಗೆರೆ, ಗ್ರಾ.ಪಂ.ಸಂ-34 ತಟ್ಟೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಷೇ.ಸಂ- 4 ರ ನಿಲುವಾಗಿಲು, ಗ್ರಾ.ಪಂ.ಸಂ-36 ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಷೇ.ಸಂ-2 ರ ಹೆಬ್ಬಾಳು, ಕೆ.ಆರ್.ನಗರ ತಾಲ್ಲೂಕಿನ ಗ್ರಾ.ಪಂ.ಸಂ-17 ಹಬ್ಬಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಷೇ.ಸಂ-3 ರ ಹಂಪಾಪುರ, ಹೆಚ್.ಡಿ.ಕೋಟೆ ತಾಲ್ಲೂಕಿನ ಗ್ರಾ.ಪಂ.ಸಂ-9 ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಷೇ.ಸಂ-3 ರ ಮಾದಾಪುರ, ಗ್ರಾ.ಪಂ.ಸಂ-25 ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಷೇ.ಸಂ 1 ಎನ್.ಬೇಗೂರು ಕ್ಷೇತ್ರಗಳಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಗ್ರಾಮ ಪಂಚಾಯಿತಿ ಉಪಚುನಾವಣೆ-2023ರ ಸಂಬಂಧ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬರು ಚುನಾವಣಾಧಿಕಾರಿ ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಚುನಾವಣಾ ವೇಳಾಪಟ್ಟಿಯಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ನಿಗದಿಪಡಿಸಿರುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವೇಳಾಪಟ್ಟಿಯಂತೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು.
ನಿಯಂತ್ರಣ ಕೊಠಡಿಗಳ ಸ್ಥಾಪನೆ:
ಗ್ರಾಮ ಪಂಚಾಯಿತಿ ಉಪಚುನಾವಣೆ-2023ರ ಸಂಬOಧ ಯಾವುದೇ ಮಾಹಿತಿಗಳು ಹಾಗೂ ದೂರುಗಳ ನಿರ್ವಹಣೆಗಾಗಿ ನಿಯಂತ್ರಣಾ ಕೊಠಡಿಗಳು ಸ್ಥಾಪಿಸಲಾಗಿದ್ದು ದೂರು ಅಥವಾ ಮಾಹಿತಿಯನ್ನು ನೀಡಲು ನಿಯಂತ್ರಣ ಕೊಠಡಿಗಳ ದೂರವಾಣಿಯನ್ನು ಸಂಪರ್ಕಿಸಬಹುದು.
ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ಕಂಟ್ರೋಲ್ ರೂಂ ದೂ. ಸಂ.1077, ಮೈಸೂರು ಉಪ ವಿಭಾಗದ ದೂ.ಸಂ.0821-2422100, ಹುಣಸೂರು ಉಪ ವಿಭಾಗದ ದೂ.ಸಂ.08222-252073, ನಂಜನಗೂಡು ತಾಲ್ಲೂಕು ಕಚೇರಿಯ ದೂ.ಸಂ.0821-223108, ಟಿ.ನರಸೀಪುರ ತಾಲ್ಲೂಕು ಕಚೇರಿಯ ದೂ.ಸಂ.08227-260210, ಕೆ.ಆರ್.ನಗರ ತಾಲ್ಲೂಕು ಕಚೇರಿಯ ದೂ.ಸಂ.08223-262234, ಹುಣಸೂರು ತಾಲ್ಲೂಕು ಕಚೇರಿಯ ದೂ.ಸಂ.08222-252959 ಮತ್ತು ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿಯ ದೂ.ಸಂ.08228-255600 ಅನ್ನು ಸಂಪರ್ಕಿಸಬಹುದು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308 ಎ.ಸಿ ರಂತೆ ಚುನಾವಣೆ ನೀತಿ ಸಂಹಿತೆಯು ಜುಲೈ 6 ರಿಂದ ಜುಲೈ 26 ರವರೆಗೆ ಜಾರಿಯಲ್ಲಿದ್ದು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯವರೆಗೆ ಎಲ್ಲಾ ಮಧ್ಯದ ಅಂಗಡಿಗಳನ್ನು ಮತ್ತು ಮಧ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು ಅಧಿ ಬೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು.
ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾಮ ಪಂಚಾಯತಿ ಚುನಾವಣೆಗಳ ಮತಪತ್ರದಲ್ಲಿ NOTA ಎಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ.
ಚುನಾವಣಾ ಪ್ರಕ್ರಿಯೆ ಹಾಗೂ ಮತದಾನ ಶಾಂತಿಯುತವಾಗಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ಮತದಾರರು ಈ ಚುನಾವಣೆಯನ್ನು ಮುಕ್ತವಾಗಿ, ನಿಷ್ಪಕ್ಷಪಾತವಾಗಿ, ಶಾಂತಿಯುತವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.