ಮನೆ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಯಾಬಿನೆಟ್ ಪುನಾರಚನೆ – ಸಿಎಂ ನಿವಾಸಕ್ಕೆ ಶಾಸಕರ ದಂಡು

ಕಾಂಗ್ರೆಸ್‌ನಲ್ಲಿ ಕ್ಯಾಬಿನೆಟ್ ಪುನಾರಚನೆ – ಸಿಎಂ ನಿವಾಸಕ್ಕೆ ಶಾಸಕರ ದಂಡು

0

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಕ್ಯಾಬಿನೆಟ್ ಪುನಾರಚನೆ ಬಿಸಿ ಜೋರಾಗಿಯೇ ಇದ್ದು, ಸಿಎಂ ದೆಹಲಿ ಭೇಟಿಗೂ ಮುನ್ನ ಹಲವು ಶಾಸಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾವೇರಿ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯರನ್ನು ಮಾತನಾಡಿಸಿದ ಹಲವು ಶಾಸಕರು ಸಚಿವ ಸ್ಥಾನಕ್ಕೆ ಟವಲ್ ಹಾಕಿದ್ದಾರೆ. ಶಾಸಕರಾದ ನರೇಂದ್ರಸ್ವಾಮಿ, ಬಿ.ಆರ್.ಪಾಟೀಲ್, ವಿಜಯಾನಂದ ಕಾಶಪ್ಪನವರ್, ಅಶೋಕ್ ಪಟ್ಟಣ, ಪೊನ್ನಣ್ಣ ಸೇರಿದಂತೆ ಹಲವರು ಭೇಟಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಅದಕ್ಕಾಗಿ ಸಿಎಂ ಭೇಟಿ ಮಾಡಿದ್ದೇನೆ. ಸಿಎಂ ನೋಡೋಣ ಕಾಲ ಬಂದಾಗ ಮಾಡೋಣ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾನು, ನಮ್ಮ ತಂದೆ, ತಾಯಿ ಭದ್ರ ಬುನಾದಿಯಾಗಿದ್ದೇವೆ.

ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ. ಸಿಎಂ, ಡಿಸಿವಿ, ಕೆಸಿವಿ, ಸುರ್ಜೇವಾಲಾಗೆ ಮನವಿ ಮಾಡಿದ್ದೇನೆ. ಖರ್ಗೆಯವರಿಗೂ ಮನವಿ ಮಾಡಿದ್ದೇನೆ. ದೇವರು ಇಲ್ಲಿ ಇರಬೇಕಾದ್ರೆ ನಾನು ಬೇರೆ ಎಲ್ಲಿಗೆ ಹೋಗಲಿ, ದೇವರು ಇಲ್ಲೇ ಇದ್ದಾರಲ್ಲ, ಸಿದ್ದರಾಮಯ್ಯನೇ ನಮ್ಮ ದೇವರು, ಡಿಕೆ ಶಿವಕುಮಾರೇ ನಮ್ಮ ದೇವರು ಎಂದು ಹೇಳಿದ್ದಾರೆ.